Sandalwood Film: ಸುಳ್ಯದ ಯುವಕನ ಕನ್ನಡ ಚಿತ್ರ ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆಗೆ! | New Sandalwood Movie Bhaava Teera Yaana ready to release on February 21st

Sandalwood Film: ಸುಳ್ಯದ ಯುವಕನ ಕನ್ನಡ ಚಿತ್ರ ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆಗೆ! | New Sandalwood Movie Bhaava Teera Yaana ready to release on February 21st

Last Updated:

ಪ್ರೀತಿಯ ಹೊಸ ಆಯಾಮವನ್ನು ಸಂಪೂರ್ಣ ಮನೋರಂಜನೆಯ ಮೂಲಕ ಪ್ರೇಕ್ಷಕರ ಮುಂದಿಡುವ ಪ್ರಯತ್ನವನ್ನು ಈ ಚಿತ್ರ ಮಾಡಿದೆ. ಸುಮಾರು 28 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಬೆಂಗಳೂರು, ಮಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಸಕಲೇಶಪುರ, ಸುಳ್ಯ ಮೊದಲಾದ ಕಡೆಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಮತ್ತೋರ್ವ ಯುವಕನ ಚೊಚ್ಚಲ ಚಿತ್ರ ಫೆಬ್ರವರಿ 21 ರಂದು ತೆರೆಗೆ ಬರಲು ಸಿದ್ಧತೆ ನಡೆಸಿದೆ. ಸುಳ್ಯದ ಯುವಕ ಮಯೂರ್ ಅಂಬೆಕಲ್ಲು(Mayur Ambekallu) ಮತ್ತು ತೇಜಸ್ ಕಿರಣ್ ನಿರ್ದೇಶನದ ʼಭಾವ ತೀರ ಯಾನʼ (Bhaava Teera Yaana) ಎಂಬ ಹೆಸರಿನ ಕನ್ನಡ ಚಿತ್ರ (Sandalwood Film) ಸಿನಿರಸಿಕರ ಮನಸೆಳೆಯಲು ಅಣಿಯಾಗಿದೆ. ಫೆಬ್ರವರಿ 21 ರಂದು ರಾಜ್ಯದಾದ್ಯಂತ ತೆರೆ ಕಾಣಲಿರುವ ಈ ಚಿತ್ರದಲ್ಲಿ ಪ್ರಸಿದ್ಧ ಹಿರಿಯ ನಟ ರಮೇಶ್ ಭಟ್(Veteran Actor Ramesh Bhat) ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ.

ಇನ್ನು, ಚಿತ್ರದಲ್ಲಿ ಇಬ್ಬರು ನಟಿಯರಿದ್ದು, ಇಬ್ಬರಿಗೂ ಈ ಚಿತ್ರ ಚಲನಚಿತ್ರರಂಗದಲ್ಲಿ ಹೊಸ ಅವಕಾಶಗಳನ್ನು ತೆರೆದುಕೊಡುವಂತಹ ಚೊಚ್ಚಲ ಚಿತ್ರವಾಗಿದೆ. ಆರೋಹಿ ನೈನ, ಅನೂಷಾ ಕೃಷ್ಣ ಇದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಹಿರಿಯ ನಟರಾದ ವಿದ್ಯಾಮೂರ್ತಿ, ವಿಭಾ ಡೋಂಗ್ರೆ, ಚಂದನಾ ಅನಂತಕೃಷ್ಣ, ಸಂದೀಪ್ ರಾಜಗೋಪಲಗ, ಸಿತಾರಾ, ಶ್ರೀನಿವಾಸ ಕೆಮ್ತಾರ್, ಶಮಾತ್ಮಿಕ ಮೊದಲಾದವರು ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ: Sea Turtle: ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಕಡಲಾಮೆಗಳು ಮೊಟ್ಟೆ ಇಡುವ ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ!

ಪ್ರೀತಿ ಎಂಬ ವಿಷಯದ ಸುತ್ತ ಸಾಗುವ ಈ ಚಿತ್ರ ಸುಂದರವಾದ ಪ್ರೇಮಕಥೆಯನ್ನು ಹೊಂದಿದೆ. 6 ವರ್ಷದಿಂದ 60 ವರ್ಷದವರೆಗಿನ ಪ್ರತಿಯೊಬ್ಬರಿಗೂ ಆಪ್ತವೆನಿಸುವಂತಹ ರೀತಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಪ್ರೀತಿಯ ಹೊಸ ಆಯಾಮವನ್ನು ಸಂಪೂರ್ಣ ಮನೋರಂಜನೆಯ ಮೂಲಕ ಪ್ರೇಕ್ಷಕರ ಮುಂದಿಡುವ ಪ್ರಯತ್ನವನ್ನು ಈ ಚಿತ್ರ ಮಾಡಿದೆ. ಸುಮಾರು 28 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಬೆಂಗಳೂರು, ಮಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಸಕಲೇಶಪುರ, ಸುಳ್ಯ ಮೊದಲಾದ ಕಡೆಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ.

ಮೊದಲು ಈ ಚಿತ್ರವನ್ನು ಕಿರು ಚಿತ್ರವನ್ನಾಗಿ ನಿರ್ಮಿಸಲಾಗಿತ್ತು. ಈ ಶಾರ್ಟ್‌ ಫಿಲ್ಮ್‌ಗೆ ಅದ್ಬುತ ಪ್ರೋತ್ಸಾಹ ಸಿಕ್ಕ ಹಿನ್ನೆಲೆ, ದೊಡ್ಡ ಪರದೆಗೆ ತರಲು ಮುಂದಾಗಿದೆ ಚಿತ್ರ ತಂಡ. ಈ ಸಿನಿಮಾಗೆ ಶಿವಶಂಕರ್ ನೂರಂಬಡ ಛಾಯಾಗ್ರಹಣ ಮಾಡಿದ್ದರೆ, ಮಯೂರು ಅಂಬೆಕಲ್ಲು ಸಂಗೀತ ಸಂಯೋಜಿಸಿದ್ದಾರೆ.