Sanju Samson: ಐಪಿಎಲ್ ಬಳಿಕ ಮತ್ತೊಂದು ಲೀಗ್‌ನಲ್ಲಿ ಆಡಲಿರುವ ಸ್ಯಾಮ್ಸನ್! ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ | Sanju Samson joins Kochi Blue Tigers after IPL 2025 Rajasthan Royals

Sanju Samson: ಐಪಿಎಲ್ ಬಳಿಕ ಮತ್ತೊಂದು ಲೀಗ್‌ನಲ್ಲಿ ಆಡಲಿರುವ ಸ್ಯಾಮ್ಸನ್! ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ | Sanju Samson joins Kochi Blue Tigers after IPL 2025 Rajasthan Royals

Last Updated:

ಟೀಂ ಇಂಡಿಯಾದ ಟಿ20ಐ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಐಪಿಎಲ್ 2025 ಮುಗಿದ ಒಂದು ತಿಂಗಳ ನಂತರ ಹೊಸ ತಂಡವನ್ನು ಸೇರಿಕೊಂಡಿದ್ದಾರೆ. ಯಾವ ಟೂರ್ನಿಯಲ್ಲಿ ಸಂಜು ಆಡಲಿದ್ದಾರೆ ಗೊತ್ತಾ?

ಸಂಜು ಸ್ಯಾಮ್ಸನ್ ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್

ಭಾರತ ಟಿ20ಐ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (Sanju Samson) ಐಪಿಎಲ್ 2025 (IPL 2025) ಮುಗಿದ ಒಂದು ತಿಂಗಳ ನಂತರ ಹೊಸ ತಂಡವನ್ನು ಸೇರಿಕೊಂಡಿದ್ದಾರೆ. ಭಾರತದ ಟಿ20ಐ (Team India) ಆರಂಭಿಕ ಆಟಗಾರ ಕೇರಳ ಪ್ರೀಮಿಯರ್ ಲೀಗ್‌ನ (KPL) ಎರಡನೇ ಆವೃತ್ತಿಯಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ (Kocchi Blue Tigers) ಪರ ಆಡಲಿದ್ದಾರೆ. ಲೀಗ್ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 3 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಅವರನ್ನು 26.80 ಲಕ್ಷಕ್ಕೆ ಬ್ಲೂ ಟೈಗರ್ಸ್ ಫ್ರಾಂಚೈಸಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು.

ಒಟ್ಟಾರೆಯಾಗಿ ಒಂದು ತಂಡ 50 ಲಕ್ಷ ರೂಪಾಯಿ ಖರ್ಚು ಮಾಡುವ ಅವಕಾಶವಿದ್ದು, ಕೊಚ್ಚಿ ಬ್ಲೂ ಟೈಗರ್ಸ್ ಅರ್ಧಕ್ಕಿಂತ ಅಧಿಕ ಮೊತ್ತವನ್ನು ಸಂಜು ಸ್ಯಾಮ್ಸನ್ ಒಬ್ಬರಿಗೆ ನೀಡಿದ್ದಾರೆ. ಟಿ20 ಲೀಗ್ ಆಗಸ್ಟ್ 21 ರಿಂದ ಸೆಪ್ಟೆಂಬರ್ 6 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಭಾರತ ಯಾವುದೇ ಟಿ20ಐ ಆಡುವುದಿಲ್ಲ.

ಒಂದುವೇಳೆ ಸಂಜು ಸ್ಯಾಮ್ಸನ್ ದುಲೀಪ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದರೆ ಟಿ-20 ಲೀಗ್‌ನ ಬಹುಪಾಲು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಪ್ರಮುಖ ದೇಶೀಯ ರೆಡ್-ಬಾಲ್ ಟೂರ್ನಮೆಂಟ್ ಆಗಸ್ಟ್ 28 ರಂದು ಆರಂಭವಾಗಲಿದೆ. ಸಂಜು ಹಿಂದಿನ ವರ್ಷದ ಟೂರ್ನಮೆಂಟ್‌ನಲ್ಲಿ ಭಾರತ ಡಿ ತಂಡದ ಭಾಗವಾಗಿದ್ದರು.

ಇನ್ನೂ ಈ ಟೂರ್ನಮೆಂಟ್‌ನಲ್ಲಿ ಕೆಲವು ಸ್ಟಾರ್ ಆಟಗಾರರು ಕೂಡ ಭಾಗವಹಿಸಲಿದ್ದಾರೆ. ಐಪಿಎಲ್‌ನಲ್ಲಿ ಆಡಿರುವ ಕೇರಳದ ಬ್ಯಾಟ್ಸ್‌ಮನ್ ವಿಷ್ಣು ವಿನೋದ್ 13.8 ಲಕ್ಷ ರೂಪಾಯಿಗಳಿಗೆ ಏರೀಸ್ ಕೊಲ್ಲಂ ತಂಡವನ್ನು ಸೇರಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್ ದಂತಕಥೆ ಜಲಜ್ ಸಕ್ಸೇನಾ ಅವರು 12.4 ಲಕ್ಷ ರೂಪಾಯಿಗೆ ಅಲೆಪ್ಪಿ ರಿಪ್ಪಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಅವರು ಭಾರತ ಎ ತಂಡದ ಪರ ಆಡಿದ್ದಾರೆ.

ರಾಜಸ್ಥಾನ ತೊರೆದು ಸಿಎಸ್‌ಕೆ ಸೇರ್ತಾರ ಸಂಜು

ಕ್ರಿಕ್‌ಬಝ್‌ನ ವರದಿಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸಂಜು ಸ್ಯಾಮ್ಸನ್‌ನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿಯನ್ನು ಖಚಿತಪಡಿಸಿದೆ. CSKನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡುತ್ತಾ, “ನಾವು ಖಂಡಿತವಾಗಿಯೂ ಸಂಜು ಸ್ಯಾಮ್ಸನ್‌ನತ್ತ ಗಮನ ಹರಿಸಿದ್ದೇವೆ. ಅವರು ಭಾರತೀಯ ಬ್ಯಾಟ್ಸ್‌ಮನ್, ವಿಕೆಟ್‌ಕೀಪರ್, ಮತ್ತು ಆರಂಭಿಕ ಆಟಗಾರ. ಒಂದು ವೇಳೆ ಅವರು ಲಭ್ಯರಿದ್ದರೆ, ನಾವು ಖಂಡಿತವಾಗಿಯೂ ಅವರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಆಯ್ಕೆಯನ್ನು ಪರಿಶೀಲಿಸುತ್ತೇವೆ. ಆದರೆ, ಯಾರನ್ನು ಟೇಡಿಂಗ್ ಮಾಡಬೇಕು ಎಂಬ ತೀರ್ಮಾನವನ್ನು ಇನ್ನೂ ತೆಗೆದುಕೊಂಡಿಲ್ಲ, ಏಕೆಂದರೆ ಈ ವಿಷಯವು ಇನ್ನೂ ಆ ಹಂತಕ್ಕೆ ತಲುಪಿಲ್ಲ,” ಎಂದು ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್‌ ಮೇಲೆ CSK ಆಸಕ್ತಿ ತೋರಿಸುತ್ತಿರುವುದಕ್ಕೆ ಪ್ರಮುಖ ಕಾರಣವೆಂದರೆ, ಅವರ ಬ್ಯಾಟಿಂಗ್ ಸಾಮರ್ಥ್ಯ, ವಿಕೆಟ್‌ಕೀಪಿಂಗ್ ಕೌಶಲ್ಯ, ಮತ್ತು ಆರಂಭಿಕ ಸ್ಥಾನದಲ್ಲಿ ಆಡುವ ಸಾಮರ್ಥ್ಯ. ಇದರ ಜೊತೆಗೆ, CSKನ ದಿಗ್ಗಜ ಆಟಗಾರ ಎಂಎಸ್ ಧೋನಿಯವರ ಐಪಿಎಲ್ ವೃತ್ತಿಜೀವನವು ಕೊನೆಯ ಹಂತದಲ್ಲಿದ್ದು, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ನ ಸ್ಥಾನವನ್ನು ಭರ್ತಿಮಾಡಲು ಸಂಜು ಸೂಕ್ತ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ, ಸ್ಯಾಮ್ಸನ್‌ನ ನಾಯಕತ್ವ ಕೌಶಲ್ಯವು CSKಗೆ ಭವಿಷ್ಯದ ನಾಯಕನಾಗಲು ಸೂಕ್ತ ಆಯ್ಕೆಯಾಗಿದೆ. ವಿಶೇಷವಾಗಿ ಪ್ರಸ್ತುತ ನಾಯಕ ಋತುರಾಜ್ ಗಾಯಕ್ವಾಡ್‌ನ ನಾಯಕತ್ವದಲ್ಲಿ CSK 2025ರ ಋತುವಿನಲ್ಲಿ 10 ತಂಡಗಳಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದರಿಂದ ಸಂಜು ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ.