Sarfaraz Khan: ಸರ್ಫರಾಜ್ ಖಾನ್ ಭಾರತ ಎ ತಂಡಕ್ಕೆ ಆಯ್ಕೆಯಾಗದಿರಲು ಪಂತ್ ಕಾರಣವಾದ್ರ? ಇಲ್ಲಿದೆ ಅಚ್ಚರಿ ಮಾಹಿತಿ | | ಕ್ರೀಡೆ

Sarfaraz Khan: ಸರ್ಫರಾಜ್ ಖಾನ್ ಭಾರತ ಎ ತಂಡಕ್ಕೆ ಆಯ್ಕೆಯಾಗದಿರಲು ಪಂತ್ ಕಾರಣವಾದ್ರ? ಇಲ್ಲಿದೆ ಅಚ್ಚರಿ ಮಾಹಿತಿ | | ಕ್ರೀಡೆ

Last Updated:

ಪಂತ್ ನಾಯಕನಾಗಿರುವುದರಿಂದ ಸರ್ಫರಾಜ್ ಅವರನ್ನು ತಂಡದಿಂದ ಕೈಬಿಟ್ಟಿದ್ದಾರಾ? ಖಂಡಿತಾ ಕಾರಣ ಅದಲ್ಲ. ತಂಡದ ಸ್ಲಾಟ್‌ಗಳಲ್ಲಿ ಸರ್ಫರಾಜ್ಗೆ ಸರಿಹೊಂದದಿರುವುದಾಗಿದೆ. ಪಂತ್ ಸರ್ಫರಾಜ್ ಖಾನ್ ಅವರಂತೆಯೇ ಬ್ಯಾಟಿಂಗ್ ಮಾಡುತ್ತಾರೆ. ಅದಕ್ಕಾಗಿಯೇ ಪಂತ್ ಅವರ ಮರಳುವಿಕೆ ಸರ್ಫರಾಜ್ ಅವರನ್ನು ಹೊರಗುಳಿಯುವಂತೆ ಮಾಡಿದೆ.

ಸರ್ಫರಾಜ್ ಖಾನ್
ಸರ್ಫರಾಜ್ ಖಾನ್

ದಕ್ಷಿಣ ಆಫ್ರಿಕಾ ಎ (South Africa A) ವಿರುದ್ಧದ 4 ದಿನಗಳ ಟೆಸ್ಟ್ ಸರಣಿಗೆ ಭಾರತ ಎ (India A) ತಂಡ ಘೋಷಣೆಯಾಗಿದ್ದು, ಸರ್ಫರಾಜ್ ಖಾನ್ (Sarfaraz Khan ಆಯ್ಕೆಯಾಗದಿರುವುದು ದೊಡ್ಡ ವಿವಾದಕ್ಕೆ ದಾರಿಮಾಡಿಕೊಟ್ಟಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಎ ತಂಡದ ಭಾಗವಾಗಿದ್ದ ಸರ್ಫರಾಜ್ ಅವರನ್ನು ದಕ್ಷಿಣ ಆಫ್ರಿಕಾ ಎ ವಿರುದ್ಧದ ತಂಡದಲ್ಲಿ ಸೇರಿಸಲಾಗಿಲ್ಲ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ ಮತ್ತು ನಾಯಕನಾಗಿ ನೇಮಕಗೊಂಡಿದ್ದಾರೆ, ಆದರೆ ಸರ್ಫರಾಜ್ ಅವರನ್ನು ತಂಡದಿಂದ ಕೈಬಿಡಲು ಪಂತ್ ಕಾರಣ ಎಂದು ಈಗ ಹೇಳಲಾಗುತ್ತಿದೆ.

ಪಂತ್ಗೂ-ಸರ್ಫರಾಜ್ ಆಯ್ಕೆಯಾಗದಿರುವುದಕ್ಕೆ ಏನೂ ಸಂಬಂಭ?

ಪಂತ್ ನಾಯಕನಾಗಿರುವುದರಿಂದ ಸರ್ಫರಾಜ್ ಅವರನ್ನು ತಂಡದಿಂದ ಕೈಬಿಟ್ಟಿದ್ದಾರಾ? ಖಂಡಿತಾ ಕಾರಣ ಅದಲ್ಲ. ತಂಡದ ಸ್ಲಾಟ್‌ಗಳಲ್ಲಿ ಸರ್ಫರಾಜ್ಗೆ ಸರಿಹೊಂದದಿರುವುದಾಗಿದೆ. ಪಂತ್ ಸರ್ಫರಾಜ್ ಖಾನ್ ಅವರಂತೆಯೇ ಬ್ಯಾಟಿಂಗ್ ಮಾಡುತ್ತಾರೆ. ಅದಕ್ಕಾಗಿಯೇ ಪಂತ್ ಅವರ ಮರಳುವಿಕೆ ಸರ್ಫರಾಜ್ ಅವರನ್ನು ಹೊರಗುಳಿಯುವಂತೆ ಮಾಡಿದೆ.

ಸರ್ಫರಾಜ್​ಗೆ ಸೂಕ್ತ ಸ್ಥಾನ ಸಿಗುತ್ತಿಲ್ಲ

ಪ್ರಸ್ತುತ ಭಾರತೀಯ ಟೆಸ್ಟ್ ತಂಡದಲ್ಲಿ ಸರ್ಫರಾಜ್ ಸ್ಥಾನ ಪಡೆಯುವುದು ಕಷ್ಟಕರವೆಂದು ತೋರುತ್ತದೆ. ತಂಡದ ಸ್ಥಾನಗಳನ್ನು ನೋಡಿದರೆ, ಅವರಿಗೆ ಎಲ್ಲಿಯೂ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆರಂಭಿಕ ಸ್ಥಾನದಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಸಾಯಿ ಸುದರ್ಶನ್ ಅವರನ್ನು ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧಪಡಿಸುತ್ತಿದ್ದರೆ, ತಂಡದ ನಾಯಕ ಶುಭ್​ಮನ್ ಗಿಲ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಲಭ್ಯವಿರುವ ಏಕೈಕ ಸ್ಥಾನವೆಂದರೆ ಐದನೇ ಸ್ಥಾನ, ಅಲ್ಲಿ ಅವರು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್‌ಗಳನ್ನು ಗಳಿಸಿದ್ದಾರೆ. ಆದರೆ ಭಾರತ ತಂಡದಲ್ಲಿ ರಿಷಭ್ ಪಂತ್ ಆ ಸ್ಥಾನವನ್ನ ಬಹುದಿನಗಳಿಂದ ತುಂಬುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ, ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಅವರಂತಹ ಆಲ್​ರೌಂಡರ್​ ಆಟಗಾರರಿದ್ದಾರೆ. ಆದ್ದರಿಂದ, ಸರ್ಫರಾಜ್ ಎಂಟನೇ ಸ್ಥಾನದಲ್ಲಿ ಆಡುವುದರಲ್ಲಿ ಅರ್ಥವಿಲ್ಲ. ಸ್ಲಾಟ್ ಕೊರತೆಯಿಂದಾಗಿ ಅವರಿಗೆ ಅವಕಾಶ ಸಿಗದಿರಲು ಇದು ನಿಜವಾದ ಕಾರಣ ಎಂದು ತಿಳಿದುಬಂದಿದೆ.

5ನೇ ಸ್ಥಾನಕ್ಕೆ 8 ಆಟಗಾರರಿಂದ ಪೈಪೋಟಿ

ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಮತ್ತು ನಿತೀಶ್ ರೆಡ್ಡಿ, ಜುರೆಲ್ ಸೇರಿ 8 ಆಟಗಾರರು ಈ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ. ಸಧ್ಯಕ್ಕೆ ಎಲ್ಲರೂ ಫಿಟ್ ಆಗಿದ್ದಾರೆ ಮತ್ತು ಲಭ್ಯವಿದ್ದಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ಆಲ್‌ರೌಂಡರ್‌ಗಳಾಗಿ ಸ್ಥಾನ ಪಡೆಯುತ್ತಾರೆ. ಪಂತ್ ಗಾಯಗೊಂಡಾಗ, ಧ್ರುವ್ ಜುರೆಲ್ 5 ಅಥವಾ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಾರೆ.

ಇದನ್ನೂ ಓದಿ: IND vs AUS: ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಗಂಭೀರ್ ಪ್ರೀತಿಯ ಶಿಷ್ಯ ಔಟ್? ಪ್ಲೇಯಿಂಗ್​ XIನಲ್ಲಿ ಕನ್ನಡಿಗನಿಗೆ ಚಾನ್ಸ್?

ವಾಸ್ತವವಾಗಿ, ನ್ಯೂಜಿಲೆಂಡ್ ವಿರುದ್ಧ ಸ್ಪಿನ್ನರ್ ಸ್ನೇಹಿ ಪಿಚ್‌ನಲ್ಲಿ ಸರ್ಫರಾಜ್ ಅವರ ಸತತ ನಾಲ್ಕು ವೈಫಲ್ಯಗಳು ಅವರನ್ನು ತಂಡದಿಂದ ಹೊರಗಿಡಲು ಕಾರಣವಾಯಿತು. ಟೆಸ್ಟ್ ತಂಡದ ಬ್ಯಾಟಿಂಗ್ ಸ್ಥಾನಗಳಾದ 1, 2 ಮತ್ತು 4ನೇ ಸ್ಥಾನಗಳು ಈಗ ಸ್ಥಿರವಾಗಿವೆ ಮತ್ತು 5 ರಿಂದ 8ನೇ ಸ್ಥಾನಗಳು ಆಲ್‌ರೌಂಡರ್‌ಗಳಿಗೆ (ಬ್ಯಾಟ್ಸ್‌ಮನ್‌ಗಳು ಸೇರಿದಂತೆ) ಮೀಸಲಾಗಿವೆ. ಉಳಿದಿರುವ ಏಕೈಕ ಸ್ಥಾನ 3ನೇ ಸ್ಥಾನ ಮಾತ್ರ. ಸರ್ಫರಾಜ್ ಖಾನ್ ಈ ಋತುವಿನಲ್ಲಿ ಮುಂಬೈ ನಾಯಕ ರಹಾನೆಯ ಮನವೊಲಿಸಿ ಆ ಸ್ಥಾನದಲ್ಲಿ ಆಡಲು ಅವಕಾಶ ಪಡೆದು, ರನ್​ಗಳಿಸಿದರೆ ಮಾತ್ರ ತಂಡದಲ್ಲಿ ಆಡುವ ಅವಕಾಶ ಸಿಗಬಹುದು ಎಂದು ಕೆಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.