Last Updated:
ಆಲಿವ್ ರಿಡ್ಲೆ ಆಮೆಗಳು ನಾಚಿಗೆ ಸ್ವಭಾವದವು. ಜೊತೆಗೆ ಇವುಗಳ ಸಂಚಾರ ನಿಧಾನ. ಮಧ್ಯ ರಾತ್ರಿ, ಮುಂಜಾನೆ ತೀರಕ್ಕೆ ದೊಡ್ಡ ಅಲೆಗಳ ಮೇಲೆ ಜಾರಿ ಜತೆಯಾಗಿ ಬಂದು ಮೊಟ್ಟೆ ಇರಿಸಿ ಸಮುದ್ರಕ್ಕೆ ಮರಳುತ್ತವೆ. ಮೊಟ್ಟೆ ಇಟ್ಟ ಬಳಿಕ ಈ ಆಮೆಗಳು ಮತ್ತೆ ದಡಕ್ಕೆ ಬರೋದಿಲ್ಲ. ಮೊಟ್ಟೆಗಳು ತಾವಾಗಿಯೇ ಒಡೆದು ಮರಿಯಾಗುತ್ತವೆ.
ದಕ್ಷಿಣ ಕನ್ನಡ: ಮಂಗಳೂರಿನ ಸಸಿಹಿತ್ಲು ಕಡಲ ಕಿನಾರೆಯಲ್ಲಿ(Sasihithlu Beach) ಅಪರೂಪದ ಕಡಲಾಮೆಗಳು ಕಾಣಿಸಿಕೊಂಡಿವೆ. ಅಳಿವಿನಂಚಿನಲ್ಲಿರುವ ಅತ್ಯಂತ ಅಪರೂಪದ ಕಡಲಾಮೆ ಆಲಿವ್ ರಿಡ್ಲೆಗಳು (Olive Ridley Sea Turtle) ಮಂಗಳೂರಿನ ಕಡಲ ಕಿನಾರೆಗೆ ಆಗಮಿಸಿ ಮೊಟ್ಟೆ ಇಟ್ಟಿವೆ. ಕಡಲ ತಡಿಗೆ ಬಂದು ಮೊಟ್ಟೆ ಇಟ್ಟಿರುವ ಕಡಲಾಮೆಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರು ವಿಶೇಷ ನಿಗಾ ವಹಿಸಿದ್ದಾರೆ. ಮಂಗಳೂರಿನ(Mangaluru) ಸುತ್ತಮುತ್ತ ಸುಮಾರು 12 ಕಡೆಗಳಲ್ಲಿ ಈ ಹಿಂದೆ ಆಮೆ ಮೊಟ್ಟೆಗಳು ಪತ್ತೆಯಾಗಿದ್ದವು. ಈ ಆಮೆಗಳ ವಿಶೇಷತೆಯೆಂದರೆ ತಾವು ಹುಟ್ಟಿರುವ ಜಾಗಕ್ಕೆ ಮರಳಿ ಬಂದು ಮೊಟ್ಟೆಯಿಡುತ್ತವೆ.
ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ತಳಿಯ ಕಡಲಾಮೆಗೆ ಕಾನೂನಿನ ರಕ್ಷಣೆ ನೀಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1ರ ಅಡಿಯಲ್ಲಿ ಈ ಕಡಲಾಮೆಗಳಿಗೆ ರಕ್ಷಿಸಲಾಗುತ್ತಿದೆ. ಮಂಗಳೂರಿನ ನಾಲ್ಕು ಕಡೆ ಆಲಿವ್ ರಿಡ್ಲೆ ಮೊಟ್ಟೆಗಳು ಪತ್ತೆಯಾಗಿದೆ. ಸಸಿಹಿತ್ಲು, ಇಡ್ಯಾ, ಪಣಂಬೂರು ಮತ್ತು ಬೆಂಗ್ರೆಯ ಕಡಲ ಕಿನಾರೆಯಲ್ಲಿ ಮೊಟ್ಟೆ ಇರಿಸಿರುವುದು ಪತ್ತೆಯಾಗಿದೆ. ಒಂದೆಡೆ ಸುಮಾರು 100-120 ಮೊಟ್ಟೆ ಇರಿಸಿರುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಸ್ಥಳೀಯ ಮೀನುಗಾರರ ಸಹಕಾರದಿಂದ ಸಂರಕ್ಷಣೆ ಮಾಡಿದೆ. ಈ ಮೊಟ್ಟೆಗಳಿಂದ ಸುಮಾರು 50 ದಿನಗಳಲ್ಲಿ ಮರಿಗಳು ಹೊರಗೆ ಬರಲಿವೆ.
ಇದನ್ನೂ ಓದಿ: Belagavi: ಕಬ್ಬು ಕಟಾವು ಮಾಡಿದ್ಮೇಲೆ ರೈತರು ಈ ಕ್ರಮ ವಹಿಸಿದ್ರೆ ಉತ್ತಮ ಫಸಲು ಸಿಗುತ್ತೆ!
ಆಲಿವ್ ರಿಡ್ಲೆ ಆಮೆಗಳು ನಾಚಿಗೆ ಸ್ವಭಾವದವು. ಜೊತೆಗೆ ಇವುಗಳ ಸಂಚಾರ ನಿಧಾನ. ಮಧ್ಯ ರಾತ್ರಿ, ಮುಂಜಾನೆ ತೀರಕ್ಕೆ ದೊಡ್ಡ ಅಲೆಗಳ ಮೇಲೆ ಜಾರಿ ಜತೆಯಾಗಿ ಬಂದು ಮೊಟ್ಟೆ ಇರಿಸಿ ಸಮುದ್ರಕ್ಕೆ ಮರಳುತ್ತವೆ. ಮೊಟ್ಟೆ ಇಟ್ಟ ಬಳಿಕ ಈ ಆಮೆಗಳು ಮತ್ತೆ ದಡಕ್ಕೆ ಬರೋದಿಲ್ಲ. ಮೊಟ್ಟೆಗಳು ತಾವಾಗಿಯೇ ಒಡೆದು ಮರಿಯಾಗುತ್ತವೆ.
ಉಬ್ಬರದ ಅಲೆಗಳು ಬಡಿದರೆ ಮೊಟ್ಟೆಗಳು ಶಿಲೀಂಧ್ರದ ಸೋಂಕಿಗೆ ಒಳಗಾಗಿ ಹಾಳಾಗುವ ಸಾಧ್ಯತೆಯೂ ಇದೆ. ಹಾಗಾಗಿ ಅವುಗಳನ್ನು ಪ್ರತ್ಯೇಕಿಸಿ ಅದೇ ಜಾಗದ ಮರಳನ್ನು ತಂದು ಹೊಂಡ ಮಾಡಿ ಸಂರಕ್ಷಿಸಿ ಮರಳು ಮುಚ್ಚಲಾಗುತ್ತದೆ. ಅದರ ಮೇಲೆ ನಾಯಿಗಳು, ಮನುಷ್ಯರು ಹೋಗಿ ಹಾಳು ಮಾಡದಂತೆ ಬಲೆ ಹಾಕಿ ಸಂರಕ್ಷಣೆ ಮಾಡಲಾಗುತ್ತದೆ. ಈ ಮೊಟ್ಟೆಗಳಲ್ಲಿ ಬಹುತೇಕ ಮರಿಗಳು ಮರಿಯಾಗಿ ಸಮುದ್ರ ಸೇರುತ್ತವೆ.
Dakshina Kannada,Karnataka
February 11, 2025 1:31 PM IST