Last Updated:
ಕ್ರಿಕೆಟ್ ಆಟಗಾರ ಶಾರ್ದೂಲ್ ಠಾಕೂರ್ ಅವರ ಪತ್ನಿ ಮಿಥಾಲಿ ಪರುಲ್ಕರ್ ತಮ್ಮದೇ ಬೇಕರಿ ಉದ್ಯಮದಿಂದ ಲಕ್ಷ ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ.
ನಮ್ಮಲ್ಲಿರುವ ಅನೇಕ ಕ್ರಿಕೆಟ್ ಸೆಲೆಬ್ರಿಟಿಗಳು ಮತ್ತು ಸಿನೆಮಾ ಸೆಲೆಬ್ರಿಟಿಗಳು ತುಂಬಾನೇ ಶ್ರೀಮಂತರಾಗಿರುತ್ತಾರೆ, ಅವರಿಗೆ ತಮ್ಮ ಕ್ರಿಕೆಟ್ ಮತ್ತು ಚಿತ್ರೋದ್ಯಮದ ಜೊತೆಗೆ ಜಾಹೀರಾತು ಕ್ಷೇತ್ರದಿಂದಲೂ ಸಹ ಭಾರಿ ಅವಕಾಶಗಳು ಹರಿದು ಬರುತ್ತವೆ ಮತ್ತು ಕೋಟಿಗಟ್ಟಲೆ ಹಣವನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಂಪಾದಿಸುತ್ತಾರೆ. ಅಷ್ಟೇ ಅಲ್ಲದೆ, ಈ ಸೆಲೆಬ್ರಿಟಿಗಳ ಪತ್ನಿಯರೂ ಸಹ ಅವರಷ್ಟೇ ಕೆಲಸ ಮಾಡುತ್ತಿರುತ್ತಾರೆ ಮತ್ತು ಕೈತುಂಬಾ ಹಣವನ್ನು ಸಂಪಾದನೆ ಸಹ ಮಾಡುತ್ತಿರುತ್ತಾರೆ ಅಂತ ಹೇಳಿದರೆ ಬಹುಶಃ ತಪ್ಪಾಗುವುದಿಲ್ಲ.ಇಲ್ಲಿಯೂ ಸಹ ಒಬ್ಬ ಕ್ರಿಕೆಟ್ ಆಟಗಾರನ ಪತ್ನಿ ಸಹ ತಮ್ಮದೇ ಆದ ಸ್ವಂತ ಉದ್ಯಮವನ್ನು ಶುರು ಮಾಡಿಕೊಂಡು ಭಾರಿ ಹಣವನ್ನು ಸಂಪಾದಿಸುತ್ತಿದ್ದಾರೆ ನೋಡಿ.
ಅಲ್ಲದೆ, ಇವರಿಬ್ಬರ ಪ್ರೇಮಕಥೆಯು ಸಹ ಯಾವುದೇ ಸಿನೆಮಾ ಕಥೆಗಿಂತ ಕಡಿಮೆ ಇಲ್ಲ. ಭಾರತದ ಕ್ರಿಕೆಟ್ ತಂಡದ ಬಹುಮುಖ ಪ್ರತಿಭೆಯ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರು ಆಟದ ಮೈದಾನದಲ್ಲಿನ ತಮ್ಮ ಪ್ರದರ್ಶನಗಳಿಂದ ನಿರಂತರವಾಗಿ ತಮ್ಮ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ. ಆದಾಗ್ಯೂ, ಅವರ ವೈಯಕ್ತಿಕ ಜೀವನ, ವಿಶೇಷವಾಗಿ ಅವರ ಹಂಡತಿ ಮಿತ್ತಾಲಿ ಪರುಲ್ಕರ್ ಅವರೊಂದಿಗಿನ ವಿವಾಹವು ಅನೇಕರ ಕುತೂಹಲವನ್ನು ಸೆಳೆದಿದೆ ಅಂತ ಹೇಳಬಹುದು.
ಇದನ್ನೂ ಓದಿ: Most Centuries: ಹೈದರಾಬಾದ್ ಪರ 7ನೇ ಶತಕ ಸಿಡಿಸಿದ ಇಶಾನ್ ಕಿಶನ್! ಇಲ್ಲಿದೆ ನೋಡಿ ಅತಿ ಹೆಚ್ಚು ಶತಕ ದಾಖಲಿಸಿದ ಟಾಪ್ ತಂಡಗಳು
ಮೂಲತಃ ಮಹಾರಾಷ್ಟ್ರದವರಂತೆ..
ಶಾರ್ದೂಲ್ ಠಾಕೂರ್ ಅವರ ಪತ್ನಿ ಮಿಥಾಲಿ ಪರುಲ್ಕರ್ ಅವರು ಡಿಸೆಂಬರ್ 11, 1993 ರಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜನಿಸಿದರು, ಅವರಿಗೆ ಈಗ 31 ವರ್ಷ ವಯಸ್ಸಾಗಿದೆ. ಅವರು ಮುಂಬೈನ ಮಿಥಿಬಾಯಿ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದರಂತೆ ಮತ್ತು ಕಾರ್ಪೊರೇಟ್ ಫೈನಾನ್ಸ್ ವಿಷಯದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಬೇಕಿಂಗ್ ಎಂದರೆ ಬೇಕರಿ ಕ್ಷೇತ್ರಕ್ಕೆ ಎಂಟ್ರಿ ಕೊಡುವ ಮುಂಚೆ ಮಿಥಾಲಿ ಅವರು ಒಂದು ಖಾಸಗಿ ಕಂಪನಿಯಲ್ಲಿ ಸೆಕ್ರೇಟರಿಯಾಗಿ ಸೇವೆ ಸಲ್ಲಿಸಿದರು. ಬೇಕಿಂಗ್ ಮೇಲಿನ ಅತಿಯಾದ ಪ್ರೀತಿಯಿಂದ ಪ್ರೇರಿತರಾದ ಅವರು 2020 ರಲ್ಲಿ ತಮ್ಮದೇ ಆದ ಉನ್ನತ ದರ್ಜೆಯ ಬೇಕರಿ ಬ್ರ್ಯಾಂಡ್ ಅನ್ನು ಶುರು ಮಾಡಿದರು.
ಮೊದಲ ಬಾರಿಗೆ ಎಲ್ಲಿ ಭೇಟಿ ಆದ್ರೂ ನೋಡಿ ಶಾರ್ದೂಲ್ ಮತ್ತು ಮಿತ್ತಾಲಿ
ಮಿಥಾಲಿ ಮತ್ತು ಶಾರ್ದೂಲ್ ಅವರು ತಮ್ಮ ಶಾಲಾ ವರ್ಷಗಳಿಂದಲೂ ತುಂಬಾನೇ ಪರಿಚಿತರು. ಇಬ್ಬರು ಮೊದಲಿಗೆ ಒಳ್ಳೆಯ ಸ್ನೇಹಿತರಾದರು, ನಂತರ ಅವರಿಬ್ಬರ ಮಧ್ಯೆ ಇದ್ದ ಸ್ನೇಹ ಅನೇಕ ವರ್ಷಗಳ ಕಾಲದ ನಂತರ ಒಟ್ಟಿಗೆ ಕೂಡಿ ಬಾಳುವ ಸಂಕೇತವನ್ನು ನೀಡಿತು. ನಂತರ, ಈ ಮುದ್ದಾದ ಜೋಡಿ ಫೆಬ್ರವರಿ 27, 2023 ರಂದು ಮುಂಬೈನ ಕರ್ಜತ್‌ನಲ್ಲಿ ಸಾಂಪ್ರದಾಯಿಕ ಮರಾಠಿ ವಿವಾಹ ಸಮಾರಂಭದಲ್ಲಿ ಸಪ್ತಪದಿ ತುಳಿದರು.
ಮಿತ್ತಾಲಿ ಅವರು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ, ಅಲ್ಲಿ ಅವರು 46.2 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ (@mittaliparulkar_). ಅವರ ಇನ್‌ಸ್ಟಾ ಖಾತೆಯು ಅವರ ವೈಯಕ್ತಿಕ ಜೀವನ, ಉದ್ಯಮಶೀಲ ಅನ್ವೇಷಣೆಗಳು ಮತ್ತು ವಿಶೇಷ ಬೇಕರಿ-ಸಂಬಂಧಿತ ಉದ್ಯಮದ ವಿಷಯಗಳನ್ನು ಒಳಗೊಂಡಿದೆ.
ಇದನ್ನೂ ಓದಿ: MI vs CSK: ತಂದೆ ಆಟೋ ಡ್ರೈವರ್! ರಾಜ್ಯ ತಂಡಕ್ಕೂ ಆಡದೆ ನೇರವಾಗಿ IPLಗೆ ಎಂಟ್ರಿ! ಮೊದಲ ಪಂದ್ಯದಲ್ಲೇ ಧೂಳೆಬ್ಬಿಸಿದ ವಿಘ್ನೇಶ್ ಪುತ್ತೂರ್!
ಮಿಥಾಲಿ ಪರುಲ್ಕರ್ ಅವರ ಒಟ್ಟು ಆಸ್ತಿ ಎಷ್ಟಿದೆ?
ಶಾರ್ದೂಲ್ ಠಾಕೂರ್ ಅವರ ಪತ್ನಿ ಮಿಥಾಲಿ ಅವರ ಅಂದಾಜು ನಿವ್ವಳ ಮೌಲ್ಯವು 3 ರಿಂದ 4 ಕೋಟಿಗಳವರೆಗಿದೆ. ಅವರು ತಮ್ಮ ಯಶಸ್ವಿ ಬೇಕರಿ ಉದ್ಯಮದ ಮೂಲಕ ವರ್ಷಕ್ಕೆ ಸುಮಾರು 50 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸುತ್ತಾರೆ. ಈ ಮೂಲಕ ಅವರು ತಮ್ಮ ಪತಿ ಶಾರ್ದೂಲ್ ಠಾಕೂರ್ ಅವರಷ್ಟೇ ಯಶಸ್ವಿ ಜೀವನ ನಡೆಸುತ್ತಿದ್ದಾರೆ, ಆದರೆ ಮಾಧ್ಯಮಗಳಿಂದ ಇವರು ಸ್ವಲ್ಪ ದೂರವೇ ಇರುತ್ತಾರೆ.
March 24, 2025 4:54 PM IST
Shardul Thakur: ಭಾರತೀಯ ಕ್ರಿಕೆಟರ್ ಶಾರ್ದೂಲ್ ಠಾಕೂರ್ ಪತ್ನಿ ಯಶಸ್ವಿ ಉದ್ಯಮಿ! ಸ್ವಂತ ಉದ್ಯಮದಿಂದ ಕೋಟಿಗಟ್ಟಲೇ ಸಂಪಾದಿಸ್ತಾರೆ ಮಿಥಾಲಿ