Last Updated:
ಆನ್‌ಲೈನ್ ಆಸ್ತಿ ಪೋರ್ಟಲ್ ಸ್ಕ್ವೇರ್ ಯಾರ್ಡ್ಸ್.ಕಾಮ್ ಮೂಲಕ ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ (ಐಜಿಆರ್) ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಈ ವಹಿವಾಟಿನ ಒಟ್ಟು ಮೌಲ್ಯ ರೂ. 27.50 ಕೋಟಿ ಮತ್ತು ಇದನ್ನು ಜೂನ್ 2025 ರಲ್ಲಿ ನೋಂದಾಯಿಸಲಾಗಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶಿವಂ ದುಬೆ (Shivam Dube) ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದ ಓಶಿವಾರಾದಲ್ಲಿ ( Oshiwara) ಎರಡು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ ಎಂದು. ಈ ಅಪಾರ್ಟ್‌ಮೆಂಟ್‌ಗಳ ಬೆಲೆ ರೂ. 27.5 ಕೋಟಿ ಎಂದು ತಿಳಿದುಬಂದಿದೆ. ಈ ಎರಡು ಅಪಾರ್ಟ್‌ಮೆಂಟ್‌ಗಳು DLH ಎನ್‌ಕ್ಲೇವ್ ಹೌಸ್ ಪ್ರಾಜಕ್ಟ್ನ 17 ಮತ್ತು 18 ನೇ ಮಹಡಿಗಳಲ್ಲಿವೆ. ಅವುಗಳ ಒಟ್ಟು ವಿಸ್ತೀರ್ಣ 9,603 ಚದರ ಅಡಿಗಳು (ವಾಸಿಸುವ ಪ್ರದೇಶ 4,200, ಬಾಲ್ಕನಿ 3,800 ಚದರ ಅಡಿ) ಎಂದು ತಿಳಿದುಬಂದಿದೆ.
892.19 ಚದರ ಮೀ ಇರುವ ಅಪಾರ್ಟ್ಮೆಂಟ್
ಆನ್‌ಲೈನ್ ಆಸ್ತಿ ಪೋರ್ಟಲ್ ಸ್ಕ್ವೇರ್ ಯಾರ್ಡ್ಸ್.ಕಾಮ್ ಮೂಲಕ ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ (ಐಜಿಆರ್) ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದ ಆಸ್ತಿ ನೋಂದಣಿ ದಾಖಲೆಗಳ ಪ್ರಕಾರ, ಈ ವಹಿವಾಟಿನ ಒಟ್ಟು ಮೌಲ್ಯ ರೂ. 27.50 ಕೋಟಿ ಮತ್ತು ಇದನ್ನು ಜೂನ್ 2025 ರಲ್ಲಿ ನೋಂದಾಯಿಸಲಾಗಿದೆ. ಈ ಎರಡೂ ಅಪಾರ್ಟ್‌ಮೆಂಟ್‌ಗಳು ಡಿಎಲ್‌ಎಚ್ ಎನ್‌ಕ್ಲೇವ್ ಎಂಬ ವಸತಿ ಯೋಜನೆಯಲ್ಲಿವೆ. ಈ ಎರಡೂ ಅಪಾರ್ಟ್‌ಮೆಂಟ್‌ಗಳ ಒಟ್ಟು ಕಾರ್ಪೆಟ್ ವಿಸ್ತೀರ್ಣ 4,200 ಚದರ ಅಡಿ (390 ಚದರ ಮೀ), ಮತ್ತು ಅವು 3,800 ಚದರ ಅಡಿ (353 ಚದರ ಮೀ) ಬಾಲ್ಕಾನಿಗಳು ಬರುತ್ತವೆ. ಎರಡೂ ಅಪಾರ್ಟ್‌ಮೆಂಟ್‌ಗಳ ಒಟ್ಟು ನಿರ್ಮಿತ ವಿಸ್ತೀರ್ಣ 892.19 ಚದರ ಮೀ (9,603 ಚದರ ಅಡಿ) ಎಂದು ತಿಳಿದುಬಂದಿದೆ.
ಸೆಲೆಬ್ರಿಟಿಗಳಿರುವ ಜಾಗದಲ್ಲಿ ಮನೆ ಖರೀದಿ
ಅಪಾರ್ಟ್‌ಮೆಂಟ್‌ಗಳ ಜೊತೆಗೆ, ದುಬೆ ದೇವ್ ಲ್ಯಾಂಡ್ ಮತ್ತು ಹೌಸಿಂಗ್ ಲಿಮಿಟೆಡ್‌ನಿಂದ ಮೂರು ಪಾರ್ಕಿಂಗ್ ಸ್ಥಳಗಳನ್ನು ಖರೀದಿಸಿದ್ದಾರೆ. ಈ ವಹಿವಾಟನ್ನು ಜೂನ್ 20, 2025 ರಂದು ದಾಖಲಿಸಲಾಗಿದೆ. ಇದಕ್ಕೆ ಒಟ್ಟು ರೂ. 1.65 ಕೋಟಿ ಸ್ಟ್ಯಾಂಪ್ ಡ್ಯೂಟಿ ಮತ್ತು ರೂ. 30,000 ರಿಜಿಸ್ಟ್ರೇಷನ್ ಫೀಜ್ ವನ್ನು ಪಾವತಿಸಲಾಗಿದೆ. ಡಿಎಲ್‌ಹೆಚ್ ಎನ್‌ಕ್ಲೇವ್‌ನಲ್ಲಿ ಈಗಾಗಲೇ ಅನೇಕ ಸೆಲೆಬ್ರಿಟಿಗಳಿದ್ದಾರೆ. ಬಾಲಿವುಡ್ ಹಾಸ್ಯನಟ ಕಪಿಲ್ ಶರ್ಮಾ, ಗಾಯಕ ಮಿಕಾ ಸಿಂಗ್ ಮತ್ತು ದಿವಂಗತ ನಟ ಇರ್ಫಾನ್ ಖಾನ್ ಅವರ ಕುಟುಂಬ ಇಲ್ಲಿ ವಾಸಿಸುತ್ತಿದೆ.
ಶಿವಂ ದುಬೆ ಕ್ರಿಕೆಟ್ ವೃತ್ತಿ ಜೀವನ
31 ವರ್ಷದ ಶಿವಂ ದುಬೆ (ಎಡಗೈ ಬ್ಯಾಟ್ಸ್‌ಮನ್, ಬಲಗೈ ಮಧ್ಯಮ ವೇಗದ ಬೌಲರ್) ಭಾರತೀಯ T20 ತಂಡದ ನಿಯಮಿತ ಸದಸ್ಯರಾಗಿದ್ದಾರೆ ಮತ್ತು IPL ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪ್ರತಿನಿಧಿಸುತ್ತಾರೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುತ್ತಿದ್ದಾರೆ.
ನವೆಂಬರ್ 2019 ರಲ್ಲಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ದುಬೆ, 2024 ರ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದರು. ದುಬೆ ಇದುವರೆಗೆ ಟೀಮ್ ಇಂಡಿಯಾ ಪರ 4 ಏಕದಿನ ಮತ್ತು 35 ಟಿ20 ಪಂದ್ಯಗಳನ್ನು ಆಡಿದ್ದು, 574 ರನ್ ಗಳಿಸಿದ್ದಾರೆ. ಅವರು 14 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ದುಬೆ ಐಪಿಎಲ್‌ನಲ್ಲಿ 79 ಪಂದ್ಯಗಳನ್ನು ಆಡಿದ್ದು, 10 ಅರ್ಧಶತಕಗಳೊಂದಿಗೆ 1859 ರನ್ ಗಳಿಸಿದ್ದಾರೆ ಮತ್ತು 5 ವಿಕೆಟ್‌ಗಳನ್ನು ಪಡೆದಿದ್ದಾರೆ.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 25, 2025 7:48 PM IST