Last Updated:
ಗಂಭೀರ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್, ಇಂತಹ ಕಠಿಣ ಸಮಯದಲ್ಲಿ ಬೆಂಬಲ ನೀಡಿದ, ತನಗಾಗಿ ಪ್ರಾರ್ಥಿಸಿದ ಹಿತೈಷಿಗಳಿಗೆ ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ.
Shreyas Iyer Injury: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ (IND vs AUS) ಕ್ಯಾಚ್ ಹಿಡಿಯುವ ವೇಳೆ ಗಂಭೀರವಾಗಿ ಗಾಯಗೊಂಡು ಐಸಿಯುಗೆ ದಾಖಲಾಗಿದ್ದ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್ ಗುರುವಾರ ಸೋಶಿಯಲ್ ವಿಡಿಯೋದಲ್ಲಿ ಮಹತ್ವದ ಪೋಸ್ಟ್ ಮಾಡಿದ್ದಾರೆ.
ಗಂಭೀರ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್, ಇಂತಹ ಕಠಿಣ ಸಮಯದಲ್ಲಿ ಬೆಂಬಲ ನೀಡಿದ, ತನಗಾಗಿ ಪ್ರಾರ್ಥಿಸಿದ ಹಿತೈಷಿಗಳಿಗೆ ಭಾವನಾತ್ಮಕ ಸಂದೇಶ ಕಳುಹಿಸಿದ್ದಾರೆ. 30 ವರ್ಷದ ಅಯ್ಯರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದು, ತಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಶುಭ ಹಾರೈಕೆಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಶ್ರೇಯಸ್ ಅಯ್ಯರ್ ಅವರು ‘ನಾನು ಪ್ರಸ್ತುತ ಸುಧಾರಿಸುತ್ತಿದ್ದೇನೆ. ದಿನ ಕಳೆದಂತೆ ಚೇತರಿಕೆ ಪಡೆಯುತ್ತಿದ್ದೇನೆ. ನನಗೆ ನೀವು ನೀಡಿದ ಎಲ್ಲಾ ರೀತಿಯ ಶುಭಾಶಯಗಳು ಮತ್ತು ಬೆಂಬಲವನ್ನು ನೋಡಿ ಹೃದಯ ತುಂಬಿ ಬಂತು. ಇದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದು ನಿಜವಾಗಿಯೂ ಬಹಳಷ್ಟು ಅರ್ಥವನ್ನು ನೀಡುತ್ತದೆ. ನನಗಾಗಿ ನೀವು ಸಮಯ ಕೊಟ್ಟು ಪ್ರಾರ್ಥಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಯ್ಯರ್ ಪೋಸ್ಟ್ ಮಾಡಿದ್ದಾರೆ.
ಶ್ರೇಯಸ್ ಅಯ್ಯರ್ ಪೋಸ್ಟ್
ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿಯುವಾಗ ಭಾರತೀಯ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರ ಪಕ್ಕೆಲುಬಿಗೆ ಗಾಯವಾಯಿತು. ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅವರನ್ನು ಅಲ್ಲಿ ಐಸಿಯುಗೆ ದಾಖಲಿಸಲಾಯಿತು. ಸದ್ಯ ಅವರು ನಿಧಾನವಾಗಿ ಚೇತರಿಸುತ್ತಿದ್ದಾರೆ ಎಂದು ಸ್ವತಃ ಅಯ್ಯರ್ ಅವರೇ ಸ್ಪಷ್ಟಪಡಿಸಿರುವುದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
October 30, 2025 11:26 AM IST