Last Updated:
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 15-20ರೊಳಗೆ ಲಕ್ಷದೀಪೋತ್ಸವ, 93ನೇ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ನಡೆಯಲಿದೆ; ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಲಿದ್ದಾರೆ.
ದಕ್ಷಿಣ ಕನ್ನಡ: ಯಾವುದೇ ಅಪವಾದದ ಕತ್ತಲು ಬಂದರೂ ನಿರಂತರ ಅವುಗಳನ್ನು ನಿವಾರಿಸಿದ ಬೆಳಕಾಗಿ ಜಗತ್ತಿಗೆ ತನ್ನ ಶಕ್ತಿಯನ್ನು (Power) ಮತ್ತೆ ಮತ್ತೆ ಸಾದರ ಪಡಿಸುತ್ತಿರುವ ಶ್ರೀ ಕ್ಷೇತ್ರದಲ್ಲಿ ಮತ್ತೊಮ್ಮೆ ಈಗ ಅಣ್ಣಪ್ಪನ (Shri Annappa) ಎದುರಿಗೆ ಶ್ರೀ ಮಂಜುನಾಥನ (Shri Manjunatha) ಸನ್ನಿಧಿಗೆ ಭಕ್ತಿಜ್ಯೋತಿಗಳನ್ನು ಬೆಳಗುವ ಸಮಯ ಸನ್ನಿಹಿತವಾಗಿದೆ!
ನಾಡಿನ ಪ್ರಸಿದ್ಧ ತೀರ್ಥ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್ 15 ರಿಂದ ನವೆಂಬರ್ 16 ರವರೆಗೆ ಲಕ್ಷದೀಪೋತ್ಸವ ನಡೆಯಲಿದ್ದು, ಸಕಲ ತಯಾರಿಗಳು ಆರಂಭವಾಗಿದೆ. ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವ ಪ್ರತಿವರ್ಷ ಧರ್ಮಸ್ಥಳದಲ್ಲಿ ಲಕ್ಷಾಂತರ ಭಕ್ತರ ಸಮಾಗಮದೊಂದಿಗೆ ನಡೆಯುತ್ತಿದ್ದು, ಈ ಬಾರಿಯೂ ಅದ್ಧೂರಿ ಕಾರ್ಯಕ್ರಮಗಳಿಗಾಗಿ ರೂಪುರೇಷೆ ಸಿದ್ಧವಾಗಿದೆ.
ನವೆಂಬರ್ 18 ರಂದು ಸಂಜೆ 93ನೇ ವರ್ಷದ ಸರ್ವ ಧರ್ಮ ಸಮ್ಮೇಳನ ಧರ್ಮಸ್ಥಳದಲ್ಲಿ ನಡೆಯಲಿದೆ. ಈ ಅಧಿವೇಶನವನ್ನು ಕೇಂದ್ರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ್ ಉದ್ಘಾಟನೆ ನಡೆಸಲಿದ್ದಾರೆ. ನವೆಂಬರ್ 19 ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 93 ನೇ ಅಧಿವೇಶನ ನಡೆಯಲಿದೆ. ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಮತ್ತು ಅಂಕಣಗಾರ ಪ್ರೊಫೆಸರ್ ಪ್ರೇಮಶೇಖರ ಉದ್ಘಾಟನೆ ನಡೆಸಲಿದ್ದಾರೆ.
ನವೆಂಬರ್ 20 ರವರೆಗೂ ಶ್ರೀ ಕ್ಷೇತ್ರದಲ್ಲಿ ಸಂಭ್ರಮ
Dakshina Kannada,Karnataka
November 11, 2025 12:25 PM IST