Shubman Gill: ಆ ಎರಡು ಕಾರಣಗಳಿಂದ ನಾವು ಸೋಲು ಕಂಡೆವು! ಆಸೀಸ್ ವಿರುದ್ಧ ಮೊದಲ ODI ಸೋಲಿಗೆ ಗಿಲ್​ ಕೊಟ್ಟ ಕಾರಣ ಇವು | India’s Shubman Gill Laments Early Collapse as Australia Cruises to Big Win in Perth ODI | ಕ್ರೀಡೆ

Shubman Gill: ಆ ಎರಡು ಕಾರಣಗಳಿಂದ ನಾವು ಸೋಲು ಕಂಡೆವು! ಆಸೀಸ್ ವಿರುದ್ಧ ಮೊದಲ ODI ಸೋಲಿಗೆ ಗಿಲ್​ ಕೊಟ್ಟ ಕಾರಣ ಇವು | India’s Shubman Gill Laments Early Collapse as Australia Cruises to Big Win in Perth ODI | ಕ್ರೀಡೆ

ಈ ಪಂದ್ಯದ ನಂತರ ಅವರ ಸೋಲಿಗೆ ಪ್ರತಿಕ್ರಿಯಿಸಿದ ಶುಭ್​ಮನ್ ಗಿಲ್ ತಮ್ಮ ಬ್ಯಾಟಿಂಗ್ ವಿಧಾನವನ್ನು ಸಮರ್ಥಿಸಿಕೊಂಡರು. ಪವರ್ ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ತಂಡ ಹಿನ್ನಡೆಗೆ ಒಳಗಾಯಿತು. ಟಾಪ್ -3 ಬ್ಯಾಟ್ಸ್‌ಮನ್‌ಗಳ ವೈಫಲ್ಯವು ಅವರ ಯಶಸ್ಸಿನ ಸಾಧ್ಯತೆಗಳನ್ನು ಹಾನಿಗೊಳಿಸಿತು ಎಂದು ಅವರು ಪರೋಕ್ಷವಾಗಿ ಬಹಿರಂಗಪಡಿಸಿದರು. ರೋಹಿತ್ ಮತ್ತು ಕೊಹ್ಲಿ ಶೀಘ್ರದಲ್ಲೇ ಔಟಾದ ನಂತರ ಟೀಮ್ ಇಂಡಿಯಾ ಪಂದ್ಯದಲ್ಲಿ ಹಿಂದುಳಿದುಕೊಂಡಿತು. ಆದರೆ ಈ ಪಂದ್ಯದಲ್ಲಿ ಸೋತರೂ ಈ ಪಂದ್ಯದಲ್ಲಿ ಅನೇಕ ಸಕಾರಾತ್ಮಕ ಅಂಶಗಳಿವೆ ಮತ್ತು ಈ ಸೋಲಿನಿಂದ ನಾವು ಬಹಳಷ್ಟು ಕಲಿತಿದ್ದೇವೆ ಎಂದು ಗಿಲ್ ಹೇಳಿದ್ದಾರೆ.

ಆರಂಭಿಕ ವಿಕೆಟ್ ಕಳೆದುಕೊಂಡಿದ್ದರಿಂದ ಹಿನ್ನಡೆ

‘ಮೋಡ ಕವಿದ ವಾತಾವರಣದಲ್ಲಿ ಪವರ್‌ಪ್ಲೇನಲ್ಲಿ ನೀವು ಮೂರು ವಿಕೆಟ್‌ಗಳನ್ನು ಕಳೆದುಕೊಂಡರೆ.. ಯಾರಾದರೂ ಕ್ಯಾಚ್-ಅಪ್ ಆಟವನ್ನು ಆಡುತ್ತಾರೆ. ಈ ಪಂದ್ಯದಿಂದ ನಾವು ಬಹಳಷ್ಟು ಕಲಿತಿದ್ದೇವೆ. ಈ ಪಂದ್ಯವನ್ನು ನಾವು ಸೋತರೂ, ನಮಗೆ ಅನೇಕ ಸಕಾರಾತ್ಮಕ ಅಂಶಗಳಿವೆ. ನಾವು 130 ರನ್‌ಗಳ ಸಣ್ಣ ಗುರಿಯನ್ನು ಡಿಫೆಂಡ್ ಮಾಡಿಕೊಳ್ಳಲು ಉತ್ತಮವಾಗಿ ಪ್ರಯತ್ನಿಸಿದ್ದೇವೆ. ನಾವು ಪಂದ್ಯವನ್ನು ಕೊನೆಯ ಓವರ್​ವರೆಗೆ ತೆಗೆದುಕೊಂಡು ಹೋಗದಿದ್ದರೂ, ತುಂಬಾ ಆಳಕ್ಕೆ ತೆಗೆದುಕೊಂಡು ಹೋಗಿ ಸ್ಪರ್ಧೆ ನೀಡಿರುವುದು ನಮಗೆ ತುಂಬಾ ತೃಪ್ತಿ ತಂದಿದೆ ಎಂದರು.

ನಾವು ತುಂಬಾ ಅದೃಷ್ಟವಂತರು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಮತ್ತು ನಮ್ಮೊಂದಿಗೆ ನಿಂತಿದ್ದಾರೆ. ಅಡಿಲೇಡ್ ಪಂದ್ಯವನ್ನು ಅದೇ ರೀತಿಯಲ್ಲಿ ವೀಕ್ಷಿಸುತ್ತಾರೆ ಎಂದು ನಾನು ಭಾವಿಸುತ್ತೇನೆ,’ ಎಂದು ಶುಭ್​ಮನ್ ಗಿಲ್ ಹೇಳಿದರು. ಶುಭ್​ಮನ್ ಗಿಲ್ ತಮ್ಮ ಏಕದಿನ ನಾಯಕತ್ವವನ್ನು ಸೋಲಿನೊಂದಿಗೆ ಪ್ರಾರಂಭಿಸಿದರು. ಮೂರು ಮಾದರಿಯಲ್ಲೂ ಗಿಲ್​ ತಮ್ಮ ನಾಯಕತ್ವದ ಮೊದಲ ಪಂದ್ಯವನ್ನ ಸೋಲಿನೊಂದಿಗೆ ಆರಂಭಿಸಿದ್ದಾರೆ. ವಿರಾಟ್ ಕೊಹ್ಲಿ ನಂತರ ಈ ಕಳಪೆ ದಾಖಲೆಗೆ ಗುರಿಯಾದ 2ನೇ ಭಾರತೀಯ ನಾಯಕ ಎನಿಸೊಕೊಂಡಿದ್ದಾರೆ.

ಕೊಹ್ಲಿ, ರೋಹಿತ್ ನಿರಾಶೆ

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ನಿಗದಿತ 26 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 136 ರನ್ ಗಳಿಸಿತು. ಕೆಎಲ್ ರಾಹುಲ್ (31 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 38), ಅಕ್ಷರ್ ಪಟೇಲ್ (38 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 31), ಮತ್ತು ನಿತೀಶ್ ಕುಮಾರ್ ರೆಡ್ಡಿ (11 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 19 ನಾಟ್ ಔಟ್) ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ ಗಮನಾರ್ಹ ಸ್ಕೋರ್ ಗಳಿಸಲು ವಿಫಲರಾದರು. ಹಲವು ನಿರೀಕ್ಷೆಗಳೊಂದಿಗೆ ಮೈದಾನಕ್ಕೆ ಇಳಿದ ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ (8) ಮತ್ತು ವಿರಾಟ್ ಕೊಹ್ಲಿ (0) ತೀವ್ರ ನಿರಾಶೆ ಮೂಡಿಸಿದರು.

ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ, ಜೋಶ್ ಹ್ಯಾಜಲ್‌ವುಡ್ (2/20), ಮಿಚೆಲ್ ಓವನ್ (2/20), ಮತ್ತು ಮ್ಯಾಥ್ಯೂ ಕುಹ್ನೆಮನ್ (2/14) ತಲಾ ಎರಡು ವಿಕೆಟ್ ಪಡೆದರು, ಆದರೆ ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಎಲ್ಲಿಸ್ ತಲಾ ಒಂದು ವಿಕೆಟ್ ಪಡೆದು ಭಾರತವನ್ನ ಅಲ್ಪಮೊತ್ತಕ್ಕೆ ನಿಯಂತ್ರಿಸಿದರು.

ಸುಲಭವಾಗಿ ಗೆದ್ದ ಆಸ್ಟ್ರೇಲಿಯಾ

ಡಕ್‌ವರ್ತ್-ಲೂಯಿಸ್ ವಿಧಾನದ ಪ್ರಕಾರ ಆಸ್ಟ್ರೇಲಿಯಾದ ಗುರಿಯನ್ನು 26 ಓವರ್‌ಗಳಲ್ಲಿ 131 ರನ್‌ಗಳಿಗೆ ನಿಗದಿಪಡಿಸಲಾಯಿತು. ಆಸೀಸ್ 21.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 131 ರನ್ ಗಳಿಸಿ ಆರಾಮದಾಯಕ ಗೆಲುವು ಸಾಧಿಸಿತು. ನಾಯಕ ಮಿಚೆಲ್ ಮಾರ್ಷ್ 52 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 46 ರನ್​, ಜೋಶ್ ಫಿಲಿಪ್ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 37 ರನ್ ಮತ್ತು ಮ್ಯಾಟ್ ರೆನ್​ಶಾ 24 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 20 ರನ್​ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಭಾರತೀಯ ಬೌಲರ್‌ಗಳಲ್ಲಿ, ಅರ್ಶ್‌ದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ, ಆಸೀಸ್ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಎರಡೂ ಕಾರಣಗಳಿಂದ ಭಾರತಕ್ಕೆ ಸೋಲು

ಮೊದಲು ಬ್ಯಾಟಿಂಗ್ ಮಾಡುವಾಗ ಯಾವುದೇ ತಂಡವಾದರೂ ಉತ್ತಮ ಆರಂಭ ಪಡೆಯದಿದ್ದರೆ ತಂಡ ದೊಡ್ಡ ಮೊತ್ತ ಗಳಿಸಲು ಸಾಧ್ಯವಿಲ್ಲ. ಈ ಪಂದ್ಯದಲ್ಲಿ ಭಾರತ ತಂಡ 25 ರನ್​ಗಳಾಗುಷ್ಟರಲ್ಲಿ

ಹೆಚ್ಚಿನ ನಿರೀಕ್ಷೆಗಳೊಂದಿಗೆ ಮೈದಾನಕ್ಕೆ ಇಳಿದ ರೋಹಿತ್ ಶರ್ಮಾ (8) ಮತ್ತು ವಿರಾಟ್ ಕೊಹ್ಲಿ (0) ಹಾಗೂ ನಾಯಕ ಗಿಲ್ (10) ವಿಕೆಟ್ ಕಳೆದುಕೊಂಡಿತು. ಈ ವೈಫಲ್ಯವು ತಂಡದ ಮೇಲೆ ಒತ್ತಡವನ್ನ ಹೆಚ್ಚಿಸಿತು ಎಂದು ಗಿಲ್​ ಸೋಲಿಗೆ ಆರಂಭಿಕ ವೈಫಲ್ಯ ಕಾರಣ ಎಂದು ಒಪ್ಪಿಕೊಂಡಿದ್ದಾರೆ.

ಎರಡನೇ ಕಾರಣವೆಂದರೆ ಮಳೆ. ಭಾರತ ಕೇವಲ 15 ಓವರ್​ ಬೌಲಿಂಗ್ ಮಾಡುವ ವೇಳೆಗೆ ಮಳೆ 4 ಬಾರಿ ಅಡ್ಡಿಯಾಯಿತು. ಪ್ರತಿ ಭಾರೀ ಮಳೆ ಬಂದಾಗಲೆಲ್ಲಾ ಟೀಮ್ ಇಂಡಿಯಾ ವಿಕೆಟ್ ಕಳೆದುಕೊಂಡಿತು. ಹಾಗಾಗಿ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ ಎಂಬುದು ಗಿಲ್ ಅಭಿಪ್ರಾಯವಾಗಿದೆ.