Last Updated:
ಶುಭ್ಮನ್ ಗಿಲ್ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿ ನಾಯಕನಾಗಿ ಕಣಕ್ಕಿಳಿದಿದ್ದರು. ತಮ್ಮ ಚೊಚ್ಚಲ ನಾಯಕತ್ವದಲ್ಲೇ ಆಟಗಾರನಾಗಿ ಪ್ರಭಾವಿತರಾಗಿದ್ದಾರೆ.
ಟೀಮ್ ಇಂಡಿಯಾ ಟೆಸ್ಟ್ ನಾಯಕ ಶುಭ್ಮನ್ ಗಿಲ್ (Shubman Gill) ಇಂಗ್ಲೆಂಡ್ (India vs England) ವಿರುದ್ಧದ ಟೆಸ್ಟ್ ಸರಣಿ ಡ್ರಾ ಸಾಧಿಸಿದ ಬೆನ್ನಲ್ಲೇ ಮಹತ್ವದ ನಿರ್ಧಾ ತೆಗೆದುಕೊಂಡಿದ್ದಾರೆ. ದೇಶೀಯ ಟೂರ್ನಮೆಂಟ್ ದುಲೀಪ್ ಟ್ರೋಫಿಯಲ್ಲಿ (Duleep Trophy) ಆಡಲು ಗಿಲ್ ಸಿದ್ಧರಾಗಿದ್ದಾರೆ. ಸ್ವದೇಶದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ (West Indies and South Africa) ವಿರುದ್ಧದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಗಿಲ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆಯ್ಕೆದಾರರು ಗಿಲ್ ಅವರನ್ನು ಉತ್ತರ ವಲಯದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಗಿಲ್ ಜೊತೆಗೆ, ಯುವ ವೇಗಿಗಳಾದ ಅರ್ಶ್‌ದೀಪ್, ಹರ್ಷಿತ್ ರಾಣಾ ಮತ್ತು ಅನ್ಶುಲ್ ಕಾಂಬೋಜ್ ಅವರನ್ನು ಹೊಸದಾಗಿ ಘೋಷಿಸಲಾದ ತಂಡದಲ್ಲಿ ಹೆಸರಿಸಲಾಗಿದೆ. ಅಂಕಿತ್ ಕುಮಾರ್ ಅವರನ್ನು ಗಿಲ್ ಅವರ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
August 07, 2025 8:17 PM IST