Shubman Gill: ಏಕದಿನ ತಂಡಕ್ಕೆ ನಾಯಕನಾದ ಗಿಲ್​! ಏಕದಿನ ವಿಶ್ವಕಪ್​ ಮುನ್ನ ಟಾರ್ಗೆಟ್ ಸೆಟ್ ಮಾಡಿಕೊಂಡ ಯುವ ನಾಯಕ | Shubman Gill’s First Reaction as India’s New ODI Captain | ಕ್ರೀಡೆ

Shubman Gill: ಏಕದಿನ ತಂಡಕ್ಕೆ ನಾಯಕನಾದ ಗಿಲ್​! ಏಕದಿನ ವಿಶ್ವಕಪ್​ ಮುನ್ನ ಟಾರ್ಗೆಟ್ ಸೆಟ್ ಮಾಡಿಕೊಂಡ ಯುವ ನಾಯಕ | Shubman Gill’s First Reaction as India’s New ODI Captain | ಕ್ರೀಡೆ

Last Updated:

ರೋಹಿತ್ ಭಾರತದ ಅತ್ಯಂತ ಯಶಸ್ವಿ ಏಕದಿನ ನಾಯಕರಲ್ಲಿ ಒಬ್ಬರಾಗಿದ್ದು, 56 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು 42 ಗೆಲುವು ಪಡೆದಿದ್ದಾರೆ. ಇದರ ಪರಿಣಾಮವಾಗಿ 75 ಪ್ರತಿಶತದಷ್ಟು ಗೆಲುವಿನ ಸಾಧನೆ ಮಾಡಿದ್ದಾರೆ. ಆದರೂ ಅವರನ್ನ ನಾಯಕತ್ವದಿಂದ ಕೆಳಗಿಲಿಸಿ ಗಿಲ್​​ಗೆ ನಾಯಕತ್ವವನ್ನ ನೀಡಲಾಗಿದೆ.

ಶುಭ್​ಮನ್ ಗಿಲ್ ಶುಭ್​ಮನ್ ಗಿಲ್
ಶುಭ್​ಮನ್ ಗಿಲ್

ಆಸ್ಟ್ರೇಲಿಯಾ ಪ್ರವಾಸಕ್ಕೂ (Australia Tour) ಮುನ್ನ ರೋಹಿತ್ ಶರ್ಮಾ (Rohit Sharma) ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಿಸಿದ್ದ ಶುಭಮನ್ ಗಿಲ್ (Shubman Gill) ತಮ್ಮ ಮೊದಲ ಪ್ರತಿಕ್ರಿಯೆಯನ್ನು ಬಿಡುಗಡೆ ಮಾಡಿದ್ದಾರೆ. ಈಗ ಟೆಸ್ಟ್ ಕ್ರಿಕೆಟ್ ಹಾಗೂ 50 ಓವರ್ ಕ್ರಿಕೆಟ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿರುವ ಗಿಲ್, ತಮ್ಮ ಮುಂದಿನ ಗುರಿ 2027 ರ ವಿಶ್ವಕಪ್ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕ್ರಿಕೆಟ್ ಸಂಭ್ರಮಕ್ಕೂ ಮುನ್ನ ನಾವು ಒಟ್ಟು 20 ಏಕದಿನ ಪಂದ್ಯಗಳನ್ನು ಆಡಬೇಕಾಗಿದೆ ಎಂದು ಯುವ ಕ್ಯಾಪ್ಟನ್ ಸ್ಪಷ್ಟಪಡಿಸಿದ್ದಾರೆ.

20 ಏಕದಿನ ಪಂದ್ಯಗಳಿವೆ

ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಸುಭ್​ಮನ್ ಗಿಲ್, “ನನ್ನ ದೇಶವನ್ನು ಏಕದಿನ ಪಂದ್ಯಗಳಲ್ಲಿ ನಾಯಕತ್ವ ವಹಿಸುವುದು ಅತ್ಯಂತ ದೊಡ್ಡ ಗೌರವ. ಇಷ್ಟು ಉತ್ತಮ ಪ್ರದರ್ಶನ ನೀಡಿದ ತಂಡವನ್ನು ಮುನ್ನಡೆಸುವುದು ನನಗೆ ತುಂಬಾ ಹೆಮ್ಮೆಯ ವಿಷಯ. ನಾನು ಉತ್ತಮವಾಗಿ ಪ್ರದರ್ಶನ ನೀಡಬಲ್ಲೆ ಎಂದು ನಾನು ಭಾವಿಸುತ್ತೇನೆ. ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್‌ಗೆ ಮೊದಲು ನಮಗೆ ಸುಮಾರು 20 ಏಕದಿನ ಪಂದ್ಯಗಳಿವೆ, ಅವುಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ವಿಶ್ವಕಪ್​ ಗೆಲ್ಲುವುದು ನಮ್ಮ ಮುಂದಿರುವ ಗುರಿ. ದಕ್ಷಿಣ ಆಫ್ರಿಕಾಕ್ಕೆ ಹೋಗಿ ಪ್ರಶಸ್ತಿ ಗೆಲ್ಲುವ ಮೊದಲು ನಾವು ಸಂಪೂರ್ಣವಾಗಿ ಸಿದ್ಧರಾಗುತ್ತೇವೆ ಎಂದು ಆಶಿಸುತ್ತೇನೆ.” ಎಂದು ತಿಳಿಸಿದ್ದಾರೆ.

ಭಜ್ಜಿ ಗರಂ

ಏತನ್ಮಧ್ಯೆ, ಹರ್ಭಜನ್ ಸಿಂಗ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೇವಲ ಏಳು ತಿಂಗಳ ಹಿಂದೆ, ಹಿಟ್‌ಮ್ಯಾನ್ ಭಾರತವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನತ್ತ ಕೊಂಡೊಯ್ದಿದ್ದರು. ಆದ್ದರಿಂದ, ಟೀಮ್ ಇಂಡಿಯಾದ ಏಕದಿನ ನಾಯಕತ್ವದಲ್ಲಿ ಇಷ್ಟು ಬೇಗ ಬದಲಾವಣೆಯ ಅಗತ್ಯವಿರಲಿಲ್ಲ. ಏಕದಿನ ವಿಶ್ವಕಪ್‌ಗೆ ಇನ್ನೂ ಸಾಕಷ್ಟು ಸಮಯವಿದೆ. ಆದ್ದರಿಂದ, ಕನಿಷ್ಠ ಆಸ್ಟ್ರೇಲಿಯಾ ಪ್ರವಾಸಕ್ಕಾದರೂ ರೋಹಿತ್ ಶರ್ಮಾ ತಂಡದ ಉಸ್ತುವಾರಿ ವಹಿಸಿಕೊಳ್ಳಬೇಕಿತ್ತು ಎಂದು ಹರ್ಭಜನ್ ಸಿಂಗ್ ಆಯ್ಕೆಸಮಿತಿ ಮೇಲೆ ಗರಂ ಆಗಿದ್ದಾರೆ.

ರೋಹಿತ್ ಶರ್ಮಾ ದಾಖಲೆ

ರೋಹಿತ್ ಭಾರತದ ಅತ್ಯಂತ ಯಶಸ್ವಿ ಏಕದಿನ ನಾಯಕರಲ್ಲಿ ಒಬ್ಬರಾಗಿದ್ದು, 56 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು 42 ಗೆಲುವು ಪಡೆದಿದ್ದಾರೆ. ಇದರ ಪರಿಣಾಮವಾಗಿ 75 ಪ್ರತಿಶತದಷ್ಟು ಗೆಲುವಿನ ಸಾಧನೆ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಯುಎಇಯಲ್ಲಿ ಭಾರತ ಗೆದ್ದ ಚಾಂಪಿಯನ್ಸ್ ಟ್ರೋಫಿಯೂ ಸೇರಿದೆ, ಇದು ಜೂನ್ 2024ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಟಿ 20 ವಿಶ್ವಕಪ್ ಗೆಲುವಿನ ನಂತರ ಅವರ ನಾಯಕತ್ವದಲ್ಲಿ ಸತತ ಎರಡನೇ ಐಸಿಸಿ ಟ್ರೋಫಿಯಾಗಿತ್ತು. ಆದರೆ ಭವಿಷ್ಯದ ಚಿತ್ರಣವನ್ನ ನೋಡಿದಾಗ ರೋಹಿತ್ ಅವರನ್ನು ಬದಲಾಯಿಸುವುದು ಅನಿವಾರ್ಯ ಎಂದು ಅಗರ್ಕರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ತಂಡ

ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ್ ಜುರೆಲ್, ಅರ್ಷದೀಪ್ ಸಿಂಗ್