Shubman Gill: ಮೊದಲ ಟೆಸ್ಟ್​​ನಲ್ಲಿ ಗೆಲುವಿನ ಸನಿಹ ಬಂದು ಸೋಲು! ಕ್ಯಾಪ್ಟನ್ ಗಿಲ್​ ದೂಷಿಸಿದ್ದು ಯಾರನ್ನ ಗೊತ್ತಾ? | Dropped Catches and Lower-Order Failure Led to India s Loss says captain gill

Shubman Gill: ಮೊದಲ ಟೆಸ್ಟ್​​ನಲ್ಲಿ ಗೆಲುವಿನ ಸನಿಹ ಬಂದು ಸೋಲು! ಕ್ಯಾಪ್ಟನ್ ಗಿಲ್​ ದೂಷಿಸಿದ್ದು ಯಾರನ್ನ ಗೊತ್ತಾ? | Dropped Catches and Lower-Order Failure Led to India s Loss says captain gill

Last Updated:

ಸೋಲಿನ ನಂತರ ಮಾತನಾಡಿದ ಶುಭ್​ಮನ್ ಗೊಲ್​ “ಇದು ಅತ್ಯುತ್ತಮ ಟೆಸ್ಟ್ ಪಂದ್ಯವಾಗಿತ್ತು. ನಮಗೆ ಪಂದ್ಯದಲ್ಲಿ ಹಿಡಿತ ಸಾಧಿಸುವ ಸಾಕಷ್ಟು ಅವಕಾಶಗಳು ಸಿಕ್ಕಿದ್ದವು. ಆದರೆ ನಾವು ಕೈಯ್ಯಾರೆ ಹಾಳು ಮಾಡಿಕೊಂಡೆವು ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾಟೀಮ್ ಇಂಡಿಯಾ
ಟೀಮ್ ಇಂಡಿಯಾ

ಇಂಗ್ಲೆಂಡ್ (India vs England) ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತೀಯ ಬೌಲರ್‌ಗಳ (Indian Bowler) ಕಳಪೆ ಪ್ರದರ್ಶನ ಮತ್ತು ಕಳಪೆ ಫೀಲ್ಡಿಂಗ್‌ನ (Poor Fielding) ಸಂಪೂರ್ಣ ಲಾಭವನ್ನು ಪಡೆದುಕೊಂಡ ಇಂಗ್ಲೆಂಡ್, ಬೆನ್ ಡಕೆಟ್ (Ben Duckett) ಅವರ ಅದ್ಭುತ ಶತಕದ ಸಹಾಯದಿಂದ, 371 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು. ಮಂಗಳವಾರ ನಡೆದ ಮೊದಲ ಟೆಸ್ಟ್‌ನ ಐದನೇ ದಿನದಂದು ಭಾರತವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಭಾರತೀಯ ತಂಡದ ನಾಯಕ ಶುಭ್​ಮನ್ ಗಿಲ್ ಕೂಡ ಸೋಲಿಗೆ ಫೀಲ್ಡಿಂಗ್ ಅನ್ನು ದೂಷಿಸಿದರು.

ಕ್ಯಾಚ್​ಗಳನ್ನ ಬಿಟ್ಟಿದ್ದೇ ಸೋಲಿಗೆ ಪ್ರಮುಖ ಕಾರಣ

ಸೋಲಿನ ನಂತರ ಮಾತನಾಡಿದ ಶುಭ್​ಮನ್ ಗೊಲ್​ “ಇದು ಅತ್ಯುತ್ತಮ ಟೆಸ್ಟ್ ಪಂದ್ಯವಾಗಿತ್ತು. ನಮಗೆ ಪಂದ್ಯದಲ್ಲಿ ಹಿಡಿತ ಸಾಧಿಸುವ ಸಾಕಷ್ಟು ಅವಕಾಶಗಳು ಸಿಕ್ಕಿದ್ದವು. ಆದರೆ ನಾವು ಕೈಯ್ಯಾರೆ ಹಾಳು ಮಾಡಿಕೊಂಡೆವು. ಈ ಪಂದ್ಯದಲ್ಲಿ ಹಲವು ಕ್ಯಾಚ್ ಕೈಚೆಲ್ಲಿದೆವು, ಕೆಲವು ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದು ನಮಗೆ ದುಬಾರಿಯಾಯಿತು” ಎಂದರು.

430 ರನ್​ಗಳ ಗುರಿ ನೀಡಬೇಕೆಂದುಕೊಂಡಿದ್ದೆವು

” 4ನೇ ದಿನ ನಾವು ಉತ್ತಮವಾಗಿ ಬ್ಯಾಟಿಂಗ್ ಇಂಗ್ಲೆಂಡ್​ 430 ರನ್‌ಗಳ ಗುರಿಯನ್ನು ನೀಡುವ ಬಗ್ಗೆ ಯೋಚಿಸುತ್ತಿದ್ದೆವು ಆದರೆ ನಮ್ಮ ಕೊನೆಯ ವಿಕೆಟ್‌ಗಳು ಕೇವಲ 25 ರನ್‌ಗಳಿಗೆ ಬಿದ್ದವು. ಇಲ್ಲಿ ನಮ್ಮ ಪ್ಲಾನ ಉಲ್ಡಾ ಆಯಿತು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಫೀಲ್ಡಿಂಗ್ ಪ್ರದರ್ಶನದ ಬಗ್ಗೆ ನಾವು ಮಾತನಾಡಿದ್ದೇವೆ. ಮುಂದಿನ ಪಂದ್ಯಗಳಲ್ಲಿ ನಾವು ಈ ಎಲ್ಲಾ ತಪ್ಪುಗಳನ್ನ ಸುಧಾರಿಸಬೇಕಾಗಿದೆ. ಆದರೆ ನಮ್ಮ ತಂಡವು ಹೊಸದಾಗಿರುವುದರಿಂದ ಈ ಸೋಲು ನಮಗೆ ಒಂದು ಪಾಠವಾಗಲಿದೆ” ಗಿಲ್ ತಿಳಿಸಿದ್ದಾರೆ.

ಬುಮ್ರಾ ಲಭ್ಯತೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ

5ನೇ ದಿನ ಮೊದಲ ಸೆಷನ್‌ನಲ್ಲಿ ನಾವು ಅದ್ಭುತವಾಗಿ ಬೌಲಿಂಗ್ ಮಾಡಿದೆವು. ಚೆಂಡು ಹಳೆಯದಾದ ನಂತರ, ರನ್ ಗಳಿಸುವುದು ಸುಲಭವಾಗುತ್ತದೆ. ಆದರೆ ಚೆಂಡು ಹೊಸದಾದಾಗ, ವಿಕೆಟ್‌ಗಳನ್ನು ತೆಗೆದುಕೊಳ್ಳಬೇಕು.ಬುಮ್ರಾ ಈ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಉತ್ತಮ ಅವಕಾಶಗಳನ್ನ ಮಾಡಿಕೊಟ್ಟರು. ಆದರೆ ನಾವು ಸದುಪಯೋಗ ಪಡಿಸಿಕೊಳ್ಳಲಿಲ್ಲ ಎಂದರು. ಇನ್ನು ಬುಮ್ರಾ ಅವರ ಮುಂದಿನ ಪಂದ್ಯಗಳ ಲಭ್ಯತೆಯ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ, ಮುಂದಿನ ಪಂದ್ಯಕ್ಕೆ ಹತ್ತಿರವಾದಾಗ, ಬುಮ್ರಾ ಯಾವ ಪಂದ್ಯಗಳನ್ನು ಆಡಬೇಕೆಂದು ನಾವು ನಿರ್ಧರಿಸುತ್ತೇವೆ” ಎಂದು ಗಿಲ್ ಹೇಳಿದರು.

ಪಂದ್ಯದ ಬಗ್ಗೆ ಮಾಹಿತಿ

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 471 ರನ್​ಗಳಿಸಿದರ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ 465 ರನ್​ಗಳಿಸಿತು. ನಂತರ 2ನೇ ಇನ್ನಿಂಗ್ಸ್​​ನಲ್ಲಿ ಟೀಮ್ ಇಂಡಿಯಾ 364ಕ್ಕೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್​ಗೆ 371 ರನ್​ಗಳ ಗುರಿ ನೀಡಿತ್ತು. ಇಂಗ್ಲೆಂಡ್ ಬೆನ್ ಡಕೆಟ್ ಶತಕ (170 ಎಸೆತಗಳಲ್ಲಿ 21 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 149 ರನ್ ಗಳಿಸಿದರೆ) ಜ್ಯಾಕ್ ಕ್ರಾಲಿ 65 ರನ್ ಗಳಿಸಿ ಅಬ್ಬರಿಸಿದರು. ಮೊದಲ ವಿಕೆಟ್‌ಗೆ 188 ರನ್‌ಗಳ ಜೊತೆಯಾಟ ನೀಡುವ ಮೂಲಕ ಇಬ್ಬರೂ ಭಾರತಕ್ಕೆ ಪಂದ್ಯದಲ್ಲಿ ಮರಳಲು ಎಲ್ಲಾ ಮಾರ್ಗಗಳನ್ನು ಮುಚ್ಚಿದರು. ಇದರ ನಂತರ, ಜೋ ರೂಟ್ 53 ರನ್ ಗಳಿಸಿದರು ಮತ್ತು ಜೇಮೀ ಸ್ಮಿತ್ 44 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.