Shubman Gill: ಯಾಯಿ ಯಾಯಿ ಯಾಯಿಯೇ ಬಾಯ್ಸ್‌! ಸಾರಾ ಮುಂದೆ ಗಿಲ್‌ಗೆ ರೇಗಿಸಿದ ಜಡೇಜಾ, ಕೆಎಲ್‌ ರಾಹುಲ್‌!Anjali Tendulkar Notices As Jadeja Teases Shubman Gill In London Internet Cant Ignore Sara Angle

Shubman Gill: ಯಾಯಿ ಯಾಯಿ ಯಾಯಿಯೇ ಬಾಯ್ಸ್‌! ಸಾರಾ ಮುಂದೆ ಗಿಲ್‌ಗೆ ರೇಗಿಸಿದ ಜಡೇಜಾ, ಕೆಎಲ್‌ ರಾಹುಲ್‌!Anjali Tendulkar Notices As Jadeja Teases Shubman Gill In London Internet Cant Ignore Sara Angle

ಹೌದು, ಆ ಸೀನ್‌ನ ಹೀರೋ ನಮ್ಮ ‘ಪ್ರಿನ್ಸ್’ ಶುಭಮನ್ ಗಿಲ್ (Shubman Gill), ವಿಲನ್‌ಗಳು (ತಮಾಷೆಗಾಗಿ ಅಷ್ಟೇ!) ‘ಸರ್’ ರವೀಂದ್ರ ಜಡೇಜಾ (Ravindra Jadeja) ಮತ್ತು ಕೆ.ಎಲ್. ರಾಹುಲ್ (KL Rahul)!

ಗಿಲ್‌ಗೆ ಜಡ್ಡು-ರಾಹುಲ್ ಕಿಚಾಯಿಸಿದ್ದು, ಪಕ್ಕದಲ್ಲೇ ಇದ್ದ ಅಂಜಲಿ ತೆಂಡೂಲ್ಕರ್ ನೋಡಿದ್ದು!

ಈಗ ವೈರಲ್ ಆಗಿರೋ ವಿಡಿಯೋದಲ್ಲಿ ನಡೆದಿದ್ದೇನು ಅಂದ್ರೆ… ಒಂದು ಕಡೆ ಸರ್ ರವೀಂದ್ರ ಜಡೇಜಾ, ಇನ್ನೊಂದು ಕಡೆ ನಮ್ಮ ಕನ್ನಡಿಗ ಕೆ.ಎಲ್. ರಾಹುಲ್… ಇಬ್ಬರ ಮಧ್ಯೆ ಸಿಕ್ಕಿಹಾಕಿಕೊಂಡಿದ್ದು ನಮ್ಮ ಶುಭಮನ್ ಗಿಲ್! ಜಡೇಜಾ ಏನೋ ಒಂದು ಖತರ್ನಾಕ್ ಜೋಕ್ ಹೇಳಿ ಗಿಲ್‌ಗೆ ಕಾಲೆಳೆಯುತ್ತಿದ್ದರೆ, ರಾಹುಲ್ ಕೂಡಾ ಅದಕ್ಕೆ ದನಿಗೂಡಿಸಿ ನಗುತ್ತಿದ್ದರು.

ಅಷ್ಟಕ್ಕೂ ಆ ಜೋಕ್ ಏನಿತ್ತು ಅನ್ನೋದು ಸ್ಪಷ್ಟವಾಗಿಲ್ಲ. ಆದರೆ, ಪಕ್ಕದಲ್ಲೇ ಸಾರಾ ತೆಂಡೂಲ್ಕರ್ ಕೂಡಾ ಇದ್ದಿದ್ದರಿಂದ, ಜಡೇಜಾ ಅದೇ ವಿಷಯ ಇಟ್ಟುಕೊಂಡು ಗಿಲ್‌ನ ಕಾಲೆಳೆದಿದ್ದಾರೆ ಅಂತ ನೆಟ್ಟಿಗರು ಪಕ್ಕಾ ಡಿಸೈಡ್ ಮಾಡಿದ್ದಾರೆ. ಇಬ್ಬರ ಕಾಟ ತಾಳಲಾರದೆ, ಗಿಲ್ ಮುಖವಂತೂ ನಾಚಿಕೆಯಿಂದ ಕೆಂಪಾಗಿ, ಮುಗುಳ್ನಗುತ್ತಾ ಮುಖ ಮುಚ್ಚಿಕೊಳ್ಳೋ ದೃಶ್ಯ ನೋಡೋದೇ ಒಂದು ಚೆಂದ.

ಹಾಗಾದ್ರೆ, ತಮಾಷೆಗೆ ಕಾರಣ ಹಳೇ ಲವ್ ಸ್ಟೋರಿನಾ?

ಕೆಲವು ವರ್ಷಗಳ ಹಿಂದೆ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿದ್ದು ನಿಮಗೆ ನೆನಪಿರಬಹುದು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ಲೈಕ್ಸ್, ಕಾಮೆಂಟ್ಸ್ ಹಾಕಿಕೊಳ್ಳುತ್ತಿದ್ದರು. ನಂತರ, ಇಬ್ಬರೂ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದಾಗ ಈ ವದಂತಿ ತಣ್ಣಗಾಗಿತ್ತು.

ಈಗ ಮತ್ತೆ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರೋದ್ರಿಂದ, ನಮ್ಮ ಹುಡುಗರು ಗಿಲ್‌ಗೆ ಸುಮ್ಮನೆ ಇರೋಕೆ ಬಿಡ್ತಾರಾ? ಅದಕ್ಕೇ ಹೀಗೆ ಕಾಲೆಳೆದಿದ್ದಾರೆ ಅಂತ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಆದ್ರೆ, ಗಿಲ್ ಹೇಳಿದ್ದೇ ಬೇರೆ!

ಏಪ್ರಿಲ್‌ನಲ್ಲಿ ನಡೆದ ಒಂದು ಸಂದರ್ಶನದಲ್ಲಿ, “ನಾನು ಮೂರು ವರ್ಷದಿಂದ ಸಿಂಗಲ್ ಆಗಿದ್ದೇನೆ, ಸದ್ಯಕ್ಕೆ ನನ್ನ ಪೂರ್ತಿ ಗಮನ ಕ್ರಿಕೆಟ್ ಮೇಲೆ ಮಾತ್ರ” ಎಂದು ಗಿಲ್ ಹೇಳಿಕೊಂಡಿದ್ದರು. ಅತ್ತ ಸಾರಾ ತೆಂಡೂಲ್ಕರ್ ಹೆಸರು ಕೂಡ ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ಜೊತೆ ಕೇಳಿಬಂದಿತ್ತು, ಆದರೆ ಆ ಸ್ಟೋರಿ ಕೂಡಾ ಬ್ರೇಕಪ್ ಆಗಿದೆ ಎನ್ನಲಾಗುತ್ತಿದೆ.

ಯಾಕೇ ಆಗಿರಲಿ, ಯುವಿ ಪಾರ್ಟಿಯಲ್ಲಿ ನಡೆದ ಈ ತಮಾಷೆಯ ಕ್ಷಣ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ಮನರಂಜನೆ ನೀಡಿದೆ. ಹಾಗಾದ್ರೆ, ನಿಜವಾಗ್ಲೂ ಜಡೇಜಾ ಹೇಳಿದ ಆ ಜೋಕ್ ಏನಿರಬಹುದು ಎಂದು ನೀವು ಯೋಚಿಸುತ್ತೀರಾ?