Sirijatre: 9ಕ್ಕೂ ಹೆಚ್ಚು ಕಡೆ ತುಳುನಾಡಲ್ಲಿ ನಡೆಯುತ್ತೆ ಈ ಒಂದು ಜಾತ್ರೆ, ದೇವರಿಗೆ ಹರಕೆ ಮಾಡಿಕೊಂಡ್ರೆ ಕಷ್ಟಗಳಿಗೆ ಸಿಗುತ್ತೆ ಪರಿಹಾರ! | Dakshina Kannada festival | ಮಂಗಳೂರು ನ್ಯೂಸ್ (Mangaluru News)

Sirijatre: 9ಕ್ಕೂ ಹೆಚ್ಚು ಕಡೆ ತುಳುನಾಡಲ್ಲಿ ನಡೆಯುತ್ತೆ ಈ ಒಂದು ಜಾತ್ರೆ, ದೇವರಿಗೆ ಹರಕೆ ಮಾಡಿಕೊಂಡ್ರೆ ಕಷ್ಟಗಳಿಗೆ ಸಿಗುತ್ತೆ ಪರಿಹಾರ! | Dakshina Kannada festival | ಮಂಗಳೂರು ನ್ಯೂಸ್ (Mangaluru News)

Last Updated:

Dakshina Kannada ಮತ್ತು Udupi ಜಿಲ್ಲೆಗಳ Sirijatre ತುಳುವಿನ ಸುಗ್ಗಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಮರೋಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ 800 ವರ್ಷಗಳ ಇತಿಹಾಸ ಹೊಂದಿದ್ದು ಪ್ರವಾಸಿಗರ ಆಕರ್ಷಣೆಯಾಗಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಯಲ್ಲಿ ಆಚರಿಸಲಾಗುವ ಸಿರಿ ಜಾತ್ರೆಯ ಕಾಲ ತುಳುವಿನ ಸುಗ್ಗಿ ತಿಂಗಳು. ಕೇವಲ ಒಂದು ತಿಂಗಳ ಕಾಲ (1 Month) ಮಾತ್ರ ಆಚರಿಸಲಾಗುವ ಈ ಸಿರಿಜಾತ್ರೆಗೆ ತನ್ನದೇ ಆದ ಮಹತ್ವವಿದೆ. ತುಳುವರು ತಮ್ಮ ಕುಲದೇವರಿಗೆ, ಆರಾಧ್ಯ ದೈವಕ್ಕೆ ಹರಕೆ ಸಲ್ಲಿಸುವುದು ಸಿರಿ ಜಾತ್ರೆಯ (Sirijatre) ವಿಶಿಷ್ಟತೆಯೂ ಹೌದು. ಈ ಜಾತ್ರೆ ನಡೆಯುವ ಸ್ಥಳಗಳನ್ನು ಆಲಡೆ ಎಂದು ಕರೆಯಲಾಗುತ್ತದೆ. ತುಳುನಾಡಿನಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಸಿರಿ ಆಲಡೆಗಳಿವೆ ಎನ್ನುವುದು ಒಂದು ಅಂದಾಜು. ಇದರಲ್ಲಿ ಮರೋಡಿ ಶ್ರೀ ಉಮಾಮಹೇಶ್ವರ ಕೂಡ ಒಂದು, ಈ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರ ಮಹೋತ್ಸವ, ಸಿರಿ ಜಾತ್ರೆಯ ಸಂಭ್ರಮ,

ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹಸಿರು ಕಾನನಗಳ ಮಧ್ಯೆ ಕಂಗೊಳಿಸುತ್ತಿರುವ ಈ ಪುಣ್ಯಕ್ಷೇತ್ರ ಇದೀಗ ಪ್ರವಾಸಿಗರ (Tourist) ಆಕರ್ಷಣೀಯ ತಾಣವಾಗಿದೆ.

800 ವರ್ಷಗಳ ಇತಿಹಾಸ

ಅಜೀರ್ಣಾವಸ್ಥೆಯಲ್ಲಿ ಈ ದೇವಾಲಯವನ್ನು ನಾಲ್ಕು ವರ್ಷಗಳ ಹಿಂದೆ ಊರ- ಪರವೂರ ಭಕ್ತರ ಸಹಕಾರದಿಂದ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಶಿಲಾಮಯವಾಗಿ ನವೀಕರಿಸಲಾಗಿದೆ. ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಈ ಪುರಾತನ ದೇವಾಲಯ ಕಾರಣಿಕದ ಕ್ಷೇತ್ರವೂ ಹೌದು.

ಕಷ್ಟಗಳಿಗೆ ಪರಿಹಾರ

ಕ್ಷೇತ್ರದಲ್ಲಿ ಉಮಾಮಹೇಶ್ವರ ಪ್ರಧಾನ ದೇವರಾಗಿ, ಬ್ರಹ್ಮಲಿಂಗೇಶ್ವರ ಉಪದೇವರಾಗಿ ಸಾನ್ನಿಧ್ಯವಿದೆ. ಅಲ್ಲದೆ, ನಾಗಬ್ರಹ್ಮ, ರಕ್ತೇಶ್ವರಿ, ನಂದಿ, ಕ್ಷೇತ್ರಪಾಲರನ್ನು ಒಳಗೊಂಡ ಪಂಚಸಾನ್ನಿಧ್ಯವು ಇಲ್ಲಿದೆ. ಜತೆಗೆ ಸಿರಿಕುಮಾರ, ಅಬ್ಬಗ ದಾರಗ, ನಂದಿಗೋಣ ಮುಂತಾದ ಶಕ್ತಿಗಳು ಒಂದೇ ಕ್ಷೇತ್ರದಲ್ಲಿ ನೆಲೆಯಾಗಿರುವುದು ಮತ್ತೊಂದು ವಿಶೇಷ. ನಾಡಿನ ಸಾವಿರಾರು ಕುಟುಂಬಗಳಿಗೆ ಆಲಡೆ ಕ್ಷೇತ್ರವಾಗಿರುವ ಈ ದೇಗುಲಕ್ಕೆ ಭಕ್ತರು ಹರಕೆ ಹೊತ್ತು ಬಂದರೆ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಸಿಗುತ್ತದೆ ಎಂಬ ಪ್ರತೀತಿಯಿದೆ.

ಇದನ್ನೂ ಓದಿ: Homeless Fear: ಕೆಲಸದಿಂದ ನಿವೃತ್ತಿಯಾಗುವ ಜೊತೆ ನಿವೇಶನವನ್ನೂ ತೊರೆಯಬೇಕು, ಸೂರು ಸಹ ಇರಲ್ಲ ಎನ್ನುವ ಆತಂಕ ಈ ಜನಕ್ಕೆ!

ಈಗಾಗಲೇ ನೂರಾರು ಭಕ್ತರು ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ವಿವಾಹ ಸಮಸ್ಯೆ ಮುಂತಾದ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ಆಲಡೆಯ ಸಂಬಂಧ ಹೊಂದಿರುವ ಕುಟುಂಬಗಳು ಕ್ಷೇತ್ರಕ್ಕೆ ಬಂದು ಹುರುಳಿ ಹಾಗೂ ಇತರೆ ಧಾನ್ಯವನ್ನು ಹರಕೆಯ ರೂಪದಲ್ಲಿ ಸಲ್ಲಿಸಿ, ತಮ್ಮ ಕಷ್ಟ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಇಲ್ಲಿ ನಡೆಯುವ ಸಿರಿಗಳ ಜಾತ್ರೆ, ಕುಮಾರದರ್ಶನಕ್ಕೆ ನೋಡಲು ದಕ್ಷಿಣ ಕನ್ನಡ, ಉಡುಪಿ, ಕೇರಳ ಮತ್ತಿತರ ಕಡೆಗಳಿಂದ ಬರುತ್ತಿರುವುದು ಕ್ಷೇತ್ರದ ಮಹಿಮೆಗೆ ಹಿಡಿದ ಕನ್ನಡಿಯಾಗಿದೆ.

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.