SL vs ZIM: ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ಪಡೆದು ಶ್ರೀಲಂಕಾಗೆ ರೋಚಕ ಗೆಲುವು ತಂದುಕೊಟ್ಟ ಮದುಶಂಕಾ! ಗೆಲ್ಲುವ ಪಂದ್ಯ ಸೋತ ಜಿಂಬಾಬ್ವೆ | ZIM vs SL 1st ODI Dilshan Madushanka’s Brilliant Bowling Helps Sri Lanka Win by 7 Runs | ಕ್ರೀಡೆ

SL vs ZIM: ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ಪಡೆದು ಶ್ರೀಲಂಕಾಗೆ ರೋಚಕ ಗೆಲುವು ತಂದುಕೊಟ್ಟ ಮದುಶಂಕಾ! ಗೆಲ್ಲುವ ಪಂದ್ಯ ಸೋತ ಜಿಂಬಾಬ್ವೆ | ZIM vs SL 1st ODI Dilshan Madushanka’s Brilliant Bowling Helps Sri Lanka Win by 7 Runs | ಕ್ರೀಡೆ

Last Updated:

ಶ್ರೀಲಂಕಾದ ಎಡಗೈ ವೇಗದ ಬೌಲರ್ ಮಧುಶಂಕರ ಕೊನೆಯ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಸತತ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಇಡೀ ಪಂದ್ಯದ ಗತಿಯನ್ನೇ ಬದಲುಸಿತು. ಕೊನೆಯ ಓವರ್​​ನಲ್ಲಿ 10 ರನ್​ಗಳಿಸಲಾಗದೇ ಜಿಂಬಾಬ್ವೆ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನ ಕಳೆದುಕೊಂಡಿತು.

ಶ್ರೀಲಂಕಾಗೆ ರೋಚಕ ಜಯಶ್ರೀಲಂಕಾಗೆ ರೋಚಕ ಜಯ
ಶ್ರೀಲಂಕಾಗೆ ರೋಚಕ ಜಯ

ಜಿಂಬಾಬ್ವೆ (Zimbabwe) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ (Sri Lanka) ಭರ್ಜರಿ ರೋಚಕ ಗೆಲುವು ಸಾಧಿಸಿತು. ಮೊದಲ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 298 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಸುಲಭವಾಗಿ ಗೆಲುವಿನತ್ತ ಸಾಗುತ್ತಿತ್ತು. ಆದರೆ ಕೊನೆಯ ಓವರ್‌ನಲ್ಲಿ ಯಾರೂ ನಿರೀಕ್ಷಿಸದ ತಿರುವು ಸಂಭವಿಸಿತು. ಶ್ರೀಲಂಕಾದ ಎಡಗೈ ವೇಗದ ಬೌಲರ್ ಮದುಶಂಕಾ (Dilshan Madushanka)  ಕೊನೆಯ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಸತತ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಇಡೀ ಪಂದ್ಯದ ಗತಿಯನ್ನೇ ಬದಲುಸಿತು. ಕೊನೆಯ ಓವರ್​​ನಲ್ಲಿ 10 ರನ್​ಗಳಿಸಲಾಗದೇ ಜಿಂಬಾಬ್ವೆ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನ ಕಳೆದುಕೊಂಡಿತು.

298 ರನ್​ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಬ್ರಿಯಾನ್ ಬೆನಟ್ (0), ಬ್ರೆಂಡನ್ ಟೇಲರ್(0) ಮೊದಲ ಓವರ್​ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಬೆನ್ ಕರನ್ ಹಾಗೂ ಸೀನ್ ವಿಲಿಯಮ್ಸನ್ 3ನೇ ವಿಕೆಟ್​ 118 ರನ್​ಗಳ ಜೊತೆಯಾಟ ನೀಡಿ ಪಂದ್ಯವನ್ನ ಗೆಲುವಿನತ್ತ ತಂದರು. ವಿಲಿಯಮ್ಸನ್ 54 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ಗಳ ಸಹಿತ 57 ರನ್​ಗಳಿಸಿದರು. ಬೆನ್ ಕರನ್ 90 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 70 ರನ್​ಗಳಿಸಿ ಔಟ್ ಆದರು. ಇವರಿಬ್ಬರ ವಿಕೆಟ್ ನಂತರ ಬಂದ ವೆಸ್ಲೆ ಮಧೆವರ್ ಕೇವಲ 8 ರನ್​ಗಳಿಸಿ ಔಟ್ ಆದರು. ಈ ಹಂತದಲ್ಲಿ ಜಿಂಬಾಬ್ವೆ ಸುಲಭವಾಗಿ ಸೋಲಬಹುದು ಎಂದೆ ಭಾವಿಸಲಾಗಿತ್ತು.

ಇದನ್ನೂ ಓದಿ: Asia Cup: ಕೊಹ್ಲಿ- ರೋಹಿತ್​ ರೆಕಾರ್ಡ್ಸ್ ಸೇರಿ ಏಷ್ಯಾ ಕಪ್ ಇತಿಹಾಸದಲ್ಲಿ ಮುರಿಯಲಾಗದ ಟಾಪ್ 10 ದಾಖಲೆಗಳಿವು!

ಆಸದರೆ ಅನುಭವಿ ಸಿಕಂದರ್ ರಾಜಾ ಹಾಗೂ ಟೋನಿ ಮುನ್ಯೊಂಗಾ ಇಬ್ಬರು ಸೇರಿ ಮತ್ತೆ 6ನೇ ವಿಕೆಟ್​​ ಜೊತೆಯಾಟದಲ್ಲಿ 127 ರನ್​ ಜೊತೆಯಾಟ ನಡೆಸಿ ಪಂದ್ಯವನ್ನ ಗೆಲುವಿನ ಸನಿಹ ತಂದಿದ್ದರು. ಕೊನೆಯ 12 ಎಸೆತಗಳಲ್ಲಿ 17 ರನ್​ಗಳ ಅಗತ್ಯವಿತ್ತು. 19ನೇ ಓವರ್​ನಲ್ಲಿ ಅಸಿತಾ ಫರ್ನಾಂಡೊ ಕೇವಲ 7 ರನ್​ ಬಿಟ್ಟುಕೊಟ್ಟರು. 19ನೇ ಓವರ್​ನಲ್ಲಿ ಮೊದಲ ಎಸೆತದಲ್ಲೇ ಬೌಂಡರಿ ಬಂದರೂ ಉಳಿದ ಐದು ಎಸೆತಗಳಲ್ಲಿ ಕೇವಲ 3 ರನ್ ಬಿಟ್ಟುಕೊಟ್ಟು ಕೊನೆಯ ಓವರ್​​ಗೆ 10 ರನ್ ಉಳಿಸಿಕೊಟ್ಟರು.

ಮದುಶಂಕಾ ಕೊನೆಯ ಓವರ್​ನ ಮೊದಲ ಎಸೆತದಲ್ಲೇ 87 ಎಸೆತಗಳಲ್ಲಿ 8 ಬೌಂಡರಿ ಸಹಿತ 92 ರನ್​ಗಳಿಸಿದ್ದ ಸಿಕಂದರ್ ರಾಜಾ ವಿಕೆಟ್ ಹಾರಿಸಿ ಬಿಗ್ ಬ್ರೇಕ್ ಕೊಟ್ಟರು. ಆ ನಂತರ ಬಂದ ಬ್ರಾಡ್ ಇವನ್ಸ್ ಕ್ಯಾಚ್ ನೀಡಿ ಡಕ್ ಔಟ್ ಆದರು. ನಂತರ ಬಂದ ನಗರ್ವಾ(0) ಬೌಲ್ಡ್ ಮಾಡಿ ಹ್ಯಾಟ್ರಿಕ್ ಸಾಧಿಸಿದರು. ಕೊನೆಯ 3 ಎಸೆತಗಳಲ್ಲಿ ಮದುಶಂಕಾ 2 ರನ್ ಬಿಟ್ಟುಕೊಟ್ಟು 7 ರನ್​ಗಳ ರೋಚಕ ಗೆಲುವು ತಂದುಕೊಟ್ಟರು.

ನಗರ್ವ 34ಕ್ಕೆ 2, ಮುಜರಬನಿ 65ಕ್ಕೆ1, ಟ್ರೆವರ್ ಗ್ವಾಂಡು 61ಕ್ಕೆ 1, ಸಿಕಂದರ್ ರಾಜಾ 48ಕ್ಕೆ1 , ಸೀನ್ ವಿಲಿಯಮ್ಸನ್ 26ಕ್ಕೆ1 ವಿಕೆಟ್ ಪಡೆದು ಮಿಂಚಿದ್ದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

SL vs ZIM: ಕೊನೆಯ ಓವರ್​ನಲ್ಲಿ ಹ್ಯಾಟ್ರಿಕ್ ಪಡೆದು ಶ್ರೀಲಂಕಾಗೆ ರೋಚಕ ಗೆಲುವು ತಂದುಕೊಟ್ಟ ಮದುಶಂಕಾ! ಗೆಲ್ಲುವ ಪಂದ್ಯ ಸೋತ ಜಿಂಬಾಬ್ವೆ