Someshwara Beach: ಸೋಮೇಶ್ವರ ಕ್ಷೇತ್ರದಲ್ಲಿ ಪಿತೃಗಳಿಗೆ ಪಿಂಡ ಪ್ರದಾನ, ಶಿವಕ್ಷೇತ್ರದಲ್ಲಿ ಜನವೋ ಜನ! | Mahalaya Amavasya | ದಕ್ಷಿಣ ಕನ್ನಡ

Someshwara Beach: ಸೋಮೇಶ್ವರ ಕ್ಷೇತ್ರದಲ್ಲಿ ಪಿತೃಗಳಿಗೆ ಪಿಂಡ ಪ್ರದಾನ, ಶಿವಕ್ಷೇತ್ರದಲ್ಲಿ ಜನವೋ ಜನ! | Mahalaya Amavasya | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಕ್ಷೇತ್ರದಲ್ಲಿ ಪಿತೃ ಅಮಾವಾಸ್ಯೆಯಂದು ಹಿಂದೂ ಭಕ್ತರು ಪಿತೃಗಳಿಗೆ ಪಿಂಡ ಪ್ರದಾನ ಮಾಡುತ್ತಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಹಿಂದೂಗಳಿಗೆ ಅತ್ಯಂತ ನಂಬಿಕೆಯ ಸಂಪ್ರದಾಯಗಳಲ್ಲಿ ಪಿತೃಗಳಿಗೆ ಪಿಂಡ ಪ್ರದಾನವೂ (Pinda Pradana) ಒಂದು. ಮಹಾಲಯ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆಯಂದು ಹಿಂದೂಗಳು (Hindu) ಗತಿಸಿ ಹೋದ ಪಿತೃಗಳಿಗೆ ಪಿಂಡ ಪ್ರಧಾನವನ್ನು ಈ ದಿನದಂದು ಮಾಡುತ್ತಾರೆ. ಪ್ರಮುಖವಾಗಿ ಸಂಗಮ ಕ್ಷೇತ್ರಗಳಲ್ಲಿ ಮತ್ತು ಕಡಲ ತೀರದ ಶಿವಕ್ಷೇತ್ರಗಳಲ್ಲಿ ಈ ಪಿಂಡ ಪ್ರಧಾನಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಲ ತೀರದ ಶಿವಕ್ಷೇತ್ರವಾದ ಉಳ್ಳಾಲ ತಾಲೂಕಿನ ಸೋಮೇಶ್ವರ (Someshwara) ಕ್ಷೇತ್ರದಲ್ಲಿ ಪಿಂಡ ಪ್ರಧಾನಕ್ಕಾಗಿ ಪಿತೃ ಅಮಾವಾಸ್ಯೆಯಂದು ವಿಶೇಷ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ನೂರಾರು ಸಂಖ್ಯೆಯ ಭಕ್ತರಿಂದ ಪಿಂಡ ಪ್ರದಾನ

ಈ ದಿನದಂದು ಕ್ಷೇತ್ರದ ವ್ಯಾಪ್ತಿಗೆ ಬರುವ ಕಡಲ ತೀರದಲ್ಲಿ ನೂರಾರು ಸಂಖ್ಯೆಯ ಭಕ್ತರು ಪಿತೃಗಳಿಗೆ ಪಿಂಡ ಪ್ರದಾನ ಮಾಡುತ್ತಾರೆ. ಪ್ರತೀ ಪಿತೃ ಅಮಾವಾಸ್ಯೆಯಂದು ಕ್ಷೇತ್ರಕ್ಕೆ ಪಿಂಡಪ್ರದಾನಕ್ಕೆ ಬರುವವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಪಿಂಡ ಪ್ರಧಾನಕ್ಕೆ ಬೇಕಾದ ಅರ್ಚಕರ ವ್ಯವಸ್ಥೆಯನ್ನೂ ಕ್ಷೇತ್ರದ ವತಿಯಿಂದ ಮಾಡಲಾಗುತ್ತಿದ್ದು, ಹೊರಗಿನ ಅರ್ಚಕರನ್ನೂ ಈ ಕಾರ್ಯಕ್ಕಾಗಿ ನೇಮಿಸುವ ವ್ಯವಸ್ಥೆಯೂ ಇಲ್ಲಿದೆ. ಸಾಮೂಹಿಕವಾಗಿ ಅಥವಾ ವೈಯುಕ್ತಿಕವಾಗಿ ಪಿಂಡ ಪ್ರಧಾನ ಮಾಡಲು ಅವಕಾಶವನ್ನೂ ಇಲ್ಲಿ ಮಾಡಲಾಗುತ್ತದೆ.

ಪಿಂಡ ಪ್ರದಾನವು ಹಿಂದೂ ಸಂಪ್ರದಾಯದ ಪ್ರಕಾರ ಪಿತೃ ಪಕ್ಷದಲ್ಲಿ ಪೂರ್ವಜರನ್ನು ಗೌರವಿಸುವ ಪೂಜಾ ವಿಧಾನವಾಗಿದೆ.

ಇದನ್ನೂ ಓದಿ: New Product: ಮಾರುಕಟ್ಟೆಗೆ ಬಂತು ಈ ಹೊಸ ಉತ್ಪನ್ನ, ಆರೋಗ್ಯಕ್ಕೂ ತುಂಬಾ ಒಳ್ಳೆಯದು!

ಈ ವಿಧಾನವು ಮುಖ್ಯವಾಗಿ ಅಕ್ಕಿ, ಎಳ್ಳು ಮತ್ತು ತುಪ್ಪದಿಂದ ಮಾಡಿದ ಪಿಂಡಗಳನ್ನು ತಯಾರಿಸುವುದು, ನಂತರ ಅವರನ್ನು ಆಹ್ವಾನಿಸಿ ನೀರು ಮತ್ತು ಪಿಂಡಗಳನ್ನು ಅರ್ಪಿಸುವುದನ್ನು ಒಳಗೊಂಡಿರುತ್ತದೆ. ಇದು ಪೂರ್ವಜರ ಆತ್ಮಕ್ಕೆ ಶಾಂತಿ ಮತ್ತು ಮೋಕ್ಷವನ್ನು ನೀಡುತ್ತದೆ ಮತ್ತು ಕುಟುಂಬದಲ್ಲಿ ಸಮೃದ್ಧಿ ತರುತ್ತದೆ ಎಂಬ ನಂಬಿಕೆಯಿದೆ.