Last Updated:
ಗಂಗೂಲಿ 1992ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. 1996ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟ ಅವರು, 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತಕ್ಕಾಗಿ 113 ಟೆಸ್ಟ್ ಪಂದ್ಯಗಳಲ್ಲಿ 16 ಶತಕಗಳೊಂದಿಗೆ 7212 ರನ್ ಗಳಿಸಿದರು.
ಸೌರವ್ ಗಂಗೂಲಿ ( Sourav Ganguly) ಭಾರತೀಯ ಕ್ರಿಕೆಟ್ನ ದಿಗ್ಗಜರಲ್ಲಿ ಒಬ್ಬರು. ತಮ್ಮ ನಾಯಕತ್ವದ (Captaincy) ಮೂಲಕ ಭಾರತ ತಂಡದ ದಿಕ್ಕನ್ನೇ ಬದಲಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜೊತೆಗೆ, ಅವರು ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ರಂತಹ ಶ್ರೇಷ್ಠ ಬ್ಯಾಟ್ಸ್ಮನ್ಗಳ ಜೊತೆಗೆ ತಮ್ಮ ಕಾಲದ ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ವಿದೇಶಿ ಮೈದಾನಗಳಲ್ಲಿ ಎದುರಾಳಿಗಳ ಬೌಲರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದ ಗಂಗೂಲಿ, ತಮ್ಮ ಅದ್ಭುತ ಬ್ಯಾಟಿಂಗ್ನಿಂದ ಕ್ರಿಕೆಟ್ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.
ಗಂಗೂಲಿ ದಾಖಲೆಗಳು
ಗಂಗೂಲಿ 1992ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. 1996ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟ ಅವರು, 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತಕ್ಕಾಗಿ 113 ಟೆಸ್ಟ್ ಪಂದ್ಯಗಳಲ್ಲಿ 16 ಶತಕಗಳೊಂದಿಗೆ 7212 ರನ್ ಗಳಿಸಿದರು. ಏಕದಿನ ಕ್ರಿಕೆಟ್ನಲ್ಲಿ 311 ಪಂದ್ಯಗಳಲ್ಲಿ 22 ಶತಕಗಳು ಮತ್ತು 72 ಅರ್ಧಶತಕಗಳೊಂದಿಗೆ 11363 ರನ್ ಕಲೆಹಾಕಿದರು. ಈ ಎಡಗೈ ಬ್ಯಾಟ್ಸ್ಮನ್ ತಮ್ಮ ಆಕರ್ಷಕ ಆಟದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟರು.
ಮೆಕ್ಗ್ರಾತ್ ಅತ್ಯಂತ ಕಠಿಣ ಬೌಲರ್
ಅಂತಹ ಅನುಭವಿ ಮತ್ತು ಕೌಶಲ್ಯಪೂರ್ಣ ಆಟಗಾರನಾದ ಗಂಗೂಲಿಯನ್ನು ನಿಮಗೆ ಕಷ್ಟಕೊಟ್ಟಿದ್ದ ಬೌಲರ್ ಯಾರು ಎಂದು ಕೇಳಿದಾಗ, ಅವರೇ ಸ್ವತಃ ಈ ಬಗ್ಗೆ ಮಾತನಾಡಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಗಂಗೂಲಿ ಆಸ್ಟ್ರೇಲಿಯಾದ ದಂತಕಥೆಯ ವೇಗಿ ಗ್ಲೆನ್ ಮೆಕ್ಗ್ರಾತ್ರನ್ನು ತಮ್ಮನ್ನು ಹೆಚ್ಚು ಸವಾಲಿಗೆ ಒಡ್ಡಿದ ಬೌಲರ್ ಎಂದು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ವಸೀಮ್ ಅಕ್ರಮ್ ಮತ್ತು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ರಂತಹ ಬೌಲರ್ಗಳಿದ್ದರೂ, ಗಂಗೂಲಿಗೆ ಮೆಕ್ಗ್ರಾತ್ ಅತ್ಯಂತ ಕಠಿಣ ಎದುರಾಳಿಯಾಗಿದ್ದರು.
ಮೆಕ್ಗ್ರಾತ್ ಅಂಕಿ ಅಂಶ
ಗ್ಲೆನ್ ಮೆಕ್ಗ್ರಾತ್ ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು. 1993ರಿಂದ 2007ರವರೆಗೆ 124 ಟೆಸ್ಟ್ ಪಂದ್ಯಗಳಲ್ಲಿ 563 ವಿಕೆಟ್ಗಳನ್ನು ಪಡೆದ ಅವರು, ಏಕದಿನ ಕ್ರಿಕೆಟ್ನಲ್ಲಿ 250 ಪಂದ್ಯಗಳಲ್ಲಿ 381 ವಿಕೆಟ್ಗಳನ್ನು ಪಡೆದಿದ್ದಾರೆ. ಎರಡು ಟಿ20 ಪಂದ್ಯಗಳಲ್ಲಿ 5 ವಿಕೆಟ್ಗಳನ್ನು ಪಡೆದಿದ್ದಾರೆ. ಇದರ ಜೊತೆಗೆ, ಐಪಿಎಲ್ನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ (ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್) ತಂಡದ ಪರ 14 ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಕಬಳಿಸಿದ್ದಾರೆ.
1999ರಿಂದ 2011ರವರೆಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ವಿಶ್ವದ ಬಲಿಷ್ಠ ತಂಡವಾಗಿತ್ತು. ಈ ಅವಧಿಯಲ್ಲಿ ಆಸ್ಟ್ರೇಲಿಯಾ ಸತತ ಮೂರು ಏಕದಿನ ವಿಶ್ವಕಪ್ಗಳನ್ನು (1999, 2003, 2007) ಗೆದ್ದಿತು. ಈ ಯಶಸ್ಸಿನಲ್ಲಿ ಮೆಕ್ಗ್ರಾತ್ರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಅವರ ನಿಖರವಾದ ಬೌಲಿಂಗ್, ವೇಗ, ಮತ್ತು ಒತ್ತಡದ ಸಂದರ್ಭಗಳಲ್ಲಿ ವಿಕೆಟ್ಗಳನ್ನು ಪಡೆಯುವ ಸಾಮರ್ಥ್ಯವು ಎದುರಾಳಿಗಳಿಗೆ ದೊಡ್ಡ ಸವಾಲಾಗಿತ್ತು.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 24, 2025 6:58 PM IST