Special Art: ಮಕ್ಕಳ ಏಕಾಗ್ರತೆ ಹೆಚ್ಚಾಗಲು ಈ ವಿದ್ಯೆ ಸಹಕಾರಿ, ಮಹಾಭಾರತದ ಕಲೆ ಈಗ್ಲೂ ಜೀವಂತ! | Mangaluru Gandhari Vidye Campaign reveals children inner consciousness power | ಮಂಗಳೂರು ನ್ಯೂಸ್ (Mangaluru News)

Special Art: ಮಕ್ಕಳ ಏಕಾಗ್ರತೆ ಹೆಚ್ಚಾಗಲು ಈ ವಿದ್ಯೆ ಸಹಕಾರಿ, ಮಹಾಭಾರತದ ಕಲೆ ಈಗ್ಲೂ ಜೀವಂತ! | Mangaluru Gandhari Vidye Campaign reveals children inner consciousness power | ಮಂಗಳೂರು ನ್ಯೂಸ್ (Mangaluru News)

Last Updated:

ಮಂಗಳೂರಿನ ಶ್ರೀ ಗೋಕುಲಧಾಮದಲ್ಲಿ ರೂಪಶ್ರೀ ಗಾಂಧಾರಿ ವಿದ್ಯೆ ಶಿಬಿರ ನಡೆಸಿ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿದರೂ ಓದು ಬರಹ ಚೆಸ್ ಆಟ ಕಲಿಸುತ್ತಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿದರೂ ಮಕ್ಕಳು (Children) ಓದುತ್ತಾರೆ, ಬರೆಯುತ್ತಾರೆ, ಚೆಸ್ ಆಡುತ್ತಾರೆ, ದೂರದಲ್ಲಿರುವ ವಸ್ತುವನ್ನು (Items) ಗುರುತಿಸುತ್ತಾರೆ. ಅಬ್ಬಾ ಏನಿವರ ಶಕ್ತಿ? ಹೇಗಿದು ಸಾಧ್ಯ? ಎಂದು ಎದುರಿಗಿರುವವರು ಒಂದು ಕ್ಷಣ ದಂಗಾಗಿಯೇ ಆಗುತ್ತಾರೆ.

ಗೋಕುಲಧಾಮದಿಂದ ವಿಶೇಷ ಶಿಬಿರ

ಹೌದು, ಇದು ಗಾಂಧಾರಿ ವಿದ್ಯೆಯ ಕರಾಮತ್ತು. ಭಾರತೀಯ ಸನಾತನ ಋಷಿ ಮುನಿ ಪರಂಪರೆಯಿಂದ ಪ್ರಣೀತವಾದ ಈ ವಿದ್ಯೆಯು ಮಾನವನ ‘ಅಂತರ್ ಚೇತನ’ದ ವೃದ್ಧಿಯಿಂದ ಸಾಧಿಸಲಾಗುತ್ತದೆ. ಮಂಗಳೂರಿನ ಶ್ರೀ ಗೋಕುಲಧಾಮ ಪ್ರಸ್ತುತಿಯ ರೂಪಶ್ರೀ ಸನಾತನ ಧರ್ಮದ ಕಲೆ ಉಳಿಯಬೇಕೆಂಬ ನಿಟ್ಟಿನಲ್ಲಿ ಈ ಕಲೆಯನ್ನು ಶಿಬಿರಗಳನ್ನು ನಡೆಸಿ ಮಕ್ಕಳಿಗೆ ಕಲಿಸುತ್ತಿದ್ದಾರೆ.

ಏನಿದು ಗಾಂಧಾರಿ ವಿದ್ಯೆ? ಏನಿದರ ವಿಶೇಷ?

ನಮ್ಮ ಋಷಿ ಪರಂಪರೆ ಭೂತ, ಭವಿಷ್ಯತ್, ವರ್ತಮಾನವನ್ನು ತಮ್ಮ ದಿವ್ಯದೃಷ್ಟಿ ಎಂಬ ಶಕ್ತಿಯಿಂದಲೇ ಗ್ರಹಿಸುತ್ತಿತ್ತು. ಇದರಿಂದಲೇ ಹಿಂದೆ ನಡೆದಿರುವ, ಪ್ರಸ್ತುತ ನಡೆಯುತ್ತಿರುವ, ಮುಂದೆ ನಡೆಯಲಿರುವ ಘಟನೆಗಳನ್ನು ಕರಾರುವಕ್ಕಾಗಿ ಹೇಳುವ ಶಕ್ತಿ ಹೊಂದಿದ್ದರು. ನಮ್ಮ ಋಷಿಮುನಿಗಳು ಕರಗತ ಮಾಡಿಕೊಂಡಿದ್ದ ವಿದ್ಯೆಯನ್ನೇ ಇಲ್ಲಿ ಪ್ರಸ್ತುತಿ ಪಡಿಸಲಾಗುತ್ತಿದೆ. ಮಹಾಭಾರತದ ಗಾಂಧಾರಿಯು ಕಣ್ಣಿಗೆ ಬಟ್ಟೆ ಕಟ್ಟಿಯೇ ಎಲ್ಲವನ್ನೂ ಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಈ ವಿದ್ಯೆಗೆ ‘ಗಾಂಧಾರಿ ವಿದ್ಯೆ’ ಎಂಬ ಹೆಸರು ಬಂದಿದೆ.

ಆರನೇ ಇಂದ್ರಿಯದ ಬಗ್ಗೆ ನಿಮಗೆ ಗೊತ್ತಾ?

ಇದನ್ನೂ ಓದಿ: Great Man: ನಡುಗಡ್ಡೆಯ ಶಾಲೆಗೆ ಶಾಶ್ವತ ʼಬೆಳಕುʼ ನೀಡಿದ ಮಕ್ಕಳು; ಇದಕ್ಕೆ ಕಾರಣವಾಗಿದ್ದು 76 ವರ್ಷದ ಹಿರಿಯ ಕಲಾವಿದ!

ಈ ವಿದ್ಯೆ ಕರಗತ ಮಾಡಲು ವಿದ್ಯಾರ್ಥಿಗಳಿಗೆ ಧ್ಯಾನ, ಅಗ್ನಿಹೋತ್ರಗಳನ್ನು ಕಲಿಸಲಾಗುತ್ತದೆ. ಜೊತೆಗೆ ಸುಪ್ತ ಮನಸ್ಸು ಜಾಗೃತಿಗೊಳಿಸಿ, ಚಿತ್ ಶಕ್ತಿ ವೃದ್ಧಿಗೊಳಿಸಲಾಗುತ್ತದೆ. ಈ ಮೂಲಕ ಮೂರನೇ ಕಣ್ಣನ್ನು ತೆರೆಸುವ, ಆರನೇ ಇಂದ್ರಿಯವನ್ನು ಜಾಗೃತ ಸ್ಥಿತಿಗೆ ತರುವ, ಅಂತಃಪ್ರಜ್ಞೆಯನ್ನು ಎಚ್ಚರಗೊಳಿಸುವ ಮೂಲಕ ನಮಗೇ ಗೊತ್ತಿಲ್ಲದೆ ನಮ್ಮಲ್ಲಿ ಅಡಕವಾಗಿರುವ ಶಕ್ತಿಯನ್ನು ಹೊರಕ್ಕೆ ತರಲಾಗುತ್ತದೆ. ಈ ವಿಶೇಷ ವಿದ್ಯೆಯನ್ನು ಮಕ್ಕಳ ಮೂಲಕ ಮತ್ತೆ ಪರಿಚಯಿಸಲು ಹೊರಟಿರುವ ರೂಪಶ್ರೀಯವರ ಕಾರ್ಯ ನಿಜಕ್ಕೂ ಶ್ಲಾಘನೀಯ.

Disclaimer

ಇಲ್ಲಿ ಔಷಧಿ ಮತ್ತು ಚಿಕಿತ್ಸೆಯ ಕುರಿತಾಗಿ ನೀಡಿರುವ ಎಲ್ಲಾ ಮಾಹಿತಿ ತಜ್ಞರನ್ನು ಸಂಪರ್ಕಿಸಿದ ನಂತರವೇ ನೀಡಲಾಗಿದೆ. ಇದು ಕೇವಲ ಸಾಮಾನ್ಯ ಮಾಹಿತಿಯಾಗಿದ್ದು ವ್ಯಕ್ತಿಗತವಾದ ಸಲಹೆ ಅಲ್ಲ. ಆದ್ದರಿಂದ ಇವುಗಳನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಲೋಕಲ್ 18 ಈ ಮಾಹಿತಿಯ ಬಳಕೆಯಿಂದ ಉಂಟಾದ ಯಾವುದೇ ಹಾನಿ/ನಷ್ಟಕ್ಕೆ ಜವಾಬ್ದಾರರಲ್ಲ.