Special Dish Recipe: ಕರಾವಳಿಯ ಈ ‘ಕೊಟ್ಟಿಗೆ’ ತಿಂಡಿ ತಿಂದಿದ್ದೀರಾ? ಇಲ್ಲಿದೆ ನೋಡಿ ಆರೋಗ್ಯದ ಜೊತೆ ರುಚಿ ನೀಡುವ ರೆಸಿಪಿ! | Jackfruit Leaf Recipe | ದಕ್ಷಿಣ ಕನ್ನಡ

Special Dish Recipe: ಕರಾವಳಿಯ ಈ ‘ಕೊಟ್ಟಿಗೆ’ ತಿಂಡಿ ತಿಂದಿದ್ದೀರಾ? ಇಲ್ಲಿದೆ ನೋಡಿ ಆರೋಗ್ಯದ ಜೊತೆ ರುಚಿ ನೀಡುವ ರೆಸಿಪಿ! | Jackfruit Leaf Recipe | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಹಲಸಿನ ಎಲೆಯ ಕೊಟ್ಟಿಗೆ ತಿಂಡಿಗೆ ಭಾರೀ ಡಿಮ್ಯಾಂಡ್ ಇದೆ, ಮೋದಕ ಸೇರಿದಂತೆ ವಿವಿಧ ತಿಂಡಿಗಳು ಗಣೇಶನಿಗೆ ಸಮರ್ಪಣೆ ಆಗುತ್ತವೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ವಿಘ್ನ ನಿವಾರಕ ಗಣೇಶನ ಹಬ್ಬ (Ganesh Festival) ಸಡಗರ ಸಂಭ್ರಮದಿಂದ ದೇಶದೆಲ್ಲೆಡೆ ಆಚರಣೆಯಲ್ಲಿದೆ. ಕೆಲವು ಕಡೆಗಳಲ್ಲಿ ಈ ಹಬ್ಬವನ್ನು ಒಂದೇ ದಿನದಲ್ಲಿ ಮಾಡಿ ಮುಗಿಸಿದರೆ, ಇನ್ನು ಕೆಲವು ಕಡೆಗಳಲ್ಲಿ ತಿಂಗಳುಗಟ್ಟಲೆ ಗಣೇಶನ ಹಬ್ಬದ ಮೂಡ್ ಜೋರಾಗಿಯೇ ಇರುತ್ತೆ. ಈ ಹಬ್ಬದ ಆಚರಣೆಯಲ್ಲಿ ವಿಭಿನ್ನ ಬಗೆಯ ತಿಂಡಿಗಳಿಗೂ ಮಹತ್ವವಿದೆ. ಮೋದಕದಿಂದ (Modaka) ಹಿಡಿದು ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿ ಗಣೇಶನಿಗೆ ಸಮರ್ಪಿಸುತ್ತಾರೆ. ಕರಾವಳಿಯಲ್ಲಿ ಗಣೇಶ ಚತುರ್ಥಿ ದಿನ ಹಲಸಿನ ಎಲೆಯಿಂದ (Jackfruit Leaf) ತಯಾರಿಸಿದ ಈ ಭಾಗದಲ್ಲಿ ಕೊಟ್ಟಿಗೆ (Kottige) ಎಂದು ಕರೆಯಲಾಗುವ ತಿಂಡಿಯನ್ನು ತಯಾರಿಸುತ್ತಾರೆ. ಇದರ ರುಚಿ ಬಹಳ ಚೆನ್ನಾಗಿರುತ್ತೆ.

ಮಾರುಕಟ್ಟೆಯಲ್ಲೂ ಲಭ್ಯ

ಈ ಹಿಂದೆ ಹೆಚ್ಚಿನ ಮನೆಗಳಲ್ಲಿ ಈ ಕೊಟ್ಟಿಗೆಯನ್ನು ತಾವೇ ಸಿದ್ಧಪಡಿಸುತ್ತಿದ್ದರು. ಮನೆಯ ಹಿರಿಯರು ಈ ಕೊಟ್ಟಿಗೆಯನ್ನು ಸಿದ್ಧಪಡಿಸುತ್ತಿದ್ದರು. ಆದರೆ ಇತ್ತೀಚೆಗೆ ಹಿರಿಯರು ಇಲ್ಲದ ಮನೆಗಳಲ್ಲಿ ಈ ಕೊಟ್ಟಿಗೆ ಸಿದ್ಧಪಡಿಸಲು ಸಾಧ್ಯವಾಗದವರು ಮಾರುಕಟ್ಟೆಯಿಂದ ಈ ಕೊಟ್ಟಿಗೆಯನ್ನು ತಂದು ತಿಂಡಿ ತಯಾರಿಸುತ್ತಾರೆ.

ಹಲಸಿನ ಎಲೆ ಬೇಕು

ಹಲಸಿನ ನಾಲ್ಕು ಎಲೆಗಳನ್ನು ಸರಿಯಾಗಿ ಜೋಡಿಸಿಕೊಂಡು ಅವುಗಳನ್ನು ಸಣ್ಣ ಪಾತ್ರೆಯ ರೂಪದಲ್ಲಿ ನಿರ್ಮಿಸಲಾಗುತ್ತದೆ. ಅದರ ಒಳಗೆ ಅಕ್ಕಿ ಹಿಟ್ಟನ್ನು ತುಂಬಿಸಿ ಹಬೆಯ ಮೂಲಕ ಬೇಯಿಸಲಾಗುತ್ತದೆ. ಇಡ್ಲಿ ತಯಾರಿಸಲು ಬೇಕಾದ ಹಿಟ್ಟನ್ನೇ ಇದಕ್ಕೂ ಬಳಸಲಾಗುತ್ತಿದ್ದರೂ, ಹಲಸಿನ ಎಲೆಯಲ್ಲಿ ತಯಾರಾದ ಈ ತಿಂಡಿಯನ್ನು ಕರಾವಳಿಯ ಜನ ಹೆಚ್ಚು ಇಷ್ಟಾನೂ ಪಡುತ್ತಾರೆ.