Last Updated:
ದಕ್ಷಿಣ ಕನ್ನಡದಲ್ಲಿ ನಾಗರಪಂಚಮಿಯ ಸಂಭ್ರಮ. ಈ ದಿನ ಅರಿಶಿನ ಎಲೆಯಲ್ಲಿ ಗಟ್ಟಿ ತಯಾರಿಸಿ ಸೇವಿಸುವ ಸಂಪ್ರದಾಯ. ಅರಿಶಿನದ ರೋಗನಿರೋಧಕ ಗುಣದಿಂದ ಆರೋಗ್ಯಕ್ಕೆ ಹಿತ.
ದಕ್ಷಿಣ ಕನ್ನಡ: ನಾಗರಪಂಚಮಿ (Nagara Panchami) ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಅದೇ ರೀತಿ ನಾಗರಪಂಚಮಿಯ ದಿನದಂದು ಕರಾವಳಿಯಲ್ಲಿ ವಿಶೇಷ (Special) ತಿಂಡಿಯೊಂದನ್ನು ಮಾಡಲಾಗುತ್ತದೆ. ಬಹುತೇಕ ಎಲ್ಲಾ ಮನೆಗಳನ್ನೂ ಈ ತಿಂಡಿಯನ್ನು ಮಾಡುತ್ತಾರೆ. ಹೌದು ಅದುವೇ ಅರಿಶಿನ ಎಲೆಯಲ್ಲಿ ಮಾಡುವ ಗಟ್ಟಿ. ನಾಗರಪಂಚಮಿಯಂದು ಈ ಅರಿಶಿನ ಎಲೆಯಲ್ಲಿ ಮಾಡಿದ ತಿಂಡಿಯನ್ನು ತಿನ್ನಬೇಕು ಎನ್ನುವ ಅಲಿಖಿತ ಸಂಪ್ರದಾಯವೂ ಇಲ್ಲಿದೆ. ನಾಗರಪಂಚಮಿಯು ಮಳೆ ಹೆಚ್ಚಾಗಿ ಸುರಿಯುವ ಆಷಾಢ (Ashada) ಮಾಸದಲ್ಲೇ ಬರುವ ಹಿನ್ನಲೆಯಲ್ಲಿ ರೋಗನಿರೋಧಕ (Immunization) ಶಕ್ತಿಯನ್ನು ಹೊಂದಿರುವ ಅರಿಶಿನ ಎಲೆಯಲ್ಲಿ ಈ ತಿಂಡಿಯನ್ನು ತಯಾರಿಸಿ ಸೇವಿಸಲಾಗುತ್ತದೆ.
ಅರಿಶಿಣ ರೋಗನಿರೋಧಕ ಗುಣವನ್ನು ಹೊಂದಿದ್ದು, ಅನೇಕ ರೋಗಗಳನ್ನು ಬಾರದಂತೆ ತಡೆಯಬಲ್ಲದು. ನಿಯಮಿತ ಅರಿಶಿಣ ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗ ಬಾರದಂತೆ ತಡೆಯಬಹುದು ಎಂಬುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಚರ್ಮ ರೋಗಗಳಿಗೂ ಅರಿಶಿಣ ರಾಮಬಾಣ.
ಅರಿಶಿಣದ ಕೊಂಬು, ಅದರ ಪುಡಿಯನ್ನು ನಾವು ನಿತ್ಯದ ಆಹಾರದಲ್ಲಿ ಬಳಸುತ್ತೇವೆ. ಆದರೆ, ಅರಿಶಿಣದ ಎಲೆ ಬಳಕೆ ತುಂಬಾನೇ ಕಡಿಮೆ. ಕರಾವಳಿ ಭಾಗದಲ್ಲಿ ಅರಿಶಿಣದ ಎಲೆಯಿಂದ ಸಿಹಿ ಕಡುಬು ತಯಾರಿಸುತ್ತಾರೆ. ಅರಿಶಿಣ ಎಲೆ ಕಡುಬು ಅಥವಾ ಗಟ್ಟಿ ಎಂದು ಕರೆಯಲ್ಪಡುವ ಈ ತಿನಿಸನ್ನು ಒಮ್ಮೆ ಸವಿದರೆ ಸಾಕು, ಅದರ ರುಚಿ ಹಾಗೂ ಪರಿಮಳವನ್ನು ಮರೆಯಲು ಸಾಧ್ಯವೇ ಇಲ್ಲ. ಇದು ಬಾಯಿಗೆ ರುಚಿಕಾರಿ, ಆರೋಗ್ಯಕ್ಕೂ ಹಿತಕಾರಿ.
ಅರಶಿನ ಎಲೆ ಗಟ್ಟಿ, ಅರಿಶಿನದ ಎಲೆಗಳಲ್ಲಿ ಗಟ್ಟಿಯನ್ನು ಹಬೆಯಲ್ಲಿ ಬೇಯಿಸುವುದು. ಇದು ಸುವಾಸನೆ ಮತ್ತು ಪರಿಮಳವನ್ನು ನೀಡುತ್ತದೆ. ಮಾನ್ಸೂನ್ ಪ್ರಾರಂಭವಾಗುತ್ತಿದ್ದಂತೆ, ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅರಿಶಿನ ಎಲೆಗಳು ಹೇರಳವಾಗಿ ಬೆಳೆಯುತ್ತವೆ. ಈ ಅರಿಶಿನ ಎಲೆಗಳನ್ನು ‘ಅರಶಿನ ಎಲೆ ಗಟ್ಟಿ’ ಎಂಬ ರುಚಿಕರವಾದ ಸಿಹಿ ಖಾದ್ಯವನ್ನು ಮಾಡಲು ಬಳಸಲಾಗುತ್ತದೆ.
Dakshina Kannada,Karnataka
July 29, 2025 8:44 PM IST