Last Updated:
ಮಂಗಳೂರು ನಗರದ ಇಬ್ರಾಹಿಂ ಖಲೀಲ್ ಅವರ ಗುಜರಿ ಅಂಗಡಿ ಅಪರೂಪದ ವಸ್ತುಗಳ ಸಂಗ್ರಹಾಲಯವಾಗಿ ಜನಮನ ಸೆಳೆಯುತ್ತಿದೆ, ಮಕ್ಕಳ ಗ್ರಂಥಾಲಯವೂ ಇಲ್ಲಿದೆ.
ಮಂಗಳೂರು: ಈ ಗುಜರಿ ಅಂಗಡಿಗೆ (Junk Shop) ಒಳಹೊಕ್ಕರೆ ನಿಮಗೆ ಯಾವುದೋ ʼಸ್ಕ್ರ್ಯಾಪ್ʼ ಶಾಪ್‌ಗೆ ಹೋದ ಹಾಗೆ ಅನ್ನಿಸೋಲ್ಲ ಬದಲಿಗೆ ಈ ಅಂಗಡಿಯೇ ಒಂದು “ಸ್ಕ್ರ್ಯಾಪ್ ಬುಕ್” (Scrap Book) ತರಹ ನೆನಪುಗಳನ್ನು ತಾಜಾ ಮಾಡುವ ತಾಣವಾಗಿ ಮಾರ್ಪಟ್ಟಿದೆ. ಮನೆ ಬಳಕೆಯ ಪುರಾತನ ವಸ್ತುಗಳು, ಅಪರೂಪದಲ್ಲೇ ಅಪರೂಪವಾದ ಕೃಷಿ ಸಾಮಗ್ರಿಗಳು (Agriculture Product) ಹಾಗೆಯೇ ವಿಶೇಷಾತಿ ವಿಶೇಷ ಪುಸ್ತಕಗಳು. ಇದೆಲ್ಲಾ ಕೊಂಡು ತಂದದ್ದಲ್ಲ ಬದಲಿಗೆ ಗುಜರಿಯಲ್ಲಿಯೇ ಹೆಕ್ಕಿ ನೀಟಾಗಿ (Neat) ಜೋಡಿಸಿ ಇಟ್ಟದ್ದು! ಎಲ್ಲವನ್ನೂ ʼಹಣದʼ ದೃಷ್ಟಿಯಿಂದ ನೋಡುವ ಜನರ ನಡುವೆ ವಸ್ತುವಿನ ʼಗುಣʼವನ್ನು ನಿಜಕ್ಕೂ ತೂಗಿದ್ದು ಈ ಗುಜರಿ ಅಂಗಡಿ ಮಾಲೀಕ.
ಗುಜರಿ ಅಥವಾ ಗುಜರಿ ಅಂಗಡಿ ಎಂದ ತಕ್ಷಣ ನೆನಪಿಗೆ ಬರುವುದು ಬಳಕೆಗೆ ಬಾರದ ವಸ್ತುಗಳು ಅಥವಾ ಬಳಸಿ ಬೇಡವಾದ ವಸ್ತುಗಳು. ಆದರೆ ಇಲ್ಲೊಂದು ಗುಜರಿ ಅಂಗಡಿಯೇ ಬಹುಮೂಲ್ಯ ವಸ್ತುಗಳನ್ನು ಸಂಗ್ರಹಿಸಿಟ್ಟ ಮ್ಯೂಸಿಯಂ ಆಗಿ ಆಸಕ್ತರ ಮನಸ್ಸನ್ನು ಸೆಳೆಯುತ್ತಿದೆ. ಜನರು ಇಲ್ಲಿ ದಿನವೂ ಭೇಟಿ ನೀಡಿ ತಮ್ಮ ಮೌಲ್ಯಯುತ ಸಮಯವನ್ನು ಕಳೆಯುತ್ತಿದ್ದಾರೆ.
ಮಂಗಳೂರು ನಗರದ ಪಂಜಿಮೊಗರು ನಿವಾಸಿ ಇಬ್ರಾಹಿಂ ಖಲೀಲ್ ಅವರು ಮಂಗಳೂರು ನಗರದ ಕೊಟ್ಟಾರ ಮಾಲೆಮಾರ್ ರಸ್ತೆಯಲ್ಲಿರುವ ತನ್ನ ಗುಜರಿ ಅಂಗಡಿಯಲ್ಲಿ ಕಿರು ಮ್ಯೂಸಿಯಂನ್ನು ಸೃಷ್ಟಿಸಿದ್ದು ಸದ್ಯ ಜನಮನ ಸೆಳೆಯುತ್ತಿದೆ. ಇಬ್ರಾಹಿಂ ಖಲೀಲ್ ಅವರು ಕಳೆದ 20 ವರ್ಷಗಳಿಂದ ಗುಜರಿ ಅಂಗಡಿಯನ್ನು ನಡೆಸುತ್ತಿದ್ದು, ಇಲ್ಲಿಗೆ ಬಂದಂತಹ ಅನೇಕ ವಿಶೇಷ ಹಾಗೂ ಪ್ರಾಚೀನ ವಸ್ತುಗಳೂ ಇವರ ಸಂಗ್ರಹದಲ್ಲಿವೆ.
ಏನೆನೆಲ್ಲಾ ಇದೆ? ಏನೆನೆಲ್ಲಾ ಮಾಡಬಹುದು? ಈ ಗುಜರಿಯಂಗಡಿಯಲ್ಲಿ
Dakshina Kannada,Karnataka
September 16, 2025 7:16 AM IST