Last Updated:
ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಜನರು ಊರುಗಳಿಗೆ ತೆರಳುವುದರಿಂದ ಖಾಸಗಿ ಬಸ್ ನವರು ಟಿಕೆಟ್ ದರವನ್ನು ಹೆಚ್ಚಿಸುತ್ತಾರೆ. ಇದರಿಂದ ಪ್ರಯಾಣಿಕರ ಹೊರೆಯಾಗುವುದನ್ನು ತಪ್ಪಿಸಲು ವಿಶೇಷ ರೈಲು ಸೇವೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದರು.
ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ದೀಪಾವಳಿ ಹಬ್ಬಕ್ಕೆ ಊರುಗಳಿಗೆ ತೆರಳಲು ಜನರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮಂಗಳೂರಿಗೆ ಬರುವ ಪ್ರಯಾಣಿಕರು ಈಗಾಗಲೇ ಬಸ್ ಗಳಿಗೆ ಮುಗಂಡ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಹಬ್ಬದ ಹಿನ್ನೆಲೆ ಬಸ್ ಟಿಕೆಟ್ ದರಗಳು ಗಗನಕ್ಕೇರಿದೆ. ಹೀಗಾಗಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಲು ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲು ಸಂಚರಿಸಲಿದೆ.
ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಜನರು ಊರುಗಳಿಗೆ ತೆರಳುವುದರಿಂದ ಖಾಸಗಿ ಬಸ್ ನವರು ಟಿಕೆಟ್ ದರವನ್ನು ಹೆಚ್ಚಿಸುತ್ತಾರೆ. ಇದರಿಂದ ಪ್ರಯಾಣಿಕರ ಹೊರೆಯಾಗುವುದನ್ನು ತಪ್ಪಿಸಲು ವಿಶೇಷ ರೈಲು ಸೇವೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದ್ದರು. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೆ ಇಲಾಖೆ ದೀಪಾವಳಿ ಸಂದರ್ಭದಲ್ಲಿ ವಿಶೇಷ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: Bengaluru: ದೇಶದ ಅತಿದೊಡ್ಡ ಕುಡಿಯುವ ನೀರಿನ ಯೋಜನೆಯಿದು- ಲಕ್ಷಾಂತರ ಜನರ ದಾಹ ನೀಗಿಸಲಿದ್ದಾಳೆ ಕಾವೇರಿ!
ಅಕ್ಟೋಬರ್ 30ರಂದು ರಾತ್ರಿ 11.50ಕ್ಕೆ 06565 ಸಂಖ್ಯೆಯ ರೈಲು ಬೆಂಗಳೂರಿನ ಯಶವಂತಪುರದಿಂದ ಮಂಗಳೂರಿಗೆ ಸಂಚಾರ ಆರಂಭಿಸಲಿದೆ. ಅಕ್ಟೋಬರ್ 31ರ ಬೆಳಗ್ಗೆ 11.45ಕ್ಕೆ ಆ ರೈಲು ಮಂಗಳೂರು ತಲುಪಲಿದೆ. ಅಕ್ಟೋಬರ್ 31ರಂದು 06566 ಸಂಖ್ಯೆಯ ರೈಲು ಮಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಅದೇ ದಿನ ರಾತ್ರಿ 9.15ಕ್ಕೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣ ತಲುಪಲಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುತ್ತಾರೆ. ಇದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿ ಬಸ್ ಗಳಲ್ಲಿ ಟಿಕೆಟ್ ಲಭ್ಯವಾಗದೇ ಊರಿಗೆ ಬರಲು ಜನರು ಪರದಾಡುವಂತಾಗುತ್ತದೆ. ಅಂಥವರಿಗೆ ಈ ವಿಶೇಷ ರೈಲಿನ ಸೇವೆ ಸಹಕಾರಿಯಾಗಲಿದೆ.
Mangalore,Dakshina Kannada,Karnataka
October 19, 2024 2:24 PM IST