Sports: ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಉತ್ತಮ ಅವಕಾಶ, ನಿಮ್ಮ ಟ್ಯಾಲೆಂಟ್‌ಗೆ ಸಜ್ಜಾಗಿದೆ ಅಖಾಡ! | Karnataka volleyball team selection begins in Bengaluru opportunity | ಕ್ರೀಡೆ

Sports: ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಉತ್ತಮ ಅವಕಾಶ, ನಿಮ್ಮ ಟ್ಯಾಲೆಂಟ್‌ಗೆ ಸಜ್ಜಾಗಿದೆ ಅಖಾಡ! | Karnataka volleyball team selection begins in Bengaluru opportunity | ಕ್ರೀಡೆ

Last Updated:

ಕರ್ನಾಟಕ ವಾಲಿಬಾಲ್ ತಂಡ ಆಯ್ಕೆ 08 ಡಿಸೆಂಬರ್ 2025 ರಂದು SAI NSSC ಬೆಂಗಳೂರಿನಲ್ಲಿ ನಡೆಯಲಿದೆ. ಆಯ್ಕೆಯಾದವರು ವಾರಣಾಸಿ ಚಾಂಪಿಯನ್‌ಶಿಪ್‌ಗೆ ಹಾಜರಾಗಬಹುದು.

ವಾಲಿಬಾಲ್‌ ಪಂದ್ಯಾವಳಿ
ವಾಲಿಬಾಲ್‌ ಪಂದ್ಯಾವಳಿ

ದಕ್ಷಿಣಕನ್ನಡ: ವಾಲಿಬಾಲ್ ತಂಡಕ್ಕೆ (Team) ಸೇರೋದು ಎಲ್ಲರ ಬಾಲ್ಯದ ಕನಸಾಗಿರುತ್ತದೆ. ಕ್ರಿಕೆಟ್, ಕಬಡ್ಡಿಯಂತೆಯೇ ವಾಲಿಬಾಲ್ ಕೂಡ ಅತ್ಯಂತ ಜನಮನ್ನಣೆ (Popular) ಹೊಂದಿರುವ ಆಟ. ನೀವು ಒಂದು ವೇಳೆ ವಾಲಿಬಾಲ್‌ನ ಒಳ್ಳೆಯ ಆಟಗಾರರಾಗಿದ್ದರೆ ನಿಮಗೆ ಶುಭ ಸುದ್ದಿ (Good News) ಕಾದಿದೆ. ಹೌದು, ಈ ವಿಷಯ ಖಂಡಿತ ನೀವು ತಿಳಿಯಲೇಬೇಕು, ನೀವು ವಾಲಿಬಾಲ್‌ನಲ್ಲಿ ಪರಿಣಿತಿ (Expertise) ಹೊಂದಿದ್ದರೆ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ನಿಮಗಿದೆ.

ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಆಯ್ಕೆ ಆಗುವ ಅವಕಾಶ

ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ. ಅಕ್ಟೋಬರ್ 18 ರಂದು ಭಾರತೀಯ ವಾಲಿಬಾಲ್ ಫೆಡರೇಶನ್ (ವಿಎಫ್‌ಐ) ಕಳುಹಿಸಿರುವ ಸುತ್ತೋಲೆಯ ಪ್ರಕಾರ, ಪುರುಷರು ಮತ್ತು ಮಹಿಳೆಯರ 72ನೇ ಸೀನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನವರಿ 04 ರಿಂದ 11, 2026 ರವರೆಗೆ ನಡೆಯಲಿದೆ.

ಕರ್ನಾಟಕದವರು ಮಾತ್ರ ಭಾಗವಹಿಸಬಹುದು

ಚಾಂಪಿಯನ್‌ಶಿಪ್‌ಗೆ ಸಿದ್ಧತೆಯಾಗಿ, ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ​​(ಕೆವಿಎ) ಕರ್ನಾಟಕ ರಾಜ್ಯ ಪುರುಷ ಮತ್ತು ಮಹಿಳಾ ತಂಡಗಳನ್ನು ರಚಿಸಲು ಆಯ್ಕೆ ಪ್ರಕ್ರಿಯೆ ದಿನಾಂಕ: 08 ಡಿಸೆಂಬರ್ 2025 ರಂದು ಬೆಳಗ್ಗೆ 9:00 ಗಂಟೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ (SAI), NSSC, ಬೆಂಗಳೂರಿನಲ್ಲಿ ನಡೆಯುತ್ತದೆ. ಕರ್ನಾಟಕದ ವಾಲಿಬಾಲ್ ಆಟಗಾರರು ಮಾತ್ರ ಭಾಗವಹಿಸಲು ಅವಕಾಶವಿದೆ.

ಸಂಪರ್ಕಿಸಬೇಕಾದ ವಿಳಾಸ ಹಾಗೂ ವ್ಯಕ್ತಿಗಳು

ಇದನ್ನೂ ಓದಿ: Kukke Rathotsava: ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ಸಂಭ್ರಮ, ಅಪಾರ ಭಕ್ತರ ಸಡಗರ!

ಎಲ್ಲಾ ಅರ್ಹ ಆಟಗಾರರು ಸಮಯಕ್ಕೆ ಸರಿಯಾಗಿ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಹರ್ಷ ಮತ್ತು ಪ್ರಧಾನ ಕಾರ್ಯದರ್ಶಿ ಎಲ್.ಪಿ. ಆಂಥೋನಿ ಜೋಸೆಫ್ ಅವರಿಗೆ ವರದಿ ಸಲ್ಲಿಸಬೇಕಾಗುತ್ತದೆ. ಆಯ್ಕೆಯಾದ ಪುರುಷರ ಮತ್ತು ಮಹಿಳೆಯರ ಆಟಗಾರರಿಗೆ ಉತ್ತಮ ತರಬೇತುದಾರರಿಂದ ಊಟ ಮತ್ತು ವಸತಿಯೊಂದಿಗೆ 20 ದಿವಸದ ತರಬೇತಿ ಶಿಬಿರವನ್ನು ನೀಡಲಾಗುವುದೆಂದು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಸಾಲ್ಮರ ಶರೀಫ್ ಇವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.