ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಖಾತೆ ತೆರಯುವ ಮುನ್ನವೇ ಶೇಕ್ ರಶೀದ್(0) ವಿಕೆಟ್ ಕಳೆದುಕೊಂಡಿತು.
ತಂಡದಲ್ಲಿ ಬದಲಾವಣೆಗಳು
ಚೆನ್ನೈ ತಂಡ ಎರಡು ಬದಲಾವಣೆಗಳನ್ನು ಮಾಡಿಕೊಂಡಿದೆ. ರಚಿನ್ ರವೀಂದ್ರ ಮತ್ತು ವಿಜಯ್ ಶಂಕರ್ ಹೊರಗಿಟ್ಟು ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಡೆವಾಲ್ಡ್ ಬ್ರೆವಿಸ್ ಮತ್ತು ದೀಪಕ್ ಹೂಡಾ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ.
ಇತ್ತ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮೊಹಮ್ಮದ್ ಶಮಿ, ಕಮಿಂಡು ಮೆಂಡಿಸ್ ಅವಕಾಶ ಪಡೆದರೆ, ಟ್ರಾವಿಸ್ ಹೆಡ್ ಹಾಗೂ ಇಶಾನ್ ಮಾಲಿಂಗ್ ಹೊರಗುಳಿದಿದ್ದಾರೆ. ಹೆಡ್ ಇಂಪ್ಯಾಕ್ಟ್ ಸಬ್ ಆಗಿ ಆಡುವ ಸಾಧ್ಯತೆ ಇದೆ.
ಹೆಡ್ ಟು ಹೆಡ್ ದಾಖಲೆ
ಐಪಿಎಲ್ನಲ್ಲಿ ಎರಡೂ ತಂಡಗಳ ನಡುವೆ ಒಟ್ಟು 21 ಪಂದ್ಯಗಳು ನಡೆದಿದ್ದು, ಅವುಗಳಲ್ಲಿ 15 ಪಂದ್ಯಗಳಲ್ಲಿ ಸಿಎಸ್ಕೆ ಗೆಲುವು ಸಾಧಿಸಿದ್ದರೆ, ಎಸ್ಆರ್ಎಚ್ ಕೇವಲ ಆರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದರೆ, 17 ವರ್ಷಗಳ ನಂತರ ಆರ್ಸಿಬಿ ಚೆನ್ನೈ ತಂಡವನ್ನು ತಮ್ಮ ತವರು ನೆಲದಲ್ಲಿ ಸೋಲಿಸಿದೆ. ನಂತರ ಡೆಲ್ಲಿ ಕ್ಯಾಪಿಟಲ್ಸ್ 15 ವರ್ಷಗಳ ನಂತರ ಸಿಎಸ್ಕೆ ತಂಡವನ್ನು ತವರಿನಲ್ಲಿ ಸೋಲಿಸಿದ ದಾಖಲೆ ಹೊಂದಿದೆ. ಹಾಗಾಗಿ ಸನ್ರೈಸರ್ಸ್ ಹೈದರಾಬಾದ್ ಕೂಡ ಈ ಬಾರಿ ಸಿಎಸ್ಕೆಗೆ ಸೋಲುಣಿಸಿದರೂ ಆಶ್ಚರ್ಯ ಪಡೆಬೇಕಾಗಿಲ್ಲ.
ಚೆಪಾಕ್ನಲ್ಲಿ ಎರಡೂ ತಂಡಗಳ ದಾಖಲೆ
ಚಪಾಕ್ನಲ್ಲಿ ಸಿಎಸ್ಕೆ ಹಾಗೂ ಹೈದರಾಬಾದ್ ತಂಡಗಳು 5 ಪಂದ್ಯಗಳನ್ನಾಡಿದ್ದು, ಸಿಎಸ್ಕೆ 5-0ರಲ್ಲಿ ಮುನ್ನಡೆ ಸಾಧಿಸಿದೆ. ಇದಲ್ಲದೆ ಹೈದರಾಬಾದ್ ತಂಡ ಇಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಜಯ ಸಾಧಿಸಿ, 8ರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಟೈ ಆಗಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 89 ಪಂದ್ಯಗಳನ್ನಾಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ 89 ಪಂದ್ಯಗಳಲ್ಲಿ 51 ಗೆಲುವು ಹಾಗೂ ಬ್ಯಾಟಿಂಗ್ ಸೆಕೆಂಡ್ ಬ್ಯಾಟಿಂಗ್ ಮಾಡುವ ತಂಡ 38 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 75 ಪಂದ್ಯಗಳಲ್ಲಿ 51 ರಲ್ಲಿ ಗೆಲುವು ಸಾಧಿಸಿದೆ. 23ರಲ್ಲಿ ಸೋಲು ಕಂಡಿದ್ದರೆ, 1 ಪಂದ್ಯ ಟೈ ಆಗಿದೆ. ಸಿಎಸ್ಕೆ ಚೇಸಿಂಗ್ ವೇಳೆ 31, ಮೊದಲು ಬ್ಯಾಟಿಂಗ್ ಮಾಡಿ 20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
April 25, 2025 9:30 PM IST