ಹವಾಮಾನ ವರದಿ
ಲಖನೌನಲ್ಲಿ ಶುಕ್ರವಾರದಂದು (ಮೇ 23, 2025) ಪಂದ್ಯದ ಸಮಯದಲ್ಲಿ ಹವಾಮಾನವು ಆಟಕ್ಕೆ ಪ್ರಮುಖ ಅಡೆತಡೆಯಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಲಕ್ನೋದಲ್ಲಿ ಆಕಾಶ ಭಾಗಶಃ ಮೋಡ ಕವಿದಿರುತ್ತದೆ, ಮತ್ತು ಮಿಂಚು ಮತ್ತು ಗುಡುಗಿನೊಂದಿಗೆ ಸ್ವಲ್ಪ ಮಳೆಯಾಗುವ ಸಂಭವವಿದೆ. ಈ ದಿನದ ತಾಪಮಾನವು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ನಿಂದ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ. ಈ ರೀತಿಯ ಹವಾಮಾನವು ಪಂದ್ಯದ ಸಮಯದಲ್ಲಿ ಅಡೆತಡೆ ಉಂಟುಮಾಡಬಹುದು, ವಿಶೇಷವಾಗಿ ಸಂಜೆ 7:30ರಿಂದ ರಾತ್ರಿಯವರೆಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಆದರೆ ಪಂದ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸುವಷ್ಟು ತೀವ್ರವಾದ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಮಳೆ ಆಗದಿದ್ದರೆ, ತೇವಾಂಶದಿಂದ ಕೂಡಿದ ವಾತಾವರಣವು ಆಟಗಾರರಿಗೆ ಸವಾಲಾಗಬಹುದು.
ಪಿಚ್ ವರದಿ
ಏಕಾನಾ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸಾಮಾನ್ಯವಾಗಿ ಸಮತೋಲನವನ್ನು ಒದಗಿಸುತ್ತದೆ, ಆದರೆ ಇದು ಸ್ಪಿನ್ ಬೌಲರ್‌ಗಳಿಗೆ ಸ್ವಲ್ಪ ಹೆಚ್ಚಿನ ನೆರವು ನೀಡುತ್ತದೆ. ಈ ಋತುವಿನಲ್ಲಿ ಈ ಪಿಚ್‌ನಲ್ಲಿ ಒಟ್ಟು 7 ಪಂದ್ಯಗಳು ನಡೆದಿವೆ, ಇದರಲ್ಲಿ 4 ಪಂದ್ಯಗಳನ್ನು ಮೊದಲು ಬೌಲಿಂಗ್ ಮಾಡಿದ ತಂಡಗಳು ಗೆದ್ದಿವೆ. ಆದ್ದರಿಂದ, ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ, ವಿಶೇಷವಾಗಿ ತೇವಾಂಶದಿಂದಾಗಿ ಚೆಂಡು ತಡವಾಗಿ ಸ್ವಿಂಗ್ ಆಗಬಹುದು. ಈ ಪಿಚ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಸುಮಾರು 160-170 ರನ್‌ಗಳಾಗಿದ್ದು, 200+ ರನ್‌ಗಳ ಗುರಿಯನ್ನು ಬೆನ್ನಟ್ಟುವುದು ಕಷ್ಟಕರವಾಗಿದೆ.
ತಂಡದ ಸ್ಥಿತಿಗತಿ
ಆರ್‌ಸಿಬಿ: ರಾಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ 12 ಪಂದ್ಯಗಳಿಂದ 17 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿಯ ಫಾರ್ಮ್ (505 ರನ್) ಅದ್ಭುತ ಫಾರ್ಮ್ನಲ್ಲಿದ್ದಾರೆ. ಫಿಲ್ ಸಾಲ್ಟ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಮೇ 3 ರ ನಂತರ ಆರ್‌ಸಿಬಿ ಮೈದಾನಕ್ಕೆ ಇಳಿಯುತ್ತಿದೆ. ಆ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಆರ್‌ಸಿಬಿ 2 ರನ್ಗಳಿಂದ ಗೆದ್ದಿತ್ತು.
ಎಸ್‌ಆರ್‌ಎಚ್: ಪ್ಯಾಟ್ ಕಮಿನ್ಸ್ ನಾಯಕತ್ವದ ಎಸ್‌ಆರ್‌ಎಚ್ 8ನೇ ಸ್ಥಾನದಲ್ಲಿದ್ದು, ಪ್ಲೇಆಫ್‌ನಿಂದ ಹೊರಬಿದ್ದಿದೆ. ಆದರೂ, ಅಭಿಷೇಕ್ ಶರ್ಮಾ (20 ಎಸೆತಗಳಲ್ಲಿ 59 ರನ್, ಲಕ್ನೋ ವಿರುದ್ಧ) ಮತ್ತು ಇಶಾನ್ ಕಿಶನ್‌ರ ಆಕ್ರಮಣಕಾರಿ ಬ್ಯಾಟಿಂಗ್ ತಂಡಕ್ಕೆ ಒಂದಿಷ್ಟು ಭರವಸೆಯನ್ನು ನೀಡಿದೆ.
ಪಂದ್ಯದ ಸ್ಥಳಾಂತರ
ಈ ಪಂದ್ಯವು ಮೂಲತಃ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು, ಆದರೆ ಬೆಂಗಳೂರಿನಲ್ಲಿ ಭಾರೀ ಮಳೆ ಮತ್ತು ಹವಾಮಾನ ಇಲಾಖೆಯಿಂದ ‘ಯೆಲ್ಲೋ ಅಲರ್ಟ್’ ಘೋಷಣೆಯಿಂದಾಗಿ ಈ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ. ಈ ಕಾರಣದಿಂದಾಗಿ, ಚಿನ್ನಸ್ವಾಮಿ ಸ್ಟೇಡಿಯಂನ ಟಿಕೆಟ್‌ಗಳಿಗೆ ಪೂರ್ಣ ಮರುಪಾವತಿಯನ್ನು ಘೋಷಿಸಲಾಗಿದೆ. ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಟಿಕೆಟ್‌ಗಳು ಶೀಘ್ರದಲ್ಲೇ ಮಾರಾಟಕ್ಕೆ ಲಭ್ಯವಾಗಲಿವೆ.
ಪಂದ್ಯದ ಸಮಯ ಮತ್ತು ಪ್ರಸಾರ
ದಿನಾಂಕ: ಮೇ 23, 2025 (ಶುಕ್ರವಾರ)
ಸಮಯ: ಸಂಜೆ 7:30 (IST)
ಸ್ಥಳ: ಏಕಾನಾ ಕ್ರಿಕೆಟ್ ಸ್ಟೇಡಿಯಂ, ಲಖನೌ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ, ಜಿಯೋಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್
SRH vs RCB: ಬರೋಬ್ಬರಿ 20 ದಿನಗಳ ನಂತರ ಮೈದಾನಕ್ಕಿಳಿಯಲಿದೆ ಆರ್‌ಸಿಬಿ! ಬೆಂಗಳೂರಿಗೆ ಇಂದು ಅಡ್ಡಿಯಾಗ್ತಾನ ವರುಣ? ಹೇಗಿದೆ ನೋಡಿ ಲಖನೌ ಹವಾಮಾನ ವರದಿ