Strange Dog: ಅಬ್ಬಬ್ಬಾ, ಏನ್‌ ಸಖತ್‌ ಆ್ಯಕ್ಟಿಂಗು! ಇಡೀ ಊರಿಗೇ ಚಮಕ್‌ ಕೊಟ್ಟ ಬೀದಿ ನಾಯಿ; ಸವಾರರು ಅಯೋಮಯ! | Dakshina Kannada street dog cleverness shocks Operation Dog team | ದಕ್ಷಿಣ ಕನ್ನಡ

Strange Dog: ಅಬ್ಬಬ್ಬಾ, ಏನ್‌ ಸಖತ್‌ ಆ್ಯಕ್ಟಿಂಗು! ಇಡೀ ಊರಿಗೇ ಚಮಕ್‌ ಕೊಟ್ಟ ಬೀದಿ ನಾಯಿ; ಸವಾರರು ಅಯೋಮಯ! | Dakshina Kannada street dog cleverness shocks Operation Dog team | ದಕ್ಷಿಣ ಕನ್ನಡ

Last Updated:

ದಕ್ಷಿಣ ಕನ್ನಡದ ಕೋಟೆಕಾರು ಪಟ್ಟಣದಲ್ಲಿ Animal Care ತಂಡ ಬೀದಿ ನಾಯಿಗಳನ್ನು ಹಿಡಿಯುವಾಗ ಹೆಣ್ಣು ನಾಯಿ ಚಾಲಾಕಿತನದಿಂದ ತಪ್ಪಿಸಿಕೊಂಡು ವಾಹನಗಳ ಮಧ್ಯೆ ರಸ್ತೆ ದಾಟಿ ಪಾರಾದ ರೋಚಕ ಘಟನೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಸಾರ್ವಜನಿಕ ಸ್ಥಳಗಳಲ್ಲಿ (Public Place) ಬೀದಿ ನಾಯಿಗಳ ನಿಯಂತ್ರಣಕ್ಕೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳು ತಕ್ಷಣದಿಂದಲೇ ಕಾರ್ಯಾಚರಣೆ (Operation) ನಡೆಸಬೇಕು ಎನ್ನುವ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳನ್ನು ಸುರಕ್ಷಿತ ಆಶ್ರಯತಾಣಗಳಿಗೆ ಬಿಡುವ, ನಾಯಿಗಳಿಗೆ (Dogs) ಸಂತಾನಹರಣ ಚಿಕಿತ್ಸೆ ನಡೆಸುವ ಪ್ರಕ್ರಿಯೆ (Work) ಆರಂಭಗೊಂಡಿದೆ.

ದಕ್ಷಿಣ ಕನ್ನಡದಲ್ಲಿ ಜೋರಾದ ಆಪರೇಷನ್‌ ಡಾಗ್

ನಾಯಿಗಳನ್ನು ಸೆರೆಹಿಡಿಯಲು ಬರುವ ಗ್ರಾಮ ಪಂಚಾಯತ್‌ಗಳ ಸಿಬ್ಬಂದಿ ಸೇರಿದಂತೆ ಪ್ರಾಣಿದಯಾ ಸಂಘವೂ ಈ ಪ್ರಕ್ರಿಯೆಯಲ್ಲಿ ನಿರತವಾಗಿದೆ. ನಾಯಿಗಳನ್ನು ಹಿಡಿಯಲೆಂದೇ ತಜ್ಞ ಸಿಬ್ಬಂದಿಗಳನ್ನು ಪ್ರತಿಯೊಂದು ತಂಡದಲ್ಲೂ ಆಯ್ಕೆ ಮಾಡಲಾಗಿದೆ. ಈ ತಂಡ ದೊಡ್ಡದಾದ ಬಲೆಯನ್ನು ಹಿಡಿದುಕೊಂಡು ಬೀದಿಯೆಲ್ಲಾ ಸುತ್ತಿ ನಾಯಿಗಳನ್ನು ಹಿಡಿಯಲು ಆರಂಭಿಸಿದ್ದಾರೆ.

ಹೆಣ್ಣು ನಾಯಿಯ ಚಾಲಾಕಿತನ

ಈ ಹುಡುಕಾಟದ ನಡುವೆ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆದು ಹೋಗುತ್ತವೆ. ಇಂತಹುದೇ‌ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಡ್ಯಾರು ಎಂಬಲ್ಲಿ ನಡೆದಿದೆ. ಕೋಟೆಕಾರು ಪಟ್ಟಣ ಪಂಚಾಯತ್‌ನ ಸಿಬ್ಬಂದಿಗಳು ಮತ್ತು ಅನಿಮಲ್ ಕೇರ್ ಸಂಸ್ಥೆಯ ಸಿಬ್ಬಂದಿಗಳು ನಾಯಿಗಾಗಿ‌ ಹುಡುಕಾಟ ನಡೆಸುವ ಸಂದರ್ಭದಲ್ಲಿ ಹೆಣ್ಣು ಬೀದಿ ನಾಯಿಯೊಂದು ಅವರ ಕಣ್ಣಿಗೆ ಬಿದ್ದಿದೆ.

ಎರಡೂ ಕಡೆಯಿಂದ ಲಾಕ್‌ ಆದ ನಾಯಿ ಮಾಡಿದ್ದೇನು ಗೊತ್ತಾ?

ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಅದರಲ್ಲಿ ಇದ್ದ ನಾಯಿಯನ್ನು ಹಿಡಿಯುವ ಬಲೆಯನ್ನು ಹಿಡಿದು ನಾಯಿಯ‌ ಬಳಿ ಧಾವಿಸಿ‌ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಯಿಗೆ ಒಮ್ಮೆಗೇ ಶಾಕ್ ಆಗಿದ್ದು, ತಮ್ಮನ್ನು ಹಿಡಿಯುವವರಿಂದ ಅದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ರಸ್ತೆಯ ಒಂದು ಪಕ್ಕದಲ್ಲಿ ನಾಯಿ ಮತ್ತು ನಾಯಿಯನ್ನು ಹಿಡಿಯಲು ಸಿದ್ಧವಾದ ತಂಡವಿತ್ತು. ರಸ್ತೆಯ ಮಧ್ಯೆ‌ ವಾಹನಗಳು ಸಂಚರಿಸುತ್ತಲೇ ಇದ್ದವು. ತನ್ನನ್ನು ಹಿಡಿಯಲು ಬರುವವರಿಂದ ತಪ್ಪಿಸಿಕೊಳ್ಳಲು ನಾಯಿಯಿದ್ದ ಒಂದೇ ದಾರಿ ರಸ್ತೆ ದಾಟಿ ಆ ಕಡೆಗೆ ಹೋಗೋದಾಗಿತ್ತು.

ಕಾಲಿನಲ್ಲಿ ಬಲ ಇಲ್ಲದಂತೆ ನಟಿಸಿದ ನಾಯಿ

ರಸ್ತೆ ದಾಟಲು ಮನುಷ್ಯರನ್ನೇ ಬಿಡದ ವಾಹನ ಸವಾರರು ಇನ್ನು ನಾಯಿಯನ್ನು ಬಿಡುವುದಿದೆಯೇ? ಹೇಗಾದರೂ ಮಾಡಿ ರಸ್ತೆ ದಾಟಲು ಮುಂದಾಗಿ ರಸ್ತೆಯ ಮಧ್ಯೆ ಬಂದಾಗ ಆ ಕಡೆ ಈ ಕಡೆ ಎಲ್ಲಾ ಕಡೆಗಳಿಂದ ವಾಹನಗಳು ಬಂದಿವೆ. ಅರ್ಧ ರಸ್ತೆಯನ್ನು ನಡೆದುಕೊಂಡೇ ದಾಟಿದ್ದ ನಾಯಿ ವಾಹನ ದಟ್ಟಣೆ ಜಾಸ್ತಿಯಾದಂತೆ ಏಕಾಏಕಿ ಹಿಂಬದಿ ಕಾಲಿನಲ್ಲಿ ಬಲವಿಲ್ಲದಂತೆ ರಸ್ತೆಯಲ್ಲಿ ಜಾರಲು ಆರಂಭಿಸಿದೆ. ನಾಯಿಯ ಸ್ಥಿತಿ ಕಂಡ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಬಡಪಾಯಿ ನಾಯಿ ರಸ್ತೆ ದಾಟಲು ಅನುವು ಮಾಡಿಕೊಟ್ಟಿದ್ದಾರೆ. ನಾಯಿ ಹಿಡಿಯಲು ಬಂದ ಸಿಬ್ಬಂದಿಗಳು ತಮ್ಮ ಕಣ್ಣಿನಿಂದ ದೂರ ಆಗೋವರೆಗೂ ಆ ನಾಯಿ ಜಾರಿಕೊಂಡೇ ಬಲುದೂರ ಸಾಗಿದೆ.

ಈ ಮೊದಲೇ ಚಿಕಿತ್ಸೆ ಆಗಿದ್ದ ನಾಯಿಗೆ ಡಾಕ್ಟರ್‌ ಫೋಬಿಯಾ?