Last Updated:
ಸುಳ್ಯ ತಾಲೂಕು 1965ರ ಡಿಸೆಂಬರ್ 17ರಂದು ಸ್ಥಾಪನೆಯಾಗಿ 60 ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಅದ್ಧೂರಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sulya) ತಾಲೂಕು ರಚನೆಗೊಂಡು ಡಿಸೆಂಬರ್ 17 ಕ್ಕೆ ಭರ್ತಿ ಅರವತ್ತು ವರುಷ ತುಂಬಿದೆ. 1965 ರ ಡಿಸೆಂಬರ್ 17 ರಂದು ತಾಲೂಕಿನ (Taluk) ಉದ್ಘಾಟನೆ ನೆರವೇರಿತ್ತು. ತಾಲೂಕೊಂದರ ಪಾಲಿಗೆ ಖಂಡಿತವಾಗಿಯೂ ಇದೊಂದು ಮಹತ್ವಪೂರ್ಣ ಕಾಲಘಟ್ಟ ಮತ್ತು ಸಂಭ್ರಮಿಸಬೇಕಾದ (Celebration) ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಪಷ್ಟಬ್ದವನ್ನು ಅದ್ಧೂರಿಯಾಗಿ ಆಚರಿಸಲು ಈಗಾಗಲೇ ಯೋಜನೆ ಹಾಕಿಕೊಳ್ಳಲಾಗಿದೆ.
1957 ರಲ್ಲಿ ದ್ವಿತೀಯ ಮಹಾ ಚುನಾವಣೆ, ಕರ್ನಾಟಕದಲ್ಲಿ ಇದು ಶಾಸನ ಸಭೆಗೆ ಪ್ರಥಮ ಚುನಾವಣೆ. ಆಗ ಪುತ್ತೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. ಒಂದು ಜನರಲ್ ಆಗಿದ್ದರೆ, ಮತ್ತೊಂದು ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರ, ಕೂಜುಗೋಡು ವೆಂಕಟ್ರಮಣ ಗೌಡರು ಜನರಲ್ ಸ್ಥಾನದಿಂದಲೂ ಸುಬ್ಬಯ್ಯ ನಾಯ್ಕರು ಮೀಸಲು ಸ್ಥಾನದಿಂದಲೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದು ಕರ್ನಾಟಕ ರಾಜ್ಯ ಶಾಸನ ಸಭಾ ಸದಸ್ಯರಾದರು.
ಕೂಜುಗೋಡು ವೆಂಕಟ್ರಮಣ ಗೌಡರು ಇದೇ ಕ್ಷೇತ್ರದಿಂದ ಮದ್ರಾಸ್ ಪ್ರಾಂತ್ಯದ ಪ್ರಥಮ ಮಹಾ ಚುನಾವಣೆಯಲ್ಲೂ ಗೆದ್ದು ಶಾಸನ ಸಭಾ ಸದಸ್ಯರಾಗಿದ್ದರು. 1952 ರಿಂದ ಪ್ರಥಮ ಪಂಚವಾರ್ಷಿಕ ಯೋಜನೆಯ ಮೂಲಕ ಸುಳ್ಯವು ಪರಿಶೀಲನಾರ್ಥವಾಗಿ ಬ್ಲಾಕ್ ಮಟ್ಟದ ಅಭಿವೃದ್ಧಿ ಕಾರ್ಯಗಳಿಗೊಳಪಟ್ಟು ಸರಿಸುಮಾರಾಗಿ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಚಾಲನೆ ದೊರೆಯಲು ಆರಂಭವಾಯಿತು. ರಸ್ತೆ, ಶಾಲೆ, ಆಸ್ಪತ್ರೆ, ಸಣ್ಣ ಸಣ್ಣ ಸೇತುವೆಗಳು ನಿರ್ಮಿಸಲ್ಪಟ್ಟವು.
ಸುಳ್ಯ ಮಲೆನಾಡಾಗಿದ್ದು ಅಂದು ಮಲೇರಿಯಾ ರೋಗದಿಂದ ಜರ್ಝರಿತಗೊಂಡಿದ್ದರೂ ನವಚೇತನ ಪಡೆಯಲು ಕೆ.ವಿ.ಗೌಡರ ಶ್ರದ್ಧಾಯುಕ್ತವಾದ ಸಾಧನೆ ಸಫಲವಾಗಿತ್ತು. 1962 ರಲ್ಲಿ ತೃತೀಯ ಮಹಾ ಚುನಾವಣೆ ಪುತ್ತೂರು ಕ್ಷೇತ್ರಕ್ಕೆ ಜನರಲ್ ಸ್ಥಾನ, ಸುಳ್ಯಕ್ಕೆ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವೆಂದು ಅದುವರೆಗೆ ಇದ್ದುದು ಸುಳ್ಯವು ಏಕಸದಸ್ಯ ಕ್ಷೇತ್ರವಾಗಿ ಪರಿವರ್ತಿತಗೊಂಡಿತು. ಸುಳ್ಯ ಸೇರಿದಂತೆ ರಾಜ್ಯದಲ್ಲಿ 1 ಪರಿಶಿಷ್ಟಜಾತಿ ಮೀಸಲು ಕ್ಷೇತ್ರ ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿ ಈಗಲೂ ಊರ್ಜಿತದಲ್ಲಿದೆ.
ಒಟ್ಟಿನಲ್ಲಿ ನೂರಾರು ಪ್ರಥಮಗಳನ್ನು ನೀಡಿದ ಸುಳ್ಯ ತಾಲೂಕಿನ ಸ್ವರ್ಣಹಬ್ಬವನ್ನು ಅದ್ಧೂರಿಯಿಂದ ಆಚರಿಸದೇ ಹೋದರೂ ಈಗ ಅರವತ್ತರ ಹಬ್ಬವನ್ನು ಹರ್ಷಚಿತ್ತವಾಗಿ ನೆನಪಿನಲ್ಲಿ ಉಳಿಯುವಂತೆ ಆಚರಿಸಲಾಗುತ್ತಿದೆ ಎನ್ನುವುದು ಸಂತಸದ ಸಂಗತಿಯೇ.
Dakshina Kannada,Karnataka
Dec 19, 2025 12:32 PM IST