Sunil Gavaskar: ಹುಟ್ಟಿದಾಗಲೇ ಮೀನುಗಾರರ ಮಗುವಿನೊಂದಿಗೆ ಅದಲು ಬದಲಾಗಿದ್ದ ಈ ಕ್ರಿಕೆಟರ್, ಇಂದು 200 ಕೋಟಿಗಿಂತ ಹೆಚ್ಚಿನ ಸಂಪತ್ತಿಗೆ ಯಜಮಾನ | Cricket Legend Sunil Gavaskar s Mind-Blowing Birth Story: You Won t Believe What Happened

Sunil Gavaskar: ಹುಟ್ಟಿದಾಗಲೇ ಮೀನುಗಾರರ ಮಗುವಿನೊಂದಿಗೆ ಅದಲು ಬದಲಾಗಿದ್ದ ಈ ಕ್ರಿಕೆಟರ್, ಇಂದು 200 ಕೋಟಿಗಿಂತ ಹೆಚ್ಚಿನ ಸಂಪತ್ತಿಗೆ ಯಜಮಾನ | Cricket Legend Sunil Gavaskar s Mind-Blowing Birth Story: You Won t Believe What Happened
ಗವಾಸ್ಕರ್ ಎಂಬ ಐಕಾನಿಕ್ ಬ್ರ್ಯಾಂಡ್

ಗವಾಸ್ಕರ್ ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ 10,000 ಕ್ಕೂ ಹೆಚ್ಚು ರನ್‌ಗಳು ಮತ್ತು ಹಲವಾರು ಶತಕಗಳನ್ನು ಗಳಿಸಿದ್ದರೂ, ಅವರು ಒಂದು ಐಕಾನಿಕ್ ಬ್ರ್ಯಾಂಡ್ ಆಗಿ ಮಾರ್ಪಟ್ಟಿದ್ದಾರೆ. ಇನ್ನು ನಿವೃತ್ತಿಯ ನಂತರವೂ ಸುನಿಲ್ ಗವಾಸ್ಕರ್ ಚಟುವಟಿಕೆಯ ಕೇಂದ್ರಬಿಂದುವಾಗಿ ಗಮನ ಸೆಳೆದಿದ್ದಾರೆ. ನಿರೂಪಕರಾಗಿ ಮತ್ತು ನಂತರ ಐಸಿಸಿ ಕ್ರಿಕೆಟ್ ಸಮಿತಿಯ ಭಾಗವಾಗಿ ಹೊಸ ಹುದ್ದೆಯನ್ನಲಂಕರಿಸಿದ ಅನುಭವ ಹೊಂದಿದ್ದಾರೆ.

ವ್ಯವಹಾರ ಕ್ಷೇತ್ರಕ್ಕೂ ಕಾಲಿಟ್ಟ ಈ ಕಲಿ 1985 ರಲ್ಲಿ ಭಾರತದ ಮೊದಲ ಕ್ರೀಡಾ ನಿರ್ವಹಣಾ ಕಂಪನಿಯಾದ ಪ್ರೊಫೆಷನಲ್ ಮ್ಯಾನೇಜ್‌ಮೆಂಟ್ ಗ್ರೂಪ್ (ಪಿಎಂಜಿ) ಅನ್ನು ಸ್ಥಾಪಿಸಿದರು. ಇದು ಮುಖ್ಯವಾಗಿ ಆಟಗಾರರ ನಿರ್ವಹಣೆ, ಪ್ರಾಯೋಜಕತ್ವದ ಒಪ್ಪಂದಗಳು ಮತ್ತು ಈವೆಂಟ್ ಸಂಘಟನೆಯನ್ನು ನೋಡಿಕೊಳ್ಳುತ್ತದೆ. ಗವಾಸ್ಕರ್ ಸಂಪತ್ತಿನ ನಿವ್ವಳ ಮೊತ್ತಕ್ಕೆ ಈ ಸಂಸ್ಥೆ ಕೂಡ ಕೊಡುಗೆ ನೀಡಿದ್ದು ರೂ 200 ಕೋಟಿ ಆದಾಯದ ಮೂಲಕ ಕ್ರಿಕೆಟ್ ಪಟು ಗಮನ ಸೆಳೆಯುತ್ತಾರೆ.

ಸುನಿಲ್ ಗವಾಸ್ಕರ್ ಅವರ ನಿವ್ವಳ ಮೌಲ್ಯ ಮತ್ತು ಆಸ್ತಿಗಳು

celebritynetworth.com ಪ್ರಕಾರ, ಸುನಿಲ್ ಗವಾಸ್ಕರ್ ಅವರ ನಿವ್ವಳ ಮೌಲ್ಯ 200 ಕೋಟಿ ರೂ.ಗಳಿಗಿಂತ ಹೆಚ್ಚು. ಗವಾಸ್ಕರ್ ತಮ್ಮ ಕಾಮೆಂಟರಿ ಹುದ್ದೆಯಿಂದ ಸುಮಾರು 35.92 ಕೋಟಿ ರೂ. ಗಳಿಸಿದ್ದಾರೆ. ಆದರೆ ಐಪಿಎಲ್‌ನಲ್ಲಿನ ಅವರ ಹುದ್ದೆಯಿಂದ ಹೆಚ್ಚುವರಿಯಾಗಿ 18.9 ಕೋಟಿ ರೂ. ಗಳಿಸಿದ್ದಾರೆ. 2014 ರಲ್ಲಿ ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸುನಿಲ್ ಗವಾಸ್ಕರ್ ಕೂಡ ದೊಡ್ಡ ಮೊಟ್ಟದ ವೇತನವನ್ನು ಪಡೆದರು.

ಸ್ಪೋರ್ಟ್ಸ್‌ಕೀಡಾ ವರದಿಯ ಪ್ರಕಾರ, ಸುನಿಲ್ ಗವಾಸ್ಕರ್ ಅವರ ಕಾಮೆಂಟರಿ ಸಂಬಳ ಪ್ರತಿ ಪಂದ್ಯಕ್ಕೆ $2500 (ಸುಮಾರು 2,14,000 ರೂ.) ಮತ್ತು ಪ್ರತಿ ಸರಣಿಗೆ $55,000 (ಸುಮಾರು 47,24,000 ರೂ.) ಎಂದು ಅಂದಾಜಿಸಲಾಗಿದೆ, ಇದು ಅವರನ್ನು ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾಮೆಂಟರಿಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ.

ಅವರ ಕ್ರಿಕೆಟ್ ಪ್ರಯತ್ನಗಳ ಜೊತೆಗೆ, ಗವಾಸ್ಕರ್ ಅವರ ಸಂಪತ್ತು ಬ್ರಾಂಡ್ ಅನುಮೋದನೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಿಕೆ ಮತ್ತು ಹೂಡಿಕೆಗಳಿಂದ ಕೂಡ ಬಂದಿದೆ. ಭಾರತದ ಮಾಜಿ ನಾಯಕ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿಯೂ ತೀವ್ರ ಆಸಕ್ತಿ ಹೊಂದಿದ್ದು, ಹಲವಾರು ಪ್ರಮುಖ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಗವಾಸ್ಕರ್ ಅವರ ಬಳಿ ಉತ್ತರ ಗೋವಾದ ಅಸ್ಸಾಗಾವೊದಲ್ಲಿ ಒಂದು ಐಷಾರಾಮಿ ವಿಲ್ಲಾ ಇದೆ. 20 ಕೋಟಿ ರೂ.ಗೆ ಖರೀದಿಸಲಾದ ಈ ವಿಲ್ಲಾವನ್ನು ಯುರೋಪಿಯನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಸಂಪೂರ್ಣವಾಗಿ ಸುಸಜ್ಜಿತವಾಗಿದೆ. ಇದಲ್ಲದೆ, ಅವರು ಮುಂಬೈನಲ್ಲಿ ಎರಡು ಮತ್ತು ಪನ್ವೆಲ್‌ನಲ್ಲಿಯೂ ಆಸ್ತಿಯನ್ನು ಹೊಂದಿದ್ದಾರೆ.

ಸುನಿಲ್ ಗವಾಸ್ಕರ್ ಬಳಿ E60 BMW 5 ಸರಣಿಯ ಐಷಾರಾಮಿ ಸೆಡಾನ್ ಕಾರಿದೆ

ಇಂಡಿಯನ್ ಕ್ರಿಕೆಟ್‌ನಲ್ಲಿ ಸುನಿಲ್ ಗವಾಸ್ಕರ್ ಭಾರತೀಯ ಕ್ರಿಕೆಟ್ ದಂತಕಥೆ ಹಾಗೂ ಪ್ರಮುಖ ವ್ಯಕ್ತಿಯಾಗಿ ಹೆಸರು ಮಾಡಿದ್ದರೂ ಅವರು ಮೀನುಗಾರರ ಮಗನಾಗಿ ಬೆಳೆಯುತ್ತಿದ್ದರೋ ಏನೋ, ಇದಕ್ಕೆ ಒಂದು ಘಟನೆ ಕಾರಣವಾಗಿದ್ದು ಮೀನುಗಾರರ ನವಜಾತ ಶಿಶುವಿನೊಂದಿಗೆ ನವಜಾತ ಶಿಶು ಗವಾಸ್ಕರ್ ಒಮ್ಮೆ ಅದಲು ಬದಲಾಗಿದ್ದರು. ಸಾಧಾರಣ ಮಧ್ಯಮ ವರ್ಗದಿಂದ ಬಂದ ಗವಾಸ್ಕರ್ ಅವರನ್ನು ಅವರ ಚಿಕ್ಕಪ್ಪ ತಮ್ಮೊಂದಿಗಿರುವುದು ನಿಜವಾದ ಗವಾಸ್ಕರ್ ಅಲ್ಲ ಎಂಬುದನ್ನು ಕಂಡುಕೊಂಡರು. ಇದರಿಂದ ಗವಾಸ್ಕರ್ ಕುಟುಂಬಸ್ಥರು ಮಗುವಿನ ತೀವ್ರ ಶೋಧಕ್ಕೆ ಮುಂದಾಗಿ ಕೊನೆಗೂ ಕಂಡು ಹಿಡಿದು ಕರೆತಂದರು ಎಂದು ಗವಾಸ್ಕರ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದರು. ತಮ್ಮ ತಂದೆ ತಾಯಿಗೆ ಸಿಗದೇ ಇದ್ದರೆ ಇಂದು ಅವರು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಯಲ್ಲಿ ಎಲ್ಲೋ  ಜೀವನ ನಡೆಸುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Sunil Gavaskar: ಹುಟ್ಟಿದಾಗಲೇ ಮೀನುಗಾರರ ಮಗುವಿನೊಂದಿಗೆ ಅದಲು ಬದಲಾಗಿದ್ದ ಈ ಕ್ರಿಕೆಟರ್, ಇಂದು 200 ಕೋಟಿಗಿಂತ ಹೆಚ್ಚಿನ ಸಂಪತ್ತಿಗೆ ಯಜಮಾನ