Last Updated:
Suryakumar Yadav: ಏಷ್ಯಾಕಪ್ 2025 ರಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸೂರ್ಯನ ಯಶಸ್ಸಿನ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಈ ‘ಸೂರ್ಯ’ನ ಪ್ರಖರ ಬೆಳಕಿನ ಹಿಂದಿರುವ ಅಸಲಿ ಶಕ್ತಿ, ಅವರ ಪತ್ನಿ ದೇವಿಶಾ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?
ಟೀಮ್ ಇಂಡಿಯಾದ ‘ಪವರ್‌ಹೌಸ್ ಬ್ಯಾಟರ್’ ಸೂರ್ಯಕುಮಾರ್ ಯಾದವ್ ಅಲಿಯಾಸ್ SKY, ಮೈದಾನಕ್ಕೆ ಇಳಿದರೆ ಸಾಕು, ಬೌಲರ್‌ಗಳ ಬೆವರಿಳಿಯುತ್ತೆ. ಅವರ 360 ಡಿಗ್ರಿ ಶಾಟ್‌ಗಳಿಗೆ ಇಡೀ ಕ್ರಿಕೆಟ್ ಜಗತ್ತೇ ಫಿದಾ ಆಗಿದೆ. ಸದ್ಯ ಏಷ್ಯಾಕಪ್ 2025 ರಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸೂರ್ಯನ ಯಶಸ್ಸಿನ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಈ ‘ಸೂರ್ಯ’ನ ಪ್ರಖರ ಬೆಳಕಿನ ಹಿಂದಿರುವ ಅಸಲಿ ಶಕ್ತಿ, ಅವರ ಪತ್ನಿ ದೇವಿಶಾ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?
ದೇವಿಶಾ ಶೆಟ್ಟಿ ಕೇವಲ ಒಬ್ಬ ಕ್ರಿಕೆಟಿಗನ ಪತ್ನಿಯಲ್ಲ. ಅವರು ಒಬ್ಬ ಯಶಸ್ವಿ ಉದ್ಯಮಿ, ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಸಮಾಜ ಸೇವಕಿ. ಆದರೆ, ಅವರಿಗೆ ಹೆಚ್ಚು ಪ್ರಚಾರ, ಪಬ್ಲಿಸಿಟಿ ಎಂದರೆ ಇಷ್ಟವಿಲ್ಲ. ಮಾಧ್ಯಮದ ಕಣ್ಣುಗಳಿಂದ ದೂರವಿದ್ದು, ಪ್ರಾಣಿ ಕಲ್ಯಾಣ ಮತ್ತು ಯುವಜನರಿಗೆ ಸ್ಫೂರ್ತಿ ನೀಡುವಂತಹ ಅನೇಕ ನೃತ್ಯ ಕಾರ್ಯಾಗಾರಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಬರುತ್ತಿದ್ದಾರೆ.
ಇವರಿಬ್ಬರ ಲವ್ ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ! ಸೂರ್ಯಕುಮಾರ್ ಮತ್ತು ದೇವಿಶಾ ಭೇಟಿಯಾಗಿದ್ದು ಕಾಲೇಜು ದಿನಗಳಲ್ಲಿ. ಸೂರ್ಯಕುಮಾರ್ ಅವರ ಸ್ಪೋಟಕ ಬ್ಯಾಟಿಂಗ್ ಶೈಲಿಗೆ ದೇವಿಶಾ ಮನಸೋತರೆ, ದೇವಿಶಾ ಅವರ ಅದ್ಭುತ ನೃತ್ಯಕ್ಕೆ ಸೂರ್ಯ ಕ್ಲೀನ್ ಬೋಲ್ಡ್ ಆಗಿದ್ದರು. ಹೀಗೆ ಸ್ನೇಹದಿಂದ ಶುರುವಾದ ಇವರ ಸಂಬಂಧ, ಪ್ರೀತಿಗೆ ತಿರುಗಿ ಹಲವು ವರ್ಷಗಳ ಕಾಲ ಮುಂದುವರೆಯಿತು.
ಕೊನೆಗೆ, ಮೇ 2016 ರಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡು, ಎರಡು ತಿಂಗಳ ನಂತರ ದಕ್ಷಿಣ ಭಾರತದ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಲ್ಲಿ ದೇವಿಶಾ ಗುಲಾಬಿ ಬಣ್ಣದ ಕಾಂಜೀವರಂ ಸೀರೆ ಮತ್ತು ಟೆಂಪಲ್ ಡಿಸೈನ್ ಆಭರಣಗಳಲ್ಲಿ ಕಂಗೊಳಿಸಿದರೆ, ಸೂರ್ಯಕುಮಾರ್ ಬಿಳಿ ಕುರ್ತಾ ಮತ್ತು ಪಂಚೆಯಲ್ಲಿ ಮಿಂಚಿದ್ದರು.
ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿಗೆ ಈ ಜೋಡಿ ಒಂದು ಉತ್ತಮ ಉದಾಹರಣೆ. 2019 ರಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಫಿಟ್‌ನೆಸ್ ಹಾಗೂ ಆಟದ ಮೇಲಿನ ಗಮನವನ್ನು ಕಳೆದುಕೊಳ್ಳುತ್ತಿದ್ದಾಗ, ಅವರಿಗೆ ಬೆನ್ನೆಲುಬಾಗಿ ನಿಂತಿದ್ದೇ ದೇವಿಶಾ. ಅವರ ಆಹಾರ, ವ್ಯಾಯಾಮದಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಕಾಳಜಿ ವಹಿಸಿ, ಸೂರ್ಯ ಮತ್ತೆ ಫಾರ್ಮ್‌ಗೆ ಮರಳುವಂತೆ ಮಾಡಿದರು.
ಈ ಬಗ್ಗೆ ಸೂರ್ಯಕುಮಾರ್ ಯಾದವ್ ಅವರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. “ಬದುಕಿನಲ್ಲಿ ಸಮತೋಲನ ಮತ್ತು ಮೈಂಡ್‌ಫುಲ್‌ನೆಸ್ ಬಗ್ಗೆ ನನಗೆ ಸರಿಯಾದ ದಾರಿ ತೋರಿಸಿದ್ದೇ ನನ್ನ ಪತ್ನಿ” ಎಂದು ಹಲವು ಬಾರಿ ಹೇಳಿದ್ದಾರೆ. ಪತ್ನಿಯ ಈ ಬೆಂಬಲವೇ ಅವರನ್ನು ಇಂದು ಜಗತ್ತಿನ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ.
ದೇವಿಶಾ ಮುಂಬೈನಲ್ಲಿರುವ ದಕ್ಷಿಣ ಭಾರತದ ಒಂದು ಗಣ್ಯ ಕುಟುಂಬದಲ್ಲಿ ಜನಿಸಿದ್ದು, ಚಿಕ್ಕ ವಯಸ್ಸಿನಿಂದಲೇ ಅವರಿಗೆ ಸಂಸ್ಕೃತಿ ಮತ್ತು ಕಲೆಯ ಮೇಲೆ ಅಪಾರ ಒಲವು ಇತ್ತು. ಶಾಸ್ತ್ರೀಯ ನೃತ್ಯ ಭರತನಾಟ್ಯದಲ್ಲಿ ಪರಿಣತಿ ಹೊಂದಿರುವ ಅವರು, ಈಗ ಆಸಕ್ತರಿಗೆ ನೃತ್ಯವನ್ನು ಕಲಿಸುತ್ತಿದ್ದಾರೆ.
September 16, 2025 5:04 PM IST