Last Updated:
ಪುತ್ತೂರಿನಲ್ಲಿ ಬೆನಕ ಈವೆಂಟ್ಸ್ ಆಯೋಜಿಸಿದ ಸ್ವದೇಶಿ ಮೇಳದಲ್ಲಿ ಬಳ್ಳಾರಿ ವಸ್ತ್ರಗಳು, ಚೆನ್ನಪಟ್ಟಣ ಗೊಂಬೆಗಳು, 25 ಬಗೆಯ ಐಸ್ ಕ್ರೀಂಗಳು ಸೇರಿದಂತೆ ಸ್ಥಳೀಯ ಉತ್ಪನ್ನಗಳು ರಿಯಾಯತಿ ದರದಲ್ಲಿ ಲಭ್ಯ.
ದಕ್ಷಿಣ ಕನ್ನಡ: ಲೋಕಲ್ ಫಾರ್ ವೊಕಲ್ (Local for Vocal) ಎನ್ನುವ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಇಂದು ದೇಶದೆಲ್ಲೆಡೆ ಉತ್ತಮ ಸ್ಪಂದನೆ (Response) ದೊರೆಯುತ್ತಿದೆ. ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಕಡೆಗಳಲ್ಲಿ ಸ್ವದೇಶಿ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಉತ್ತಮ ಗುಣಮಟ್ಟದ, ಸ್ಥಳೀಯವಾಗಿ ತಯಾರಾದ ಉತ್ಪನ್ನಗಳನ್ನು (Products) ಈ ಸ್ವದೇಶಿ ಮೇಳಗಳ ಮೂಲಕ ಜನತೆಗೆ ನೀಡುವ ಪ್ರಯತ್ನ ನಡೆಯುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ (Puttur) ಇಂತಹುದೊಂದು ಮೇಳವನ್ನು ಆಯೋಜಿಸಲಾಗಿದ್ದು, ರಾಜ್ಯದ ಹಲವೆಡೆಗಳಲ್ಲಿ ಸಿದ್ಧಪಡಿಸಿದ ಸ್ಥಳೀಯ ಉತ್ಪನ್ನಗಳನ್ನು ಇಲ್ಲಿ ರಿಯಾಯತಿ ದರದಲ್ಲಿ ಮಾರಾಟಕ್ಕೆ ಇಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಕುಂದಾಪುರದ ಬೆನಕ್ ಇವೆಂಟ್ಸ್ ಈ ಆಹಾರ ಮತ್ತು ಸ್ವದೇಶಿ ಮೇಳವನ್ನು ಆಯೋಜಿಸಿದ್ದು, ನಾಲ್ಕು ದಿನಗಳ ಕಾಲ ಈ ಮೇಳ ಪುತ್ತೂರಿನ ಜನತೆಗೆ ಸ್ವದೇಶಿ ಉತ್ಪನ್ನಗಳ ಖರೀದಿಗೆ ವಿಪುಲ ಅವಕಾಶವನ್ನು ನೀಡಲಿದೆ. ಬಳ್ಳಾರಿಯ ಹ್ಯಾಂಡ್ ಲೂಮ್, ಚೆನ್ನಪಟ್ಟಣದ ಗೊಂಬೆಗಳು, ಮರದ ಬಾಚಣಿಗೆ, ಮರದಿಂದ ತಯಾರಿಸಿದ ಟೂತ್ ಬ್ರೆಷ್, ಸಾವಯವ ಉತ್ಪನ್ನಗಳು, ಹಪ್ಪಳ, ಸೆಂಡಿಗೆ ಸೇರಿದಂತೆ ಹಲವು ಉತ್ಪನ್ನಗಳನ್ನು ಇಲ್ಲಿ ಮಾರಾಟಕ್ಕಿಡಲಾಗಿದೆ.
ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಈ ಸಂಪೂರ್ಣ ಸ್ವದೇಶಿ ಉತ್ಪನ್ನಗಳ ಮೇಳವನ್ನು ಆಯೋಜಿಸಲಾಗಿದೆ. ಪುತ್ತೂರಿನಲ್ಲಿ ಹಲಸು ಮೇಳ ಸೇರಿದಂತೆ ಹಲವು ಮೇಳಗಳು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದ್ದರೂ, ಈ ಬಾರಿ ಸ್ವದೇಶಿ ಉತ್ಪನ್ನಗಳದ್ದೇ ಮೇಳ ಆಯೋಜಿಸಿರೋದು ಪುತ್ತೂರಿಗರ ಕುತೂಹಲಕ್ಕೂ ಕಾರಣವಾಗಿದೆ.
ಇಲ್ಲಿದ್ದವು ಬಗೆಬಗೆಯ ಐಸ್ ಕ್ರೀಂಗಳು
Dakshina Kannada,Karnataka
November 02, 2025 11:58 AM IST