T20 New Rules: ಪವರ್​ ಪ್ಲೇ ಓವರ್​ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದ ಐಸಿಸಿ! ಇಲ್ಲಿದೆ ಹೊಸ ರೂಲ್ಸ್​​ನ ಸಂಪೂರ್ಣ ಮಾಹಿತಿ

T20 New Rules: ಪವರ್​ ಪ್ಲೇ ಓವರ್​ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದ ಐಸಿಸಿ! ಇಲ್ಲಿದೆ ಹೊಸ ರೂಲ್ಸ್​​ನ ಸಂಪೂರ್ಣ ಮಾಹಿತಿ
ಶೇ. 30 ರಷ್ಟು ಎಸೆತಗಳಿಗೆ ಸೀಮಿತ

ಇಲ್ಲಿಯವರೆಗೆ, 20 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಮೊದಲ ಆರು ಓವರ್‌ಗಳನ್ನು ಪವರ್‌ಪ್ಲೇಗೆ ನಿಗದಿಪಡಿಸಲಾಗಿತ್ತು, ಆದರೆ ಓವರ್‌ಗಳಲ್ಲಿ ಕಡಿತದ ಸಂದರ್ಭದಲ್ಲಿ ಇನ್ನಿಂಗ್ಸ್​​ನಲ್ಲಿ ಎಷ್ಟು ಎಸೆತಗಳಿವೆಯೋ ಅದರ ಶೇ 30 ಎಸೆತಗಳನ್ನು ಪವರ್​ ಪ್ಲೇ ಎಂದು ನಿಗಧಿ ಮಾಡಲಾಗುತ್ತದೆ.

ಜುಲೈನಿಂದ ಜಾರಿಗೆ ಬರಲಿರುವ ಹೊಸ ನಿಯಮಗಳ ಪ್ರಕಾರ, ಉದಾಹರಣೆಗೆ, ಎಂಟು ಓವರ್‌ಗಳ ಇನ್ನಿಂಗ್ಸ್ ಇದ್ದರೆ, ಈಗ 30- ಅಡಿ ವೃತ್ತದ ಹೊರಗೆ ಇಬ್ಬರು ಆಟಗಾರರೊಂದಿಗೆ 2.2 ಓವರ್‌ಗಳ ಪವರ್‌ಪ್ಲೇ ಇರುತ್ತದೆ. ಅದೇ ರೀತಿ, 9 ಓವರ್‌ಗಳ ಇನ್ನಿಂಗ್ಸ್‌ನಲ್ಲಿ, ಪವರ್‌ಪ್ಲೇ ಗ 2.4 ಓವರ್‌ಗಳಾಗಿರುತ್ತದೆ. ಹೀಗೆ ಎಷ್ಟು ಓವರ್​ ಕಡಿತವಾದರೂ ಪವರ್​ ಪ್ಲೇ ಅದರ 30ರಷ್ಟು ಎಸೆತಗಳಿಗೆ ಸೀಮಿತವಾಗಿರುತ್ತದೆ.

ಹೊಸ ನಿಯಮದ ಪ್ರಕಾರ ಪವರ್ ಪ್ಲೇ ಲೆಕ್ಕಾಚಾರ ಹೀಗಿದೆ

5 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 1.3 ಓವರ್‌ಗಳು (ಅಂದರೆ 9 ಎಸೆತಗಳು)

6 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 1.5 ಓವರ್‌ಗಳು (ಅಂದರೆ 11 ಎಸೆತಗಳು)

7 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 2.1 ಓವರ್‌ಗಳು (ಅಂದರೆ 13 ಎಸೆತಗಳು)

8 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 2.2 ಓವರ್‌ಗಳು (ಅಂದರೆ 14 ಎಸೆತಗಳು)

9 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 2.4 ಓವರ್‌ಗಳು (ಅಂದರೆ 16 ಚೆಂಡುಗಳು)

10 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 3. ಓವರ್‌ಗಳು (ಅಂದರೆ 18 ಎಸೆತಗಳು)

11 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 3.2 ಓವರ್‌ಗಳು (ಅಂದರೆ 20 ಎಸೆತಗಳು)

12 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 3.4 ಓವರ್‌ಗಳು (ಅಂದರೆ 22 ಎಸೆತಗಳು)

13 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 3.5 ಓವರ್‌ಗಳು (ಅಂದರೆ 23 ಎಸೆತಗಳು)

14 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 4.1 ಓವರ್‌ಗಳು (ಅಂದರೆ 25 ಎಸೆತಗಳು)

15 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 4.3 ಓವರ್‌ಗಳು (ಅಂದರೆ 27 ಎಸೆತಗಳು)

16 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 4.5 ಓವರ್‌ಗಳು (ಅಂದರೆ 29 ಎಸೆತಗಳು)

17 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 5.1 ಓವರ್‌ಗಳು (ಅಂದರೆ 31 ಎಸೆತಗಳು)

18 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 5.2 ಓವರ್‌ಗಳು (ಅಂದರೆ 32 ಎಸೆತಗಳು)

19 ಓವರ್‌ಗಳ ಪಂದ್ಯದಲ್ಲಿ, ಪವರ್‌ಪ್ಲೇ 5.4 ಓವರ್‌ಗಳು (ಅಂದರೆ 34 ಎಸೆತಗಳು)

ಟಿ20 ಬ್ಲಾಸ್ಟ್​​ನಲ್ಲಿ ಈ ನಿಯಮ ಬಳಕೆ

ಈ ನಿಯಮವು ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್‌ನಲ್ಲಿ ಈಗಾಗಲೇ ಅನ್ವಯವಾಗುತ್ತಿದ್ದು, ಆಟಗಾರರು ಮತ್ತು ಅಂಪೈರ್‌ಗಳು ಇದರಿಂದ ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲ. ಪಂದ್ಯದ ಸಮಯದಲ್ಲಿ, ಮೂರನೇ ಓವರ್‌ನ ಎರಡನೇ ಎಸೆತದ ನಂತರ ಅಂಪೈರ್ ಸಿಗ್ನಲ್ ನೀಡುತ್ತಾರೆ, ನಂತರ ಉಳಿದ ಫೀಲ್ಡರ್‌ಗಳು 30 ಅಡಿ ವೃತ್ತದ ಹೊರಗೆ ಹೋಗಲು ಸಾಧ್ಯವಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ಬದಲಾವಣೆ ಏಕೆ ಅಗತ್ಯವಾಗಿತ್ತು?

ಪವರ್‌ಪ್ಲೇನ ಸಂಪೂರ್ಣ ಓವರ್​ಗೆ ನಿಗಧಿಪಡಿಸುವುದರಿಂದ ಎದುರಾಳಿ ತಂಡಕ್ಕೆ ಭಾರಿ ಅನುಕೂಲ ಸಿಗುತ್ತದೆ ಎಂದು ಹಲವು ಬಾರಿ ಗಮನಿಸಲಾಗಿದೆ. ಹೊಸ ವ್ಯವಸ್ಥೆಯಲ್ಲಿ, ಪವರ್‌ಪ್ಲೇನ ಒಂದು ಭಾಗವನ್ನು ಚೆಂಡುಗಳಿಗೆ ಅನುಗುಣವಾಗಿ ನೀಡುವುದರಿಂದ, ಇದು ಮೈದಾನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಇದನ್ನು ಹೆಚ್ಚು ನ್ಯಾಯಯುತವೆಂದು ಪರಿಗಣಿಸಲಾಗುತ್ತದೆ.