Team India: ಅಯ್ಯರ್​, ಗಿಲ್​ಗಿಂತಲೂ ಏಕದಿನ ತಂಡದ ನಾಯಕತ್ವಕ್ಕೆ ಆತ ಸೂಕ್ತ! ಸ್ಟಾರ್ ಆಲ್​ರೌಂಡರ್ ಪರ​ ರೈನಾ ಬ್ಯಾಟಿಂಗ್ | Future of Indian Cricket Suresh Raina Supports Hardik Pandya for ODI Captaincy | ಕ್ರೀಡೆ

Team India: ಅಯ್ಯರ್​, ಗಿಲ್​ಗಿಂತಲೂ ಏಕದಿನ ತಂಡದ ನಾಯಕತ್ವಕ್ಕೆ ಆತ ಸೂಕ್ತ! ಸ್ಟಾರ್ ಆಲ್​ರೌಂಡರ್ ಪರ​ ರೈನಾ ಬ್ಯಾಟಿಂಗ್ | Future of Indian Cricket Suresh Raina Supports Hardik Pandya for ODI Captaincy | ಕ್ರೀಡೆ

Last Updated:


ರೋಹಿತ್ ಶರ್ಮಾ ನಂತರ, ಭಾರತದ ಏಕದಿನ ತಂಡದ ನಾಯಕತ್ವದ ರೇಸ್‌ನಲ್ಲಿ ಶ್ರೇಯಸ್ ಅಯ್ಯರ್ ಹೆಸರು ಕೇಳಿಬರುತ್ತಿದೆ. ಬಿಸಿಸಿಐ ಶೀಘ್ರದಲ್ಲೇ ಏಕದಿನ ತಂಡದ ನಾಯಕತ್ವವನ್ನು ಅಯ್ಯರ್ ಅವರಿಗೆ ಹಸ್ತಾಂತರಿಸಬಹುದು ಎಂಬ ಚರ್ಚೆಯೂ ನಡೆದಿದೆ ಎನ್ನಲಾಗಿದೆ.

ಟೀಂ ಇಂಡಿಯಾಟೀಂ ಇಂಡಿಯಾ
ಟೀಂ ಇಂಡಿಯಾ

ಭಾರತದ ಏಕದಿನ ತಂಡದ (India ODI Team) ನಾಯಕ ರೋಹಿತ್ ಶರ್ಮಾ (Rohit Sharma) ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ (Test Cricket) ನಿವೃತ್ತರಾಗಿದ್ದಾರೆ. 2027 ರ ವಿಶ್ವಕಪ್ ವರೆಗೆ ರೋಹಿತ್ ಶರ್ಮಾ ಏಕದಿನ ಪಂದ್ಯಗಳನ್ನು ಆಡುತ್ತಾರಾ? ಇಲ್ವಾ? ಎಂಬ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಏಕದಿನ ಸರಣಿಯನ್ನು ಆಡುವುದನ್ನು ಕಾಣಬಹುದು. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯ ನಂತರ ರೋಹಿತ್ ಏಕದಿನ ಪಂದ್ಯಗಳಿಂದ ನಿವೃತ್ತರಾಗಬಹುದು ಎಂಬ ಊಹಾಪೋಹವೂ ಇದೆ. ಈ ವಿಷಯದಲ್ಲಿ ರೋಹಿತ್ ಶರ್ಮಾ ಅಥವಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ರೋಹಿತ್​ ನಿವೃತ್ತಿಯ ಚರ್ಚೆಗಳು ಮಾತ್ರ ಎಗ್ಗಿಲ್ಲದೆ ಸಾಗುತ್ತಿವೆ.

ರೋಹಿತ್ ಶರ್ಮಾ ನಿವೃತ್ತ ವಿಚಾರ ಬಂದಾಗಲೆಲ್ಲಾ ಅವರ ಸ್ಥಾನದಲ್ಲಿ ಯಾರನ್ನು ತಂಡದ ನಾಯಕರನ್ನಾಗಿ ಮಾಡಲಾಗುವುದು ಎಂಬ ಚರ್ಚೆ ಈಗಾಗಲೇ ತೀವ್ರಗೊಂಡಿದೆ. ಅನೇಕ ಭಾರತೀಯ ದಂತಕಥೆಗಳು ಈ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಟೀಮ್ ಇಂಡಿಯಾದ ಹೊಸ ಏಕದಿನ ನಾಯಕನ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.

ಏಕದಿನ ತಂಡದ ನಾಯಕ ಯಾರಾಗಬೇಕು?

ರೋಹಿತ್ ಶರ್ಮಾ ನಂತರ, ಭಾರತದ ಏಕದಿನ ತಂಡದ ನಾಯಕತ್ವದ ರೇಸ್‌ನಲ್ಲಿ ಶ್ರೇಯಸ್ ಅಯ್ಯರ್ ಹೆಸರು ಕೇಳಿಬರುತ್ತಿದೆ. ಬಿಸಿಸಿಐ ಶೀಘ್ರದಲ್ಲೇ ಏಕದಿನ ತಂಡದ ನಾಯಕತ್ವವನ್ನು ಅಯ್ಯರ್ ಅವರಿಗೆ ಹಸ್ತಾಂತರಿಸಬಹುದು ಎಂಬ ಚರ್ಚೆಯೂ ನಡೆದಿದೆ ಎನ್ನಲಾಗಿದೆ. ಆದರೆ ಮಂಡಳಿಯು ಈ ವಿಷಯಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಅದೇ ಸಮಯದಲ್ಲಿ, ಭಾರತದ ಟೆಸ್ಟ್ ತಂಡದ ನಾಯಕರಾದ ಶುಭ್​ಮನ್ ಗಿಲ್ ಕೂಡ ಈ ರೇಸ್‌ನಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಗಿಲ್ ಭಾರತದ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡು 2-2ರಲ್ಲಿ ಸರಣಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

ಕಪಿಲ್​ ದೇವ್​- ಧೋನಿಯ ಗುಣ

ಶುಭಂಕರ್ ಮಿಶ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ, ಭಾರತೀಯ ತಂಡದ ಅನುಭವಿ ಆಟಗಾರ ಸುರೇಶ್ ರೈನಾ, ‘ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾದರೆ ಅನೇಕ ಪವಾಡಗಳನ್ನು ಮಾಡುತ್ತಾರೆ’ ಎಂದು ನಾನು ಭಾವಿಸುತ್ತೇನೆ. ಪಾಂಡ್ಯ ಮಾಜಿ ಕ್ರಿಕೆಟಿಗ ಮತ್ತು ನಾಯಕ ಕಪಿಲ್ ದೇವ್ ಅವರ ಅನುಭವವನ್ನು ಹೊಂದಿದ್ದಾರೆ. ಪಾಂಡ್ಯ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರರಲ್ಲೂ ಉತ್ತಮರು. ಹಾಗಾಗಿ ಏಕದಿನ ತಂಡದ ನಾಯಕತ್ವಕ್ಕೆ ಅವರೇ ಸೂಕ್ತ ಎಂಬದು ತಿಳಿಸಿದ್ದಾರೆ.

ಇದನ್ನೂ ಓದಿ: Asia Cup 2025: ಏಷ್ಯಾಕಪ್ನ 19 ಪಂದ್ಯಗಳಲ್ಲಿ 18ರ ಸಮಯದಲ್ಲಿ ಬದಲಾವಣೆ! ಕಾರಣ ಇಲ್ಲಿದೆ

‘ಪಾಂಡ್ಯ ತುಂಬಾ ಪಾಸಿಟಿವ್ ವ್ಯಕ್ತಿ, ಪ್ಲೇಯರ್​​ಗಳ ನೆಚ್ಚಿನ ನಾಯ ಅವರು ಪ್ರದರ್ಶನ ಕೂಡ ಉತ್ತಮವಾಗಿದೆ ಎಂದು ಸುರೇಶ್ ರೈನಾ ಹೇಳಿದ್ದಾರೆ. ‘ನಾನು ಅವರಲ್ಲಿ ಮಹಿ ಭಾಯ್ (ಮಹೇಂದ್ರ ಸಿಂಗ್ ಧೋನಿ) ಅವರ ವ್ಯಕ್ತಿತ್ವದ ಸ್ವಲ್ಪ ಭಾಗವನ್ನು ನೋಡುತ್ತೇನೆ, ಅವರು ಮೈದಾನದಲ್ಲಿ ಮಾತನಾಡುವ ರೀತಿ ಕೂಡ ಆಗೆಯೇ ಇರುತ್ತದೆ’ ನನಗೆ ಪಾಂಡ್ಯ ಅವರ ಸ್ಟ್ರೆಂತ್​ ತುಂಬಾ ಇಷ್ಟ’ ಎಂದು ರೈನಾ ಹೇಳಿದ್ದಾರೆ.

ಪಾಂಡ್ಯ 2022ರ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್‌ಗೆ ಚಾಂಪಿಯನ್‌ಶಿಪ್ ಗೆದ್ದಿದ್ದರು ಮತ್ತು 16 ಟಿ20ಐ ಪಂದ್ಯಗಳಲ್ಲಿ ಭಾರತವನ್ನು 10 ಗೆಲುವು ಪಡೆದಿದ್ದಾರೆ. ಆದರೆ, ಗಾಯದ ಸಮಸ್ಯೆಗಳಿಂದಾಗಿ ಅವರನ್ನು ಟಿ20ಐ ನಾಯಕತ್ವದಿಂದ ಕೈಬಿಡಲಾಗಿತ್ತು, ಮತ್ತು ಸೂರ್ಯಕುಮಾರ್ ಯಾದವ್‌ಗೆ ಟಿ20ಐ ನಾಯಕತ್ವ ನೀಡಲಾಗಿದೆ.

ಇದನ್ನೂ ಓದಿ: KCL: 6,6,6,,6,6,1,6,6,6,6,6,6 ಕೊನೆಯ 12 ಎಸೆತಗಳಲ್ಲಿ 11 ಸಿಕ್ಸರ್, 71 ರನ್! ಟಿ20ಯಲ್ಲಿ ಚರಿತ್ರೆ ಸೃಷ್ಟಿಸಿದ ಕೇರಳ ಬ್ಯಾಟ್ಸ್​ಮನ್

ಶ್ರೇಯಸ್ ಪ್ರಬಲ ಸ್ಪರ್ಧಿ

ಆದರೆ ಶ್ರೇಯಸ್ ಅಯ್ಯರ್ ಏಕದಿನ ತಂಡದ ನಾಯಕತ್ವದ ರೇಸ್‌ನಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು 5 ಪಂದ್ಯಗಳಲ್ಲಿ 243 ರನ್‌ಗಳನ್ನು (15, 56, 79, 45, 48) ಗಳಿಸಿ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 70 ಒಡಿಐ ಪಂದ್ಯಗಳಲ್ಲಿ 2845 ರನ್‌ಗಳನ್ನು (ಸರಾಸರಿ 48.22, 5 ಶತಕಗಳು) ಗಳಿಸಿರುವ ಅಯ್ಯರ್, ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್‌ನ ನಾಯಕನಾಗಿ ಫೈನಲ್‌ಗೆ ಮುನ್ನಡೆಸಿದ್ದರು. ಬಿಸಿಸಿಐ ಶ್ರೇಯಸ್ ಅಯ್ಯರ್‌ನನ್ನು ದೀರ್ಘಕಾಲಿಕ ಒಡಿಐ ನಾಯಕನಾಗಿ ಪರಿಗಣಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಏಷ್ಯಾ ಕಪ್ 2025 ರ ಟಿ20 ತಂಡದಿಂದ ಅವರನ್ನು ಕೈಬಿಡಲಾಗಿದೆ, ಇದು ಚರ್ಚೆಗೆ ಕಾರಣವಾಗಿದೆ.