Last Updated:
ಬುಧವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾದ ಈ ಪಂದ್ಯಕ್ಕೆ ಟೀಮ್ ಇಂಡಿಯಾ ಮೂರು ಬದಲಾವಣೆಗಳೊಂದಿಗೆ ಮೈದಾನಕ್ಕೆ ಇಳಿದಿದೆ. ಸತತ ಮೂರು ಟೆಸ್ಟ್‌ಗಳಲ್ಲಿ ವಿಫಲರಾದ ನಂತರ ಕರುಣ್ ನಾಯರ್ ಅವರನ್ನು ಕೈಬಿಟ್ಟ ಟೀಮ್ ಇಂಡಿಯಾ, ಸಾಯಿ ಸುದರ್ಶನ್ ಅವರನ್ನು ತಂಡಕ್ಕೆ ಕರೆತಂದಿದೆ. ಗಾಯಗಳಿಂದಾಗಿ ತಂಡದಿಂದ ಹೊರಗುಳಿದ ಆಕಾಶ್ ದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರ ಬದಲಿಗೆ ಅನ್ಶುಲ್ ಕಂಬೋಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಐದು ಟೆಸ್ಟ್‌ಗಳ ಆಂಡರ್ಸನ್-ಸಚಿನ್ (Anderson-Tendulkar Trophy) ಟ್ರೋಫಿಯ ಭಾಗವಾಗಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಪೆಷಲಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್‌ಗೆ (Kuldeep Yadav) ಅವಕಾಶ ನೀಡದಿರುವ ಕೋಚ್ ಗೌತಮ್ ಗಂಭೀರ್ ನಿರ್ಧಾರವನ್ನು ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಪ್ಲೇಯಿಂಗ್ ಇಲವೆನ್ನಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಆಯ್ಕೆಯಾಗುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮ್ಯಾನೇಜ್ಮೆಮಟ್ ಎಲ್ಲರ ನಿರೀಕ್ಷೆಯನ್ನ ಹುಸಿಗೊಳಿಸಿದೆ.
ಬುಧವಾರ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾದ ಈ ಪಂದ್ಯಕ್ಕೆ ಟೀಮ್ ಇಂಡಿಯಾ ಮೂರು ಬದಲಾವಣೆಗಳೊಂದಿಗೆ ಮೈದಾನಕ್ಕೆ ಇಳಿದಿದೆ. ಸತತ ಮೂರು ಟೆಸ್ಟ್‌ಗಳಲ್ಲಿ ವಿಫಲರಾದ ನಂತರ ಕರುಣ್ ನಾಯರ್ ಅವರನ್ನು ಕೈಬಿಟ್ಟ ಟೀಮ್ ಇಂಡಿಯಾ, ಸಾಯಿ ಸುದರ್ಶನ್ ಅವರನ್ನು ತಂಡಕ್ಕೆ ಕರೆತಂದಿದೆ. ಗಾಯಗಳಿಂದಾಗಿ ತಂಡದಿಂದ ಹೊರಗುಳಿದ ಆಕಾಶ್ ದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರ ಬದಲಿಗೆ ಅನ್ಶುಲ್ ಕಂಬೋಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಾಷಿಂಗ್ಟನ್ ಸುಂದರ್ ಅವರನ್ನು ಸ್ಪಿನ್ ಆಲ್‌ರೌಂಡರ್ ಆಗಿ ಉಳಿಸಿಕೊಂಡಿತು. ಸುಂದರ್ ಅವರ ಬ್ಯಾಟಿಂಗ್ ಆಳವನ್ನು ಗಮನದಲ್ಲಿಟ್ಟುಕೊಂಡು ಬಹುಶಃ ಮತ್ತೊಂದು ಅವಕಾಶ ನೀಡಿದೆ. ಅಲ್ಲದೆ ಅವರು ಕಳೆದ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು.
ಮೊದಲ ಮೂರು ಪಂದ್ಯಗಳಲ್ಲಿ ಭಾರತ ತಂಡದ ಸ್ಪಿನ್ ವಿಭಾಗ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ ಬ್ಯಾಟಿಂಗ್ನಲ್ಲಿ ಮಾತ್ರ ಮಿಂಚುತ್ತಿದ್ದಾರೆ. ಆದರೆ ಬೌಲಿಂಗ್ನಲ್ಲಿ ಯಾವುದೇ ಪ್ರದರ್ಶನ ತೋರುತ್ತಿಲ್ಲ. ಹಾಗಾಗಿ ಕುಲದೀಪ್ ಯಾದವ್‌ಗೆ ಸರಣಿ ಗೆಲ್ಲುವುದಕ್ಕೆ ನಿರ್ಣಾಯಕವಾಗಿರುವ ಕೊನೆಯ 2 ಪಂದ್ಯಗಳಲ್ಲಾದರೂ ಅವಕಾಶ ನೀಡಬಹುದು ಎಂದು ನಿರೀಕ್ಷಿಸಲಾಗುತ್ತು. ಆದರೆ ಗಂಭೀರ್, ಗಿಲ್ ಕುಲದೀಪ್ ಯಾದವ್‌ಗೆ ಅವಕಾಶ ನೀಡದಿದ್ದಕ್ಕೆ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುಂದರ್ ಸ್ಥಾನದಲ್ಲಿ ಕುಲ್ದೀಪ್ ಯಾದವ್ ಅವರನ್ನು ಆಡಿಸಬೇಕಿತ್ತು ಎಂದು ಕೆಲವರು ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ. ಇಂಗ್ಲೆಂಡ್‌ನ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವಲ್ಲಿ ಭಾರತೀಯ ಬೌಲರ್‌ಗಳು ವಿಫಲರಾಗುತ್ತಿದ್ದಾರೆ. ಒಂದು ವೇಳೆ ಕುಲದೀಪ್ ಯಾದವ್ ಇದ್ದರೆ, ಆ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದರು ಎಂದು ಟೀಕಿಸುತ್ತಿದ್ದಾರೆ. ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರೂ, ಸ್ಪೆಷಲಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗಿಂತ ಹೆಚ್ಚಿನ ಪರಿಣಾಮಕಾರಿ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ.
ಕೌಂಟಿ ಕ್ರಿಕೆಟ್‌ನಲ್ಲೂ ಚಹಲ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ, ಕುಲದೀಪ್ ಯಾದವ್ ಅವರನ್ನು ಆಡಿಸುವುದರಿಂದ ಭಾರತದ ಬೌಲಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಹೇಳಲಾಗುತ್ತಿದೆ. ಗೌತಮ್ ಗಂಭೀರ್ ಅವರನ್ನು ಕೆಲವರು ಬುದ್ಧಿಹೀನ ಎಂದು ಕಟುವಾಗಿ ಟೀಕಿಸುತ್ತಿದ್ದಾರೆ. ಬೇರೆ ಯಾವುದೇ ತಂಡದಲ್ಲಿದ್ದಿದ್ದರೆ ಕುಲ್ದೀಪ್ ಯಾದವ್ ಈಗಾಗಲೇ 100 ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದರು ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಗೌತಮ್ ಗಂಭೀರ್ ಅವರ ತಪ್ಪು ನಿರ್ಧಾರಗಳಿಂದಾಗಿ ಕುಲ್ದೀಪ್ ಯಾದವ್ ಅವರಿಗೆ ಅನ್ಯಾಯವಾಗಿದೆ ಎಂದು ಟೀಕೆ ವ್ಯಕ್ತವಾಗುತ್ತಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಅನ್ಶುಲ್ ಕಾಂಬೋಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
July 23, 2025 5:00 PM IST
Team India: ಆತ ಬೇರೆ ತಂಡದಲ್ಲಿದ್ದಿದ್ದರೆ ಈ ಸಮಯಕ್ಕೆ 100 ಪಂದ್ಯಗಳನ್ನಾಡುತ್ತಿದ್ದ! ಗಂಭೀರ್ ವಿರುದ್ಧ ಸಿಡಿದೆದ್ದ ಕ್ರಿಕೆಟ್ ಫ್ಯಾನ್ಸ್