Team India: ಕರುಣ್​ ಔಟ್, ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್, ಜಡೇಜಾಗೆ ಬಡ್ತಿ! ವಿಂಡೀಸ್ ಜೊತೆಗಿನ ಟೆಸ್ಟ್ ಸರಣಿಗೆ ಭಾರತ ತಂಡ ಘೋಷಣೆTeam India: ಕರುಣ್​ ಔಟ್, ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್, ಜಡೇಜಾಗೆ ಬಡ್ತಿ! ವಿಂಡೀಸ್ ಜೊತೆಗಿನ ಟೆಸ್ಟ್ ಸರಣಿಗೆ ಭಾರತ ತಂಡ ಘೋಷಣೆ | India Squad for West Indies Tests: Jasprit Bumrah Included, Karun Nair Dropped | ಕ್ರೀಡೆ

Team India: ಕರುಣ್​ ಔಟ್, ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್, ಜಡೇಜಾಗೆ ಬಡ್ತಿ! ವಿಂಡೀಸ್ ಜೊತೆಗಿನ ಟೆಸ್ಟ್ ಸರಣಿಗೆ ಭಾರತ ತಂಡ ಘೋಷಣೆTeam India: ಕರುಣ್​ ಔಟ್, ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್, ಜಡೇಜಾಗೆ ಬಡ್ತಿ! ವಿಂಡೀಸ್ ಜೊತೆಗಿನ ಟೆಸ್ಟ್ ಸರಣಿಗೆ ಭಾರತ ತಂಡ ಘೋಷಣೆ | India Squad for West Indies Tests: Jasprit Bumrah Included, Karun Nair Dropped | ಕ್ರೀಡೆ

Last Updated:

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದ್ದು, 9 ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದ ಕರುಣ್ ನಾಯರ್ ಇಂಗ್ಲೆಂಡ್ ಪ್ರವಾಸದಲ್ಲಿ ವಿಫಲವಾದ ಬೆನ್ನಲ್ಲೇ ಅವರನ್ನ ಮತ್ತೆ ತಂಡದಿಂದ ಕೈಬಿಡಲಾಗಿದೆ. ಅವರ ಬದಲಿಗೆ ಕರ್ನಾಟಕದ ಯುವ ಆಟಗಾರ ದೇವದತ್ ಪಡಿಕ್ಕಲ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಭಾರತ ತಂಡಭಾರತ ತಂಡ
ಭಾರತ ತಂಡ

ಟೀಮ್ ಇಂಡಿಯಾದಲ್ಲಿ ಏಷ್ಯಾ ಕಪ್ 2025 (Asia Cup) ಟೂರ್ನಮೆಂಟ್‌ನಲ್ಲಿ ಬ್ಯುಸಿಯಾಗಿದ್ದು, ಫೈನಲ್ ಪ್ರವೇಶಿಸಿ ಮತ್ತೊಂದು ಟ್ರೋಫಿ ಗೆಲ್ಲುವತ್ತಾ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. ಈ ಮಧ್ಯೆ ಟೀಮ್ ಇಂಡಿಯಾದ ಬಗ್ಗೆ ಪ್ರಮುಖ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 2 ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ ಇತ್ತೀಚೆಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಕೆಲವು ಅಚ್ಚರಿ ಬದಲಾವಣೆಗಳಾಗಿವೆ.

ಉಪನಾಯಕ ರಿಷಭ್ ಪಂತ್ ಗಾಯದ ಕಾರಣ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗಾಗಿ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡದ ಹೊಸ ಉಪನಾಯಕರನ್ನಾಗಿ ನೇಮಿಸಲಾಗಿದೆ. ಇಂಗ್ಲೆಂಡ್ ಸರಣಿಯಲ್ಲಿ ತಂಡದಲ್ಲಿದ್ದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಸ್ಟಾರ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ರಿಷಭ್ ಪಂತ್ ಬದಲಿಗೆ ಎನ್​ ಜಗದೀಶನ್​ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಧ್ರುವ್ ಜುರೆಲ್​ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಗಾಯದ ಕಾರಣ ಇಂಗ್ಲೆಂಡ್ ಸರಣಿ ಮಿಸ್ ಮಾಡಿಕೊಂಡಿದ್ದ ನಿತೀಶ್ ಕುಮಾರ್ ರೆಡ್ಡಿಗೆ ವಿಂಡೀಸ್ ಸರಣಿಯಲ್ಲಿ ಚಾನ್ಸ್ ಸಿಕ್ಕಿದೆ. ಕರುಣ್ ನಾಯರ್ ಬದಲಿಗೆ ಕನ್ನಡಿಗ ದೇವದತ್ ಪಡಿಕ್ಕಲ್ 15 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇಂಗ್ಲೆಂಡ್ ಪ್ರವಾಸ ತಪ್ಪಿಸಿಕೊಂಡಿದ್ದ ಸ್ಪಿನ್ ಆಲ್​ರೌಂಡರ್ ಅಕ್ಷರ್ ಪಟೇಲ್ ಕೂಡ ತಂಡಕ್ಕೆ ಮರಳಿದ್ದಾರೆ.

ಕರುಣ್ ನಾಯರ್ ಏಕಿಲ್ಲ?

ಬಹಳ ದಿನಗಳ ನಂತರ ಭಾರತ ತಂಡಕ್ಕೆ ಮರಳಿದ್ದ ಕರುಣ್ ನಾಯರ್ ಅವರನ್ನು ಈ ಸರಣಿಯಿಂದ ಹೊರಗಿಡಲಾಗಿದೆ. ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ಅವರನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಕರುಣ್ ನಾಯರ್ ಅವರಿಗೆ ಅಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಆಯ್ಕೆದಾರರು ಈ ಬಾರಿ ಅವರನ್ನ ಆಯ್ಕೆಗೆ ಪರಿಗಣಿಸಿಲ್ಲ.

ತಂಡದಲ್ಲಿ ಹೊಸ ಆಟಗಾರ ಯಾರು?

ಕರುಣ್ ನಾಯರ್ ಬದಲಿಗೆ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರ ಜೊತೆಗೆ ಎನ್. ಜಗದೀಶನ್ ಕೂಡ ತಂಡದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮಧ್ಯದಲ್ಲಿ ರಿಷಭ್ ಪಂತ್ ಗಾಯಗೊಂಡಾಗ ಜಗದೀಶನ್ ಅವರಿಗೆ ತಂಡದಲ್ಲಿ ಬ್ಯಾಕ್ ವಿಕೆಟ್ ಕೀಪರ್ ಆಗಿ ಅವಕಾಶ ನೀಡಲಾಗಿತ್ತು. ಈ ಬಾರಿ ಅವರನ್ನು ಮೊದಲೇ ತಂಡಕ್ಕೆ ಸೇರಿಸಲಾಗಿದೆ.

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ತಂಡ

ಶುಭ್​ಮನ್ ಗಿಲ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ಎನ್ ಜಗದೀಶನ್