Last Updated:
ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್ (Sledge) ಒಂದು ಭಾಗ. ಕೆಲವೊಮ್ಮೆ ವಿಕೆಟ್ ಬೀಳದಂತಹ ಸಂದರ್ಭದಲ್ಲಿ ಆಟಗಾರರ ಏಕಾಗ್ರತೆ ಕದಡಲು ಪ್ರಯತ್ನಿಸಲಾಗುತ್ತಿತ್ತು. ಅದರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಅಂತಹ ತಂಡಗಳ ವಿರುದ್ಧ ನಡೆಯುವ ಪಂದ್ಯದಲ್ಲಿ ಸ್ಲೆಡ್ಜಿಂಗ್ ಎತೇಚ್ಚವಾಗಿ ನಡೆಯುತ್ತಿರುತ್ತದೆ.
ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್ (Sledge) ಒಂದು ಭಾಗ. ಕೆಲವೊಮ್ಮೆ ವಿಕೆಟ್ ಬೀಳದಂತಹ ಸಂದರ್ಭದಲ್ಲಿ ಆಟಗಾರರ ಏಕಾಗ್ರತೆ ಕದಡಲು ಪ್ರಯತ್ನಿಸಲಾಗುತ್ತಿತ್ತು. ಅದರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಅಂತಹ ತಂಡಗಳ ವಿರುದ್ಧ ನಡೆಯುವ ಪಂದ್ಯದಲ್ಲಿ ಸ್ಲೆಡ್ಜಿಂಗ್ ಎತೇಚ್ಚವಾಗಿ ನಡೆಯುತ್ತಿರುತ್ತದೆ. ಆದರೆ ವೆಸ್ಟ್ ಇಂಡೀಸ್‌ನ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಅವರನ್ನ ಯಾವ ಆಟಗಾರರು ಸ್ಲೆಡ್ಜಿಂಗ್ ಮಾಡುವ ಸಾಹಸ ಮಾಡುತ್ತಿರಲಿಲ್ಲವಂತೆ. ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿರುವ ಈ ಎಡಗೈ ಬ್ಯಾಟರ್ ತಮ್ಮ ಆಕ್ರಮಣಕಾರಿ ಶೈಲಿ, ಉತ್ತಮ ಫುಟ್‌ವರ್ಕ್, ಮತ್ತು ಶಾಟ್ ಆಯ್ಕೆಯಿಂದ ಬೌಲರ್‌ಗಳಿಗೆ ಕಂಟಕವಾಗಿದ್ದರು. ಕವರ್ ಡ್ರೈವ್, ಪುಲ್ ಶಾಟ್‌ಗಳು, ಮತ್ತು ಲಾಫ್ಟೆಡ್ ಶಾಟ್‌ಗಳನ್ನು ಆಡುವಲ್ಲಿ ಅವರು ನಿಪುಣರಾಗಿದ್ದರು. ಲಾರಾ ಅವರ ಆತ್ಮವಿಶ್ವಾಸವೇ ಅವರನ್ನು ವಿಶೇಷವಾಗಿಸಿತ್ತು. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಅವರು ಶಾಂತವಾಗಿ ಬ್ಯಾಟಿಂಗ್ ಮಾಡಿ, ಎದುರಾಳಿ ತಂಡದ ಬೌಲರ್‌ಗಳಿಗೆ ಭಯ ಹುಟ್ಟಿಸುತ್ತಿದ್ದರು. ಈ ಕಾರಣದಿಂದಲೇ, ಎದುರಾಳಿಗಳು ಲಾರಾ ಅವರನ್ನು ಸ್ಲೆಡ್ಜ್ ಮಾಡಲು ಹಿಂದೇಟು ಹಾಕುತ್ತಿದ್ದರು.
ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ, ಜಿಯೋಹಾಟ್‌ಸ್ಟಾರ್‌ನೊಂದಿಗಿನ ಸಂದರ್ಶನದಲ್ಲಿ ಲಾರಾ ಬಗ್ಗೆ ಒಂದು ರೋಚಕ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದಾಗ, ತಂಡದ ಸಭೆಯಲ್ಲಿ ಲಾರಾ ಅವರನ್ನು ಸ್ಲೆಡ್ಜ್ ಮಾಡದಿರಲು ಒಮ್ಮತದಿಂದ ನಿರ್ಧರಿಸಲಾಗಿತ್ತು. “ನಾವು ಲಾರಾ ಅವರೊಂದಿಗೆ ಯಾವುದೇ ಮಾತಿನ ವಾಗ್ವಾದಕ್ಕೆ ಹೋಗಬಾರದು ಎಂದು ತೀರ್ಮಾನಿಸಿದ್ದೆವು. ಏಕೆಂದರೆ, ಅವರನ್ನು ಕೆರಳಿಸಿದರೆ, ಅವರು ಇನ್ನಷ್ಟು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ, ನಮಗೆ ದೊಡ್ಡ ಬೆಲೆ ತೆತ್ತುಸುತ್ತಾರೆ ಎಂದು ನಮಗೆ ಗೊತ್ತಿತ್ತು,” ಎಂದು ಚೋಪ್ರಾ ಹೇಳಿದರು.
ಲಾರಾ ಅವರ ಆತ್ಮವಿಶ್ವಾಸ ಮತ್ತು ಆಟದ ಶೈಲಿಯಿಂದಾಗಿ, ಭಾರತೀಯ ತಂಡವು ಅವರನ್ನು ಸ್ಲೆಡ್ಜ್ ಮಾಡದೆ, ತಾವಾಗಿಯೇ ಔಟ್ ಆಗುವವರೆಗೆ ಕಾಯುವ ತಂತ್ರವನ್ನು ಅನುಸರಿಸಿತು. ಈ ಘಟನೆಯಿಂದ ಲಾರಾ ಎದುರಾಳಿ ತಂಡಗಳಿಗೆ ಎಷ್ಟು ಭಯ ಹುಟ್ಟಿಸುತ್ತಿದ್ದರೆಂದು ತಿಳಿಯುತ್ತದೆ.
ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಒಂದು ಮರೆಯಲಾಗದ ವಿಶ್ವದಾಖಲೆಯನ್ನು ಸ್ಥಾಪಿಸಿದ್ದಾರೆ. 2004ರಲ್ಲಿ ಆಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ 400* ರನ್‌ಗಳನ್ನು ಗಳಿಸಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್‌ನ ದಾಖಲೆಯನ್ನು ಮಾಡಿದರು. ಈ ದಾಖಲೆ ಇಂದಿಗೂ ಯಾರೂ ಮುರಿದಿಲ್ಲ. ಇದಕ್ಕೂ ಮುಂಚೆ, 1994ರಲ್ಲಿ ಇಂಗ್ಲೆಂಡ್ ವಿರುದ್ಧವೇ 375 ರನ್ ಗಳಿಸಿದ್ದ ಲಾರಾ ಗ್ಯಾರಿ ಸೋಬರ್ಸ್‌ನ 365* ರನ್ ದಾಖಲೆಯನ್ನು ಮುರಿದಿದ್ದರು.
ಟೆಸ್ಟ್ ಕ್ರಿಕೆಟ್ : 1990ರಿಂದ 2006ರವರೆಗೆ ವೆಸ್ಟ್ ಇಂಡೀಸ್ ಪರ 131 ಟೆಸ್ಟ್ ಪಂದ್ಯಗಳನ್ನಾಡಿದ ಲಾರಾ, 11,953 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 34 ಶತಕಗಳು ಮತ್ತು 9 ದ್ವಿಶತಕಗಳಿವೆ. ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ 52.88.
ಏಕದಿನ ಕ್ರಿಕೆಟ್: 299 ODI ಪಂದ್ಯಗಳಲ್ಲಿ 10,405 ರನ್ ಗಳಿಸಿದ್ದಾರೆ, ಇದರಲ್ಲಿ 19 ಶತಕಗಳು ಮತ್ತು 63 ಅರ್ಧಶತಕಗಳಿವೆ. ODIಯಲ್ಲಿ ಅವರ ಸರಾಸರಿ 40.48.
August 08, 2025 9:57 PM IST