Team India: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಜಸ್‌ಪ್ರೀತ್ ಬುಮ್ರಾ ಮಹತ್ವದ ನಿರ್ಧಾರ ತೆಗೆದುಕೊಂಡ ಬುಮ್ರಾ! | Bumrah Confirms Availability for West Indies Tests, Set to Fire in Ahmedabad and Delhi | ಕ್ರೀಡೆ

Team India: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಜಸ್‌ಪ್ರೀತ್ ಬುಮ್ರಾ ಮಹತ್ವದ ನಿರ್ಧಾರ ತೆಗೆದುಕೊಂಡ ಬುಮ್ರಾ! | Bumrah Confirms Availability for West Indies Tests, Set to Fire in Ahmedabad and Delhi | ಕ್ರೀಡೆ
ವಿಂಡೀಸ್ ಸರಣಿಯನ್ನಾಡಲು ಬುಮ್ರಾ ಸಿದ್ಧ

31 ವರ್ಷದ ಬುಮ್ರಾ ಅವರು ಈ ವರ್ಷದ ಆರಂಭದಲ್ಲಿ ಬಾರ್ಡರ್-ಗ್ಯಾವಾಸ್ಕರ್ ಟ್ರೋಫಿಯ ಕೊನೆಯ ಐದನೇ ಟೆಸ್ಟ್‌ನಲ್ಲಿ ಹಿಂದಿನ ಭಾಗದ ಗಾಯಕ್ಕೆ ತುತ್ತಾಗಿ, ಇಂಗ್ಲೆಂಡ್ ಪ್ರವಾಸದಲ್ಲಿ ರೊಟ್ಯಾಷನ್ ಮಾದರಿಯಲ್ಲಿ ಕೇವಲ ಮೂರು ಟೆಸ್ಟ್‌ಗಳಲ್ಲಿ ಮಾತ್ರ ಆಡಿದ್ದರು. ಟೀಮ್ ಮ್ಯಾನೇಜ್‌ಮೆಂಟ್ ಅವರ ವರ್ಕ್‌ಲೋಡ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸಿದ್ದರಿಂದಾಗಿ, ಈಗ ಏಷ್ಯಾಕಪ್‌ನಲ್ಲಿ ಸಹ ಅವರ ಭಾಗವಹಿಸುವಿಕೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಏಕೆಂದರೆ, ಏಷ್ಯಾಕಪ್ ಫೈನಲ್ ಸೆಪ್ಟೆಂಬರ್ 28ಕ್ಕೆ ನಡೆಯಲಿದೆ. ಅಹಮದಾಬಾದ್‌ನಲ್ಲಿ ಅಕ್ಟೋಬರ್ 2ರಿಂದ ಆರಂಭವಾಗುವ ಮೊದಲ ಟೆಸ್ಟ್‌ಗೆ ಕೇವಲ ಮೂರು-ನಾಲ್ಕು ದಿನಗಳ ಅಂತರ ಮಾತ್ರವಿದೆ. ಆದರೂ, ಬುಮ್ರಾ ಅವರು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಿರುವುದು ಭಾರತೀಯ ಅಭಿಮಾನಿಗಳಲ್ಲಿ ಸಂತಸ ತರಿಸಿದೆ.

ಬುಮ್ರಾಗೆ ಅಭ್ಯಾಸ ಒಳ್ಳೆಯದೆಂದ ಕೋಚ್

ಭಾರತ ಸಹಾಯಕ ಕೋಚ್ ರೈನ್ ಟೆನ್ ಡೋಶಾಟ್ ಮಂಗಳವಾರ ಆಸಿಯಾ ಕಪ್ ಸೂಪರ್ ಫೌರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮುಂಚೆ ಸುದ್ದುಗೋಷ್ಠಿಯಲ್ಲಿ ಭಾಗವಹಿಸಿ, “ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಕಡಿಮೆ. ಅವರು ವೆಸ್ಟ್ ಇಂಡೀಸ್ ಟೆಸ್ಟ್‌ಗಳಲ್ಲಿ ಆಡಲು ಸಿದ್ಧರಾಗಿದ್ದಾರೆ. ಮುಂದಿನ ಪಂದ್ಯಗಳು ಮುಖ್ಯವಾಗಿವೆ, ಹೆಚ್ಚಿನ ಮ್ಯಾಚ್ ಪ್ರ್ಯಾಕ್ಟಿಸ್ ಅವರಿಗೆ ಒಳ್ಳೆಯದು” ಎಂದರು. ಈಗಿನ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಆಡಿರುವ ನಾಲ್ಕು ಪಂದ್ಯಗಳಲ್ಲಿ ಬುಮ್ರಾ ಮೂರು ಪಂದ್ಯಗಳನ್ನುಮಾತ್ರ ಆಡಿದ್ದಾರೆ. ಗ್ರೂಪ್ ಎ ಪಂದ್ಯದಲ್ಲಿ ಒಮಾನ್ ವಿರುದ್ಧ ಅರ್ಹತೆ ಖಚಿತಗೊಂಡ ನಂತರ ಅವರನ್ನು ವಿಶ್ರಾಂತಿಪಡಿಸಲಾಗಿತ್ತು, ಆದರೆ ಸೂಪರ್ ಫೋರ್‌ನಲ್ಲಿ ಬುಮ್ರಾ ಪಾಕಿಸ್ತಾನ ವಿರುದ್ಧ ನೀರಸ ಪ್ರದರ್ಶನ ತೋರಿದ್ದರು.

ಈ ಸರಣಿ ಭಾರತಕ್ಕೆ ಮುಖ್ಯವಾಗಿದ್ದು, ಅಹಮದಾಬಾದ್ ಮತ್ತು ದೆಹಲಿಯಲ್ಲಿ ನಡೆಯುತ್ತದೆ. ಬಿಸಿಸಿಐ ಸರಣಿಗೆ ಸ್ಕ್ವಾಡ್ ಅನ್ನು ಸೆಪ್ಟೆಂಬರ್ 24ರಂದು ಅಧಿಕೃತವಾಗಿ ಘೋಷಿಸಲಿದ್ದು, ಬುಮ್ರಾ ಆಡುವುದು ಖಚಿತವಾಗಿದೆ.

ಯಾರಿಗೆ ಅವಕಾಶ ಸಿಗುತ್ತದೆ?

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಇಂದು ಸಭೆ ಸೇರಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಅಂತಿಮಗೊಳಿಸಲಾಗುವುದು ಎಂಬ ವರದಿಗಳಿವೆ. ನಾಯಕ ಶುಭ್​ಮನ್ ಗಿಲ್ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ವಿಶ್ರಾಂತಿ ಮುಂದುವರಿಸುವ ಸಾಧ್ಯತೆಯಿದೆ. ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡುವುದು ಖಚಿತ. ದೀರ್ಘ ಸ್ವರೂಪದಿಂದ ಸ್ವತಃ ಶ್ರೇಯಸ್ ಅಯ್ಯರ್ ದೂರ

ಕನ್ನಡಿಗ ದೇವದತ್ತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ ಟಸ್ಟ್ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಅಯ್ಯರ್ ಅಲಭ್ಯರಾಗುತ್ತಿರುವುದುರಿಂದ ಕರುಣ್ ನಾಯರ್​ಗೆ ಮತ್ತೊಂದು ಚಾನ್ಸ್ ಸಿಕ್ಕರೂ ಅಚ್ಚರಿಯಿಲ್ಲ. ಮೂರನೇ ಸ್ಪಿನ್ ಆಲ್‌ರೌಂಡರ್ ಆಗಿ ಅಕ್ಷರ್ ಪಟೇಲ್ ಆಯ್ಕೆ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಕುಲ್ದೀಪ್ ಯಾದವ್ ಅವರನ್ನು ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ತೆಗೆದುಕೊಂಡರೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಅವರಲ್ಲಿ ಒಬ್ಬರನ್ನು ಕೈಬಿಡುವ ಸಾಧ್ಯತೆಯಿದೆ. ಟೆಸ್ಟ್ ಚೊಚ್ಚಲ ಪಂದ್ಯವನ್ನು ಎದುರು ನೋಡುತ್ತಿರುವ ಅಭಿಮನ್ಯು ಈಶ್ವರನ್ ಅವರನ್ನು ಪರಿಗಣಿಸಬಹುದು ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ.

ಸಂಭಾವ್ಯ ಭಾರತ ತಂಡ

ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸುಂದರ್/ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಬುಮ್ರಾ, ಸಿರಾಜ್, ಪ್ರಸಿದ್ಧ್ ಕೃಷ್ಣ, ನಿತೀಶ್ ಕುಮಾರ್ ರೆಡ್ಡಿ, ನಾರಾಯಣ್ ಜಗದೀಶನ್,ಅಭಿಮನ್ಯು ಈಶ್ವರನ್