Team India: ವೆಸ್ಟ್ ಇಂಡೀಸ್ ವಿರುದ್ಧ ಸಂಪೂರ್ಣ ಪ್ರಾಬಲ್ಯ! ಗಿಲ್ ನೇತೃತ್ವದಲ್ಲಿ ಮೊದಲ ಸರಣಿ ಗೆದ್ದ ಭಾರತ | Gill Era Begins: India Wins First Test Series Under Shubman Gill’s Captaincy | ಕ್ರೀಡೆ

Team India: ವೆಸ್ಟ್ ಇಂಡೀಸ್ ವಿರುದ್ಧ ಸಂಪೂರ್ಣ ಪ್ರಾಬಲ್ಯ! ಗಿಲ್ ನೇತೃತ್ವದಲ್ಲಿ ಮೊದಲ ಸರಣಿ ಗೆದ್ದ ಭಾರತ | Gill Era Begins: India Wins First Test Series Under Shubman Gill’s Captaincy | ಕ್ರೀಡೆ

Last Updated:

ಇಂಗ್ಲೆಂಡ್ ಪ್ರವಾಸದಲ್ಲಿ ಶುಭ್​ಮನ್ ಗಿಲ್ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದ ನಾಯಕರಾಗಿದ್ದರು. ಆದರೆ ಆ ಐದು ಪಂದ್ಯಗಳ ಸರಣಿಯನ್ನು ಗೆಲ್ಲಲು ಭಾರತ ವಿಫಲವಾಗಿತ್ತು.

ಶುಭ್​ಮನ್ ಗಿಲ್ಶುಭ್​ಮನ್ ಗಿಲ್
ಶುಭ್​ಮನ್ ಗಿಲ್

ಶುಭ್​ಮನ್ ಗಿಲ್ (Shubman Gill) ನಾಯಕತ್ವದಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ಇಂಗ್ಲೆಂಡ್ ಪ್ರವಾಸದಲ್ಲಿ ಶುಭ್​ಮನ್ ಗಿಲ್ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದ ನಾಯಕರಾಗಿದ್ದರು. ಆದರೆ ಆ ಐದು ಪಂದ್ಯಗಳ ಸರಣಿಯನ್ನು ಗೆಲ್ಲಲು ಭಾರತ ವಿಫಲವಾಗಿತ್ತು. ಆ ಸರಣಿಯನ್ನ ಟೀಮ್ ಇಂಡಿಯಾ 2-2 ಡ್ರಾ ಸಾಧಿಸಿತ್ತು. ಆದರೆ ಇದೀಗ ತವರು ನೆಲದಲ್ಲಿ, ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ (India vs West Indies) ವಿರುದ್ಧ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಅನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದು 2-0 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು.

ಪಂದ್ಯದ ಹೈಲೈಟ್ಸ್

ಈ ಪಂದ್ಯದಲ್ಲಿ, ಭಾರತದ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಯಶಸ್ವಿ ಜೈಸ್ವಾಲ್ (175) ಮತ್ತು ಶುಭಮನ್ ಗಿಲ್ (129) ಶತಕಗಳ ನೆರವಿನಿಂದ ಭಾರತ ತಂಡ 518/5 ಕ್ಕೆ ಮೊದಲ ಇನ್ನಿಂಗ್ಸ್​ ಡಿಕ್ಲೇರ್ ಮಾಡಿಕೊಂಡಿತು. ಸಾಯಿ ಸುದರ್ಶನ್ 87 ರನ್ ಗಳಿಸಿದ್ದರು. ಭಾರತ ಅದ್ಭುತ ಬೌಲಿಂಗ್ ನಡೆಸಿ ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು 248 ರನ್‌ಗಳಿಗೆ ಆಲೌಟ್ ಮಾಡಿ 270 ರನ್​ಗಳ ಮುನ್ನಡೆ ಸಾಧಿಸಿತ್ತು. ಕುಲದೀಪ್ ಯಾದವ್ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ನಂತರ ವಿಂಡೀಸ್ ಮೇಲೆ ಭಾರತ ಫಾಲೋ-ಆನ್ ಜಾರಿ ಮಾಡಿತು.

ಇದನ್ನೂ ಓದಿ: IND vs WI: ಭಾರತದ ನೆಲದಲ್ಲಿ 25 ವರ್ಷಗಳಲ್ಲಿ ಇದೇ ಮೊದಲಿಗೆ ಅಚ್ಚರಿ ದಾಖಲೆ! ಗಂಭೀರ್​-ಗಿಲ್​ಗೆ ಬಿಗ್ ವಾರ್ನಿಂಗ್

ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್‌ಗಳ ಹಿನ್ನಡೆಯಲ್ಲಿರುವ ವೆಸ್ಟ್ ಇಂಡೀಸ್ 390ಕ್ಕೆ ಆಲೌಟ್ ಆಗಿ ಭಾರತಕ್ಕೆ 121 ರನ್‌ಗಳ ಗುರಿ ನೀಡಿತ್ತು. ವೆಸ್ಟ್ ಇಂಡೀಸ್ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಜಾನ್ ಕ್ಯಾಂಪ್‌ಬೆಲ್ 115 ರನ್‌ ಮತ್ತು ಶಾಯ್ ಹೋಪ್ 103 ರನ್‌ಗಳಿಸಿದ್ದರು. ಪಂದ್ಯದ ಕೊನೆಯ ದಿನದಂದು ಭಾರತ 3 ವಿಕೆಟ್ ಕಳೆದುಕೊಂಡು 121 ರನ್‌ಗಳ ಗುರಿಯನ್ನು ತಲುಪಿತು. ಅನುಭವಿ ಕೆಎಲ್ ರಾಹುಲ್ ಅರ್ಧಶತಕ ಸಿಡಿಸಿ ಭಾರತವನ್ನ ಗೆಲುವಿನ ಗಡಿ ದಾಟಿಸಿದರು. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ ಮತ್ತು 140 ರನ್‌ಗಳಿಂದ ಸೋಲಿಸಿತು.

ಗಿಲ್ ನಾಯಕತ್ವದ ಪ್ರಬುದ್ಧತೆ

ಶುಭ್​ಮನ್ ಗಿಲ್‌ ನಾಯಕನಾಗಿ ತಮ್ಮ ಎರಡನೇ ಟೆಸ್ಟ್‌ನಲ್ಲಿ ಸರಣಿ ಗೆಲುವು ಸಾಧಿಸುವ ಮೂಲಕ ಪ್ರಬುದ್ಧತೆ ತೋರಿದ್ದಾರೆ. 25 ವರ್ಷದ ಆಟಗಾರ ಶಾಂತ ಮತ್ತು ದೃಢವಾದ ನಾಯಕತ್ವದ ಬ್ರಾಂಡ್ ಪ್ರದರ್ಶಿಸಿದ್ದಾರೆ. ಬೌಲಿಂಗ್ ಬದಲಾವಣೆಗಳನ್ನು ಶಾಂತತೆಯಿಂದ ನಿರ್ವಹಿಸುವುದು ಮತ್ತು ದೀರ್ಘ ಅವಧಿಗಳಲ್ಲಿ ಆಳವಾಗಿ ಕಾರ್ಯನಿರ್ವಹಿಸಲು ತಮ್ಮ ಸ್ಪಿನ್ನರ್‌ಗಳನ್ನು ಬಳಸಿಕೊಂಡರು.

3 ನೇ ದಿನದಂದು ಫಾಲೋ-ಆನ್ ಅನ್ನು ಜಾರಿಗೊಳಿಸುವ ಅವರ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಅವರ ನಿರ್ಧಾರವು ಅಂತಿಮವಾಗಿ ಫಲ ನೀಡಿತು, ಏಕೆಂದರೆ ಭಾರತವು ಪ್ರವಾಸಿ ತಂಡದಿಂದ ಮತ್ತೊಂದು ಬ್ಯಾಟಿಂಗ್ ಕುಸಿತದ ಅಗತ್ಯವಿಲ್ಲದೆ ಗೆಲುವು ಸಾಧಿಸಿತು.

7 ಟೆಸ್ಟ್​ ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿರುವ ಗಿಲ್ 4ರಲ್ಲಿ ಗೆಲುವು, 2ರಲ್ಲಿ ಸೋಲು ಕಂಡಿದ್ದಾರೆ. ಮುಂದಿನ ಟೆಸ್ಟ್ ಸರಣಿಯನ್ನ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ ಆಡಲಿದ್ದು, ಈ ಸರಣಿ ಗೆಲುವು ಅವರ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ.

ಆಸ್ಟ್ರೇಲಿಯಾ ವಿರುದ್ಧ ಬಿಗ್ ಫೈಟ್

ಟೀಮ್ ಇಂಡಿಯಾ ತನ್ನ ಮುಂದಿನ ಅಂತಾರಾಷ್ಟ್ರೀಯ ಸರಣಿಯನ್ನ ಆಸ್ಟ್ರೇಲಿಯಾದಲ್ಲಿ ಆಡಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಏಕದಿನ ಪಂದ್ಯಗಳನ್ನಾಡಲಿದ್ದು, ಅಲ್ಲಿ ಶುಭ್​ಮನ್ ಗಿಲ್ ಏಕದಿನ ತಂಡದ ನಾಯಕರಾಗಿ ಪದಾರ್ಪಣೆ ಮಾಡಲಿದ್ದಾರೆ. ಅಕ್ಟೋಬರ್ 19, 23 ಹಾಗೂ 25 ರಂದು ಈ ಸರಣಿ ನಡೆಯಲಿದೆ. ನಂತರ ಅಕ್ಟೋಬರ್ 29, 31, ನವೆಂಬರ್ 2, 6, 8ರಂದು 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಟಿ20 ಸರಣಿಯನ್ನ ಸೂರ್ಯಕುಮಾರ್ ಮುನ್ನಡೆಸಲಿದ್ದಾರೆ.