Team India: 23 ವರ್ಷ, ಸತತ 10 ಸರಣಿ ಜಯ! ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದು ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ | India Equals South Africa’s Record: 10 Consecutive Test Series Wins Against West Indies | ಕ್ರೀಡೆ

Team India: 23 ವರ್ಷ, ಸತತ 10 ಸರಣಿ ಜಯ! ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದು ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ | India Equals South Africa’s Record: 10 Consecutive Test Series Wins Against West Indies | ಕ್ರೀಡೆ
ಪಂದ್ಯದ ಹೈಲೈಟ್ಸ್

ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದು, ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಸತತ ಸರಣಿ ಗೆಲುವಿನ ದಾಖಲೆಯಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ವಿಶ್ವದಾಖಲೆಯನ್ನ ಹಂಚಿಕೊಂಡಿದೆ. ಈ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವು 121 ರನ್‌ಗಳ ಗುರಿಯನ್ನು 35.2 ಓವರ್‌ಗಳಲ್ಲಿ 3 ವಿಕೆಟ್‌ಗೆ ಚೇಸ್ ಮಾಡಿತು. ಕೆ.ಎಲ್. ರಾಹುಲ್ ಅವರ ಅಜೇಯ ಅರ್ಧಶತಕ (58* ರನ್‌ಗಳು) ಈ ಗೆಲುವಿನಲ್ಲಿ ನಿರ್ಣಾಯಕವಾಯಿತು.

ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸುವ ಮೂಲಕ ಶುಭ್​ಮನ್ ಗಿಲ್ ನೇತೃತ್ವದಲ್ಲಿ ಭಾರತ ತಂಡ ಮೊದಲ ಟೆಸ್ಟ್ ಸರಣಿ ಗೆದ್ದಿದೆ. ಈ ಸರಣಿಯಲ್ಲಿ ಭಾರತದ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿತು. 2ನೇ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಭಾರತ 518 ರನ್‌ಗಳಿಗೆ ಡಿಕ್ಲೇರ್ ಮಾಡಿತು, ಯಶಸ್ವಿ ಜೈಸ್ವಾಲ್ (175) ಮತ್ತು ಗಿಲ್ (129) ಶತಕಗಳೊಂದಿಗೆ ಮಿಂಚಿದರೆ. ಕುಲದೀಪ್ ಯಾದವ್ 8 ವಿಕೆಟ್, ಜಡೇಜಾ 4, ಬುಮ್ರಾ 4, ಸಿರಾಜ್ 3 ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಮಿಂಚಿದರು.

ಈ ಗೆಲುವಿನೊಂದಿಗೆ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 2000ರಿಂದ 2025ರವರೆಗೆ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದಿದೆ, ಇದು ದಕ್ಷಿಣ ಆಫ್ರಿಕಾದ 1998-2024ರ ಅವಧಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 10 ಸರಣಿ ಗೆಲುವಿನ ದಾಖಲೆಗೆ ಸಮನಾಗಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವೂ ಇದೆ. ಕಾಂಗರೂ ಪಡೆ ವೆಸ್ಟ್ ಇಂಡೀಸ್ ವಿರುದ್ಧ 2000-2022ರ ಅವಧಿಯಲ್ಲಿ 9 ಸರಣಿ ಗೆದ್ದಿದೆ. 4ನೇ ಸ್ಥಾನದಲ್ಲೂ ಆಸ್ಟ್ರೇಲಿಯಾ ತಂಡವೇ ಇದ್ದು, ಇಂಗ್ಲೆಂಡ್ ವಿರುದ್ಧ 1989-2003ರ ಅವಧಿಯಲ್ಲಿ ಸತತ 8 ಸರಣಿಗಳಗಳನ್ನ ಗೆದ್ದ ದಾಖಲೆ ಹೊಂದಿದೆ. ಶ್ರೀಲಂಕಾ 5ನೇ ಸ್ಥಾನದಲ್ಲಿದ್ದು, ಜಿಂಬಾಬ್ವೆ ವಿರುದ್ಧ , 1996-2020ರ ಸಮಯದಲ್ಲಿ 8 ಸರಣಿಗಳನ್ನ ಗೆದ್ದಿದೆ.

23 ವರ್ಷಗಳಿಂದ ಸೋಲೇ ಇಲ್ಲ

ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 2002ರಿಂದ ಇಲ್ಲಿಯವರೆಗೆ 27 ಪಂದ್ಯಗಳಿಂದ (17 ಜಯ, 10 ಡ್ರಾ) ಅಜೇಯವಾಗಿದೆ. ಇಂಗ್ಲೆಂಡ್‌ ನ್ಯೂಜಿಲ್ಯಾಂಡ್ ವಿರುದ್ಧ ಸೋಲಿಲ್ಲದೆ 47 ಪಂದ್ಯಗಳನ್ನಾಡಿರುವುದು ವಿಶ್ವದಾಖಲೆಯಾಗಿದೆ. 1930 ರಿಂದ-1975ರವರೆಗೆ ನ್ಯೂಜಿಲ್ಯಾಂಡ್ ಇಂಗ್ಲೆಂಡ್ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. ಭಾರತದ ವೆಸ್ಟ್ ಇಂಡೀಸ್ ವಿರುದ್ಧ 2002ರ ಮೇ ತಿಂಗಳಲ್ಲಿ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯ ಸೋತಿತ್ತು. ಆ ನಂತರ ಈ 27 ಪಂದ್ಯಗಳಲ್ಲಿ 17ರಲ್ಲಿ ಜಯ ಸಾಧಿಸಿದರೆ, 10 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

ಸೋಲಿಲ್ಲದೆ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆ

ಇಂಗ್ಲೆಂಡ್ vs ನ್ಯೂಜಿಲೆಂಡ್ – 47 ಪಂದ್ಯ- 1930-1975

ಇಂಗ್ಲೆಂಡ್ vs ಪಾಕಿಸ್ತಾನ- 30 ಪಂದ್ಯ-1961-1982

ವೆಸ್ಟ್ ಇಂಡೀಸ್ vs ಇಂಗ್ಲೆಂಡ್ -29 ಪಂದ್ಯ- 1976-1988

ಭಾರತ vs ವೆಸ್ಟ್ ಇಂಡೀಸ್ – 27 ಪಂದ್ಯ- 2002-2025

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ- 24 ಪಂದ್ಯ- 1911-1952

2002-03 >>>ಭಾರತದಲ್ಲಿ ನಡೆದ ಸರಣಿ >>> 2-0

2006 >>>ವೆಸ್ಟ್ ಇಂಡೀಸ್​ನಲ್ಲಿ ನಡೆದ ಸರಣಿ>>> 1-0,

2011 >>> ವೆಸ್ಟ್ ಇಂಡೀಸ್​ನಲ್ಲಿ ನಡೆದ ಸರಣಿ>>> 1-0

2011-12>>>ಭಾರತದಲ್ಲಿ ನಡೆದ ಸರಣಿ>>> 2-0 ,

2013-14>>>ಭಾರತದಲ್ಲಿ ನಡೆದ ಸರಣಿ>>> 2-0

2016>>>ವೆಸ್ಟ್ ಇಂಡೀಸ್​ನಲ್ಲಿ ನಡೆದ ಸರಣಿ>>> 2-0

2018-19>>>ಭಾರತದಲ್ಲಿ ನಡೆದ ಸರಣಿ>>> 2-0

2019>>>ವೆಸ್ಟ್ ಇಂಡೀಸ್​ನಲ್ಲಿ ನಡೆದ ಸರಣಿ>>> 2-0

2023>>>ವೆಸ್ಟ್ ಇಂಡೀಸ್​ನಲ್ಲಿಸ್ ನಡೆದ ಸರಣಿ>>> 1-0

2025>>>ಭಾರತದಲ್ಲಿ ನಡೆದ ಸರಣಿ>>> 2-0

ಈ ಗೆಲುವುಗಳು ಭಾರತದ ಸ್ಥಿರತೆ ಮತ್ತು ಆಧಿಪತ್ಯವನ್ನು ತೋರಿಸುತ್ತವೆ. ವೆಸ್ಟ್ ಇಂಡೀಸ್ ತಂಡವು ಭಾರತದಲ್ಲಿ ತನ್ನ ಕೊನೆಯ 6 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಈ ಬೇಡದ ದಾಖಲೆಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, ಭಾರತದ ನೆಲದಲ್ಲಿ ಸತತ 7 ಪಂದ್ಯಗಳನ್ನ ಸೋತ ದಾಖಲೆ ಹೊಂದಿದೆ.