Temba Bavuma: ಟೆಂಬಾ ಪದದ ಅರ್ಥವೇನು? ಸ್ವತಃ ಸೌತ್ ಆಫ್ರಿಕಾ ನಾಯಕ ‘ಬವುಮಾ’ ಕೊಟ್ಟ ಉತ್ತರ ಇಲ್ಲಿದೆ ನೋಡಿ

Temba Bavuma: ಟೆಂಬಾ ಪದದ ಅರ್ಥವೇನು? ಸ್ವತಃ ಸೌತ್ ಆಫ್ರಿಕಾ ನಾಯಕ ‘ಬವುಮಾ’ ಕೊಟ್ಟ ಉತ್ತರ ಇಲ್ಲಿದೆ ನೋಡಿ

ಸದ್ಯ, ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳ ಕಣ್ಣು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮೇಲೆ ಬಿದ್ದಿದೆ. ಮಾತ್ರವಲ್ಲ, ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಕೂಡ ಸದ್ಯ ಈ ಟೆಸ್ಟ್‌ನ ಸೆಂಟರ್ ಆಫ್ ಆಟ್ರಾಕ್ಷನ್ ಆಗಿದ್ದಾರೆ. ಸೌತ್ ಆಫ್ರಿಕಾ ತಂಡವನ್ನು ಅನೇಕ ದಿಗ್ಗಜರು ಮುನ್ನಡೆಸಿದ್ದಾರೆ. ಆದ್ರೆ, ಆ ತಂಡಕ್ಕೆ ಚೋಕರ್ಸ್ ಪಟ್ಟ ಮಾತ್ರ ತಪ್ಪಿರಲಿಲ್ಲ. ಆದ್ರೆ, ಈ ಬಾರಿ ಡಬ್ಲ್ಯೂಟಿಸಿ ಫೈನಲ್‌ ತಲುಪಿರುವ ಹರಿಣಗಳು ಪಂದ್ಯ ಗೆಲ್ಲುವುದು ಬಹುತೇಕ ಖಚಿತವಾಗಿದೆ.