Temple: ಕೇರಳದ ಪುರಾತನ ಮಧೂರು ಮಹಾಗಣಪತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ! | Temple: Brahmakashotsava celebrations at the ancient Madhur Mahaganapati temple in Kerala!

Temple: ಕೇರಳದ ಪುರಾತನ ಮಧೂರು ಮಹಾಗಣಪತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ! | Temple: Brahmakashotsava celebrations at the ancient Madhur Mahaganapati temple in Kerala!

Last Updated:

ಪ್ರಧಾನ ಗರ್ಭಗುಡಿಯಲ್ಲಿ ಮಹಾಶಿವನಿಗೆ ಆರಾಧನೆ ನಡೆದರೆ, ಬಲಭಾಗದಲ್ಲಿ ಮಹಾಗಣಪತಿಗೆ ಆರಾಧನೆ ನಡೆಯುತ್ತದೆ. ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ಇಡೀ ಕಾಸರಗೋಡಿನ ಭಕ್ತರು ಮಧೂರು ಕ್ಷೇತ್ರದತ್ತ ಆಗಮಿಸುತ್ತಿದ್ದು, ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಮಧೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಕೇರಳ ರಾಜ್ಯದ ಪುರಾಣ ಪ್ರಸಿದ್ಧ ಕಾಸರಗೋಡು ಜಿಲ್ಲೆಯ(Kasaragoud District) ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ(Brahma Kalashotsava) ಸಂಭ್ರಮ ಮನೆ ಮಾಡಿದೆ. ಮಾರ್ಚ್ 27 ರಿಂದ ಏಪ್ರಿಲ್ 7 ರವರೆಗೆ ಈ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮತ್ತು ಮೂಡಪ್ಪ ಸೇವೆ ನೆರವೇರಲಿದ್ದು, ಭಾರೀ ಸಂಖ್ಯೆಯ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುವ ಮೂಲಕ ದೇವರಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಕೇರಳದ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಮಧೂರು ಕ್ಷೇತ್ರವೂ ಒಂದಾಗಿದ್ದು, ಹಲವು ವರ್ಷಗಳ ಬಳಿಕ ಈ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. 2009 ರಲ್ಲಿ ಅನುಜ್ಞಾ ಕಲಶದ ಮೂಲಕ ದೇವಸ್ಥಾನದ ನವೀಕರಣ ಮತ್ತು ಬ್ರಹ್ಮಕಲಶೋತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಹಣಕಾಸಿನ ತೊಂದರೆ‌ ಹಾಗು ಇತರ ಕೆಲವು ಸಮಸ್ಯೆಗಳಿಂದಾಗಿ ಬ್ರಹ್ಮಕಲಶೋತ್ಸವ ನಡೆಸುವ ಯೋಜನೆಗಳು ಸಾಕಷ್ಟು ಸಮಯ‌ ತೆಗೆದುಕೊಂಡಿದೆ.

ಇದನ್ನೂ ಓದಿ: Bengaluru: RO ಪ್ಲಾಂಟ್ ನೀರು ಕುಡಿಯುತ್ತೀರಾ? ಹಾಗಾದೆ ಹುಷಾರ್! ವರದಿಯಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ

ಇದೀಗ 2025 ರಲ್ಲಿ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವ ಯೋಗ ಕೂಡಿಬಂದಿದ್ದು, ಅತ್ಯಂತ ಅದ್ದೂರಿಯಾಗಿ ಈ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರು ನಿರ್ಧರಿಸಿದ್ದಾರೆ. ಸುಮಾರು ಇಪ್ಪತ್ತು ಕಿಲೋಮೀಟರ್ ದೂರಕ್ಕೂ ಬಂಟಿಗ್ಸ್ ಮತ್ತು ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದ್ದು, ಇಡೀ ಮಧೂರು ಪ್ರದೇಶವೇ ಬಗೆಬಗೆಯ ಬಣ್ಣದ ದೀಪದ ಅಲಂಕಾರದಿಂದ ಜಗಮಗಿಸುತ್ತಿದೆ.

ಗಜಪೃಷ್ಠಾಕೃತಿಯ ಈ ದೇವಸ್ಥಾನವನ್ನು ಪುರಾತನ ಶೈಲಿಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ನವೀಕರಣ ಮಾಡಲಾಗಿದೆ. ಪ್ರಧಾನ ಗರ್ಭಗುಡಿಯಲ್ಲಿ ಮಹಾಶಿವನಿಗೆ ಆರಾಧನೆ ನಡೆದರೆ, ಬಲಭಾಗದಲ್ಲಿ ಮಹಾಗಣಪತಿಗೆ ಆರಾಧನೆ ನಡೆಯುತ್ತದೆ. ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ಇಡೀ ಕಾಸರಗೋಡಿನ ಭಕ್ತರು ಮಧೂರು ಕ್ಷೇತ್ರದತ್ತ ಆಗಮಿಸುತ್ತಿದ್ದು, ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಮಧೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

ಕ್ಷೇತ್ರಕ್ಕೆ ಬರುವ ಭಕ್ತಾಧಿಗಳೆಲ್ಲಾ ಅನ್ನದಾನ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇದಕ್ಕಾಗಿಯೇ ಸಾವಿರಾರು ಸಂಖ್ಯೆಯ ಸ್ವಯಂ ಸೇವಕರನ್ನೂ ನಿಯೋಜಿಸಲಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಕ್ಷೇತ್ರದ ಆವರಣದಲ್ಲಿ ವಾಹನ ದಟ್ಟಣೆಯಾಗದಂತೆಯೂ ಕ್ರಮ ವಹಿಸಲಾಗಿದೆ.