Trekking Spot: ಪ್ರವಾಸಿಗರೇ ಇಲ್ನೋಡಿ, ನಿಮಗೆ ಈ ಪ್ಲೇಸ್ ಇಷ್ಟ ಆಗುತ್ತೆ! | Kumara Parvatha trekking | ದಕ್ಷಿಣ ಕನ್ನಡ

Trekking Spot: ಪ್ರವಾಸಿಗರೇ ಇಲ್ನೋಡಿ, ನಿಮಗೆ ಈ ಪ್ಲೇಸ್ ಇಷ್ಟ ಆಗುತ್ತೆ! | Kumara Parvatha trekking | ದಕ್ಷಿಣ ಕನ್ನಡ

Last Updated:

ಕುಮಾರ ಪರ್ವತ ಚಾರಣ ದಕ್ಷಿಣ ಕನ್ನಡದಲ್ಲಿ ಆರಂಭವಾಗಿದೆ. ಪುಷ್ಪಗಿರಿ ವನ್ಯಜೀವಿ ವಲಯದಿಂದ ಹೂಗುಚ್ಚ ನೀಡಿ ಶುಭಾಶಯ, ವೆಬ್ಸೈಟ್ ಮೂಲಕ ನೋಂದಣಿ ಅಗತ್ಯ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಟ್ರೆಕ್ಕಿಂಗ್ (Trekking) ಪ್ರಿಯರಿಗೆ ಗುಡ್‍ನ್ಯೂಸ್. ಕಷ್ಟದ ಚಾರಣ ತಾಣ ತೆರೆದಿದೆ. ಹೌದು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಚಾರಣ ತಾಣ ಕುಮಾರ ಪರ್ವತ (Kumara Parvatha) ಚಾರಣ ಶುಕ್ರವಾರದಿಂದ ಆರಂಭಗೊಂಡಿದ್ದು, ಕಳೆದ ವರ್ಷದ ನಿಯಮಾವಳಿಗಳಂತೆ ಚಾರಣ ಕೈಗೊಳ್ಳಬಹುದಾಗಿದೆ. ಕುಮಾರ ಪರ್ವತ ಚಾರಣ ಕಳೆದ ಬೇಸಿಗೆ (Summer) ಆರಂಭದಲ್ಲಿ ತಾತ್ಕಾಲಿಕ ಸ್ಥಗಿತ ಮಾಡಲಾಗಿತ್ತು. ಇದೀಗ ಈ ವರ್ಷದ ಚಾರಣ ಶುಕ್ರವಾರದಿಂದ ಆರಂಭಗೊಂಡಿದೆ. ಅದರಂತೆ ಮೊದಲ ದಿನ ಸುಮಾರು 20 ರಷ್ಟು ಚಾರಣಿಗರು ಕುಮಾರ ಪರ್ವತ ಚಾರಣ ಕೈಗೊಂಡರು.

ಕುಮಾರ ಪರ್ವತ ಚಾರಣ ಆರಂಭ

ಸುಬ್ರಹ್ಮಣ್ಯದ ದೇವರಗದ್ದೆ ಮೂಲಕ ಚಾರಣ ಆರಂಭಿಸಿದ ಚಾರಣಿಗರಿಗೆ, ಪುಷ್ಪಗಿರಿ ವನ್ಯಜೀವಿ ವಲಯದ ವತಿಯಿಂದ ಹೂಗುಚ್ಚ ನೀಡಿ ಶುಭಾಶಯ ಕೋರಲಾಯಿತು. ಹಾಗೂ ಚಾರಣದ ಸಮಯದಲ್ಲಿ ಜಾಗೃತೆಯಿಂದ ಚಾರಣ ಮಾಡಿ ಪ್ಲಾಸ್ಟಿಕ್ ಮುಕ್ತ ಕುಮಾರ ಪರ್ವತಕ್ಕೆ ಸಹಕರಿಸುವಂತೆ ಅಧಿಕಾರಿಗಳಿಂದ ಸಿಬ್ಬಂದಿ ಮಾರ್ಗದರ್ಶನವನ್ನೂ ನೀಡಲಾಗಿದೆ.

ಮೊದಲು ನೋಂದಣಿ ಮಾಡಿಕೊಳ್ಳಿ

ಕುಮಾರಪರ್ವತ ಚಾರಣ ಕೈಗೊಳ್ಳಲು ಅರಣ್ಯ ವಿಹಾರ ಅರಣ್ಯ ಇಲಾಖೆಯ ವೆಬ್ಸೈಟ್ ಮೂಲಕ ನೋಂದಾಣಿ ಮಾಡಿ ಚಾರಣ ಕೈಗೊಳ್ಳಬೇಕಾಗಿದ್ದು, ನಿಗಧಿತ ಮಿತಿ ಹಾಗೂ ಮಾರ್ಗಸೂಚಿಗಳ ಅನ್ವಯ ಪರಿಸರ ಸ್ನೇಹಿ ಚಾರಣ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಈ ವರ್ಷ ಎಂದಿಗಿಂತ 10 ದಿನ ಮೊದಲು ಚಾರಣ ಆರಂಭಗೊಂಡಿದೆ.