Last Updated:
ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಈ ಚಿತ್ರದಲ್ಲಿ AI ನಿಂದ ನಿರ್ಮಿತ ಹಾಡನ್ನೂ ಜೋಡಿಸಲಾಗಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ರೇಜ್ನು ಜಯಪ್ರಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ದಕ್ಷಿಣ ಕನ್ನಡ: ತುಳು ಚಿತ್ರರಂಗಕ್ಕೆ(Tulu Cinema) ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಸಿನಿಮಾಗಳ(New Films) ಎಂಟ್ರಿಯಾಗುತ್ತಿದ್ದು, ಈ ಸಾಲಿಗೆ ಇದೀಗ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ವಿಶೇಷವೆಂದರೆ ಈ ಸಿನಿಮಾ ನಿರ್ಮಾಣ ತಂಡದಲ್ಲಿರುವ ಶೇಕಡಾ 90 ರಷ್ಟು ಜನ ಮಾತ್ರ ಕೇರಳಿಯರು(Keralians). ಹೌದು ಮಹಿಳಾ ಪ್ರಧಾನ ಕಥೆಯಾಧಾರಿತ ‘ಮೀರಾ’ (Meera) ಎನ್ನುವ ತೆರೆ ಏರಲು ಸಿದ್ಧಗೊಂಡಿದ್ದು, ಖ್ಯಾತ ಗಾಯಕರು ಈ ಚಿತ್ರದ ಹಾಡು ಹಾಡಿದ್ದು, ತುಳು ಸಿನಿಮಾ ರಂಗದಲ್ಲಿ ಹೊಸ ಪ್ರಯೋಗಕ್ಕೆ ಈ ಚಿತ್ರ ನಾಂದಿ ಹಾಡಿದೆ.
ಮೂಲತಃ ಕೇರಳದವರಾಗಿದ್ದು, ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ಲಂಚುಲಾಲ್.ಕೆ.ಎಸ್ ಮೀರಾ ಚಿತ್ರದ ನಿರ್ಮಾಪಕರಾಗಿದ್ದು, ಕೇರಳ ಮೂಲದ ಅಶ್ವತ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಈ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಚಿತ್ರ ಪ್ರೇಕ್ಷಕರಿಂದ ಚಿತ್ರದ ಪರವಾಗಿ ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ. ಪುಷ್ಪ 2 ಚಿತ್ರದಲ್ಲಿ ಅಸಿಸ್ಟೆಂಟ್ ಕ್ಯಾಮಾರಾಮ್ಯಾನ್ ಆಗಿದ್ದ ಅಜಯ್ ಈ ಚಿತ್ರದ ಕ್ಯಾಮೆರಾ ವರ್ಕ್ ಮಾಡಿದ್ದು, ಸಿನಿಮಾ ದೃಶ್ಯಗಳ ಕಲರಿಂಗ್ ಅನ್ನು ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಸಿನಿಮಾಗಳಿಗೆ ಕಲರಿಂಗ್ ಮಾಡುವ ರಿಜು ಈ ಸಿನಿಮಾದಲ್ಲೂ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.
ಇದನ್ನೂ ಓದಿ: Dakshina Kannada: ಪೊಳಲಿ ರಾಜರಾಜೇಶ್ವರಿ ಜಾತ್ರೋತ್ಸವದಲ್ಲಿ ಚೆಂಡಾಟದ ವೈಭವ!
ಖ್ಯಾತ ಗಾಯಕರಾದ ಮಧು ಬಾಲಕೃಷ್ಣನ್ ಈ ಚಿತ್ರಕ್ಕೆ ಸ್ವರ ನೀಡಿದ್ದು, ಅವರು ಹಾಡಿದ ಒಂದು ಹಾಡು ಭಾರೀ ಜನಪ್ರಶಂಸೆ ಪಡೆದಿದೆ. ಅಲ್ಲದೇ ಕನ್ನಡ ರಾಪ್ ಗಾಯಕ ಆಲ್ ಒಕೆ ಈ ಸಿನಿಮಾದಲ್ಲಿ ಹಾಡಿದ್ದಾರೆ. ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಈ ಚಿತ್ರದಲ್ಲಿ AI ನಿಂದ ನಿರ್ಮಿತ ಹಾಡನ್ನೂ ಜೋಡಿಸಲಾಗಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ರೇಜ್ನು ಜಯಪ್ರಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ತುಳು ಚಿತ್ರವೆಂದರೆ ಕೇವಲ ಕಾಮಿಡಿ ಎನ್ನುವ ಮನಸ್ಥಿತಿ ಹೊಂದಿದ ಜನರಿಗೆ ಈ ಚಿತ್ರ ಹೊಸ ಅನುಭವನ್ನು ನೀಡಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅಶ್ವತ್. ಅಶ್ವತ್ ಈ ಹಿಂದೆ ಮಾಡಿದ್ದ ಶಾರ್ಟ್ ಮೂವಿಯ ಮುಂದುವರಿದ ಭಾಗವಾಗಿ ಈ ಚಿತ್ರ ಮೂಡಿಬಂದಿದೆ. ತುಳು ಚಿತ್ರರಂಗದ ಮೇರು ಪ್ರತಿಭೆಗಳಾದ ಅರವಿಂದ ಬೋಳಾರ್, ದೀಪಕ್ ರೈ ಪಾಣಾಜೆ, ಜೆ.ಪಿ.ತೂಮಿನಾಡ್ ಸೇರಿದಂತೆ ಕಿರಿಯ ಕಲಾವಿದರು ಈ ಚಿತ್ರದಲ್ಲಿದ್ದಾರೆ.
ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಇತಿತಾ ಶೆಟ್ಟಿ, ಲಕ್ಷ್ಯಾ ಗಮನಸೆಳೆಯಲಿದ್ದು, ಸಮಾಜದಲ್ಲಿ ಮಹಿಳೆ ತನ್ನ ಪ್ರಯತ್ನ, ಸಾಮರ್ಥ್ಯದಿಂದ ಸಾಧನೆ ತೋರುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಚಿತ್ರೀಕರಣವನ್ನು ಕಾಸರಗೋಡು ಮತ್ತು ದಕ್ಷಿಣಕನ್ನಡ ಜಿಲ್ಲೆಯ ಕೆಲವು ಭಾಗದಲ್ಲಿ ಮಾಡಲಾಗಿದೆ.
Dakshina Kannada,Karnataka
April 10, 2025 5:58 PM IST