Twin Mania: ವಾಮಂಜೂರಲ್ಲಿ ಅವಳಿಗಳ ಹಾವಳಿ, ಫುಲ್‌ ಕನ್ಫ್ಯೂಶನ್‌ ಕಣ್ರೀ! ಇದರಲ್ಲೂ ಹೆಣ್ಮಕ್ಳದ್ದೇ ಪ್ರಾಬಲ್ಯ | Seven pairs of twins at Thiruvailu school rare scene revealed | ದಕ್ಷಿಣ ಕನ್ನಡ

Twin Mania: ವಾಮಂಜೂರಲ್ಲಿ ಅವಳಿಗಳ ಹಾವಳಿ, ಫುಲ್‌ ಕನ್ಫ್ಯೂಶನ್‌ ಕಣ್ರೀ! ಇದರಲ್ಲೂ ಹೆಣ್ಮಕ್ಳದ್ದೇ ಪ್ರಾಬಲ್ಯ | Seven pairs of twins at Thiruvailu school rare scene revealed | ದಕ್ಷಿಣ ಕನ್ನಡ

Last Updated:

ತಿರುವೈಲು ಸರಕಾರಿ ಶಾಲೆಯಲ್ಲಿ 7 ಜತೆ ಅವಳಿ-ಜವಳಿ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ, ಇವರಲ್ಲಿ 10 ಹುಡುಗಿಯರು, 4 ಹುಡುಗರು, ತುಳುನಾಡಿನ ಅವಳಿ ಪರಂಪರೆಯ ಅಪರೂಪದ ಉದಾಹರಣೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಇದು ಪ್ರಕೃತಿಯ (Nature) ವೈಶಿಷ್ಟ್ಯವೋ, ವಿಸ್ಮಯವೋ ಗೊತ್ತಿಲ್ಲ! ತುಳುನಾಡು-ಕೇರಳದ ಕೆಲವು ಕಡೆ ಇಂತಹದೊಂದು ಅದ್ಭುತ (Amaze) ಆಗಾಗ ನಡೆಯುತ್ತದೆ. ಇದಕ್ಕೆ ವೀರ ಪರಂಪರೆಯ ಉದಾಹರಣೆಯೂ ತಳಕು ಹಾಕಿಕೊಂಡಿದೆ. ನೋಡುಗರನ್ನು (People) ಚಕಿತರಾಗಿಸುವ ಅದ್ಭುತ ಏನು ಗೊತ್ತಾ?

7 ಜೊತೆ ಅವಳಿಗಳು ಕಲಿಯುತ್ತಿರುವ ಶಾಲೆ ಇದು!

ಕೆಲವು ಶಾಲೆಯಲ್ಲಿ 2-3 ಜತೆ ಅವಳಿ-ಜವಳಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರಬಹುದು. ಆದರೆ ವಾಮಂಜೂರಿನ ತಿರುವೈಲಿನ ಸರಕಾರಿ ಶಾಲೆಯಲ್ಲಿ ಬರೋಬ್ಬರಿ 7 ಜತೆ ಅವಳಿ ಜವಳಿ ಮಕ್ಕಳಿದ್ದಾರೆ! ದ.ಕ. ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಿರುವೈಲಿನಲ್ಲಿ ಅಪರೂಪ ಎಂಬಂತೆ 7 ಜತೆ ಅವಳಿ ಜವಳಿಗಳು. ನಗರ ವ್ಯಾಪ್ತಿಯಲ್ಲಿರುವ ಶಾಲೆಗಳ ಪೈಕಿ ಇದು ಅಪರೂಪದ ಸನ್ನಿವೇಶ.

ಅವಳಿಗಳ ಹೆಸರೂ ಕೂಡ ಚಂದ

ಝುವಾ – ಝಿಯಾಮ್, ದಿಶಾ – ದಿತ್ಯ, ಸಾಕ್ಷಿ – ರಾಜೇಶ್ವರಿ, ಗಂಗಾ – ಯಮುನಾ, ನಿಧಿ – ನಿಶಾ, ಪ್ರಣಮ್ – ಪ್ರಥಮ್, ನಿಶಾನ್–ನಿಧಿಶಾ ಎಂಬ ಅವಳಿ-ಜವಳಿ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಇದರಲ್ಲಿ 6 ಜತೆ ಅವಳಿಗಳು ಸ್ಥಳೀಯ ವ್ಯಾಪ್ತಿಯವರು. 1 ಜತೆ ಮಾತ್ರ ಬಳ್ಳಾರಿಯವರು.

ಇಲ್ಲೂ ಕೂಡ ಹೆಣ್ಮಕ್ಳದ್ದೇ ಪ್ರಾಬಲ್ಯ ಕಣ್ರೀ!

ವಿಶೇಷವೆಂದರೆ, 7 ಅವಳಿ ಜವಳಿಗಳ (14 ಮಂದಿ) ಪೈಕಿ 10 ಮಂದಿ ಹುಡುಗಿಯರು. ಉಳಿದ ನಾಲ್ವರು ಮಾತ್ರ ಹುಡುಗರು. 2 ಜತೆ ಅವಳಿ ಜವಳಿಗಳಲ್ಲಿ ಗಂಡು ಹಾಗೂ ಹೆಣ್ಣು ಹಾಗೂ ಉಳಿದ 4 ಜತೆ ಅವಳಿ ಜವಳಿ ಹೆಣ್ಣು ಮಕ್ಕಳು. 1 ಜತೆ ಅವಳಿ ಜತೆ ಹುಡುಗರು. ‘ಅಪರೂಪದ ಜೋಡಿಗಳು ನಮ್ಮ ಶಾಲೆಯಲ್ಲಿ ಇರುವುದು ನಮಗೆ ಹೆಮ್ಮೆ ಹಾಗೂ ಖುಷಿ. 14 ಮಂದಿಯೂ ಬಹಳ ಅನ್ಯೋನ್ಯವಾಗಿದ್ದಾರೆ. ಕಲಿಕೆಯಲ್ಲಿ ಉತ್ತಮವಾಗಿದ್ದಾರೆ. ಹಾಜರಾತಿ ಕರೆಯುವಾಗ ಅಥವಾ ಮಕ್ಕಳನ್ನು ಕರೆಯುವಾಗ ಕೆಲವೊಮ್ಮೆ ಅದಲು ಬದಲಾಗುತ್ತದೆ‘ ಎನ್ನುವುದು ಶಿಕ್ಷಕಿಯರ ಖುಷಿಯ ಮಾತು..

ಒಬ್ಬರು ತಪ್ಪು ಮಾಡಿದರೆ ಇನ್ನೊಬ್ಬರು ಪೆಟ್ಟು ತಿಂದಿದ್ದೂ ಇದೆ!

ಅವಳಿ ಜವಳಿ ಮಕ್ಕಳ ಪೈಕಿ ಯಾರಾದರೂ ಒಬ್ಬರು ತಪ್ಪು ಮಾಡಿದರೆ ಮತ್ತೊಬ್ಬರು ಪೆಟ್ಟು ತಿನ್ನುವ ಪ್ರಮೇಯವೂ ಅಧಿಕವಿರುತ್ತದೆ. ತಿರುವೈಲು ಶಾಲೆ ಹಲವು ವಿಚಾರದಲ್ಲಿ ಸಾಧನೆ ಮಾಡಿದೆ. ಇದೀಗ ಅಪರೂಪದ ಸನ್ನಿವೇಶವನ್ನು ಶಾಲೆಯಲ್ಲಿ ಕಾಣುತ್ತಿದ್ದೇವೆ. 7 ಜತೆ ಅವಳಿ-ಜವಳಿಗಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ತುಂಬ ಖುಷಿಯಿಂದ ಇದ್ದಾರೆ. ಶಾಲಾ ವಠಾರದಲ್ಲಿ ಅವರು ಓಡಾಡುವುದನ್ನು ನೋಡುವುದೇ ಚಂದ. ಹುಟ್ಟುಹಬ್ಬದ ದಿನ ಒಂದೇ ಕಲರ್ ನ ಬಟ್ಟೆ ಧರಿಸಿ ಬರುವುದೇ ಒಂದು ಅಪೂರ್ವ ಅನುಭವ.

ತುಳುನಾಡಿಗೆ ಅವಳಿ ಪರಂಪರೆಯೇ ಇದೆ