UP20 6,wd,4,4,4,4,6: ಒಂದೇ ಓವರ್​​ನಲ್ಲಿ 29 ರನ್​ ಬಿಟ್ಟುಕೊಟ್ಟ 10.75 ಕೋಟಿಯ RCB ಟಾಪ್ ಬೌಲರ್! | RCB’s Leaky Defense: Star Pacer Concedes 29 Runs in an Over, Sparks Concerns for IPL 2026 | ಕ್ರೀಡೆ

UP20 6,wd,4,4,4,4,6: ಒಂದೇ ಓವರ್​​ನಲ್ಲಿ 29 ರನ್​ ಬಿಟ್ಟುಕೊಟ್ಟ 10.75 ಕೋಟಿಯ RCB ಟಾಪ್ ಬೌಲರ್! | RCB’s Leaky Defense: Star Pacer Concedes 29 Runs in an Over, Sparks Concerns for IPL 2026 | ಕ್ರೀಡೆ

Last Updated:

ಮೊದಲ ಎಸೆತವನ್ನು ಸಿಕ್ಸರ್ ಆಗಿ ಪರಿವರ್ತಿಸಿದ ರಿತು, ನಂತರ ಸತತ ನಾಲ್ಕು ಬೌಂಡರಿ ಮತ್ತು ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ರಿತು 4 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದ  29 ರನ್‌ಗಳನ್ನು  ಸಿಡಿಸಿದರು.

ಭುವನೇಶ್ವರ್ ಕುಮಾರ್ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್

17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ (IPL) ಗೆದ್ದು ಇತಿಹಾಸ ಸೃಷ್ಟಿಸಿತ್ತು. ಆದರೆ ಮುಂಬರುವ ಐಪಿಎಲ್ ಋತುವಿಗೆ ಮುನ್ನ ಅನುಭವಿ ವೇಗಿ ಭುವನೇಶ್ವರ್ ಕುಮಾರ್ (Bhuvaneshwar Kumar) ಪ್ರದರ್ಶನ ಆರ್‌ಸಿಬಿಗೆ ದೊಡ್ಡ ತಲೆನೋವು ತಂದಿದೆ.ಕಳೆದ ಋತುವಿನಲ್ಲಿ ಆರ್‌ಸಿಬಿಯನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭುವನೇಶ್ವರ್, ಪ್ರಸ್ತುತ ನಡೆಯುತ್ತಿರುವ ಉತ್ತರ ಪ್ರದೇಶ ಟಿ20 ಲೀಗ್‌ನಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಲೀಗ್‌ನಲ್ಲಿ ಲಕ್ನೋ ಫಾಲ್ಕನ್ಸ್ ಪರ ಆಡುವ ಭುವನೇಶ್ವರ್, ಇಂದು (ಆಗಸ್ಟ್ 27) ಮೀರತ್ ಮಾವೆರಿಕ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ಓವರ್‌ನಲ್ಲಿ 29 ರನ್‌ಗಳನ್ನು ಬಿಟ್ಟುಕೊಟ್ಟಿದ್ದು, ಆರ್‌ಸಿಬಿ ಆಡಳಿತ ಮಂಡಳಿ ಮತ್ತು ಫ್ರಾಂಚೈಸಿ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ಆರ್​ಸಿಬಿಗೆ ಚಿಂತೆಯಾದ ಭುವಿ ಪ್ರದರ್ಶನ

ಮುಂಬರುವ ಋತುವಿನಲ್ಲಿಯೂ ಆರ್‌ಸಿಬಿ ಭುವನೇಶ್ವರ್ ಮೇಲೆ ಹೆಚ್ಚಿನ ಭರವಸೆ ಹೊಂದಿದೆ. ಈ ಸಂದರ್ಭದಲ್ಲಿ, ಅವರ ಇಂತಹ ಕಳಪೆ ಪ್ರದರ್ಶನ ಆರ್‌ಸಿಬಿ ಆಡಳಿತ ಮಂಡಳಿಯನ್ನ ಚಿಂತೆಗೀಡು ಮಾಡಿದೆ. ಭುವಿಯ ಕಳಪೆ ಪ್ರದರ್ಶನ ಈ ಒಂದು ಓವರ್‌ಗೆ ಸೀಮಿತವಾಗಿರಲಿಲ್ಲ. ಈ ಋತುವಿನಲ್ಲಿ ಅವರು ಆಡಿದ 5 ಪಂದ್ಯಗಳಲ್ಲಿಯೂ ಇದೇ ಆಗಿದೆ. 8 ಕ್ಕಿಂತ ಹೆಚ್ಚು ಎಕಾನಮಿಯೊಂದಿಗೆ, ಅವರು ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದರು.

ಎಲ್ಲಾ ಎಸೆತಗಳಲ್ಲೂ ಬೌಂಡರಿ

ಮೀರತ್ ವಿರುದ್ಧದ ಪಂದ್ಯದಲ್ಲಿ, ಭುವಿ ತಮ್ಮ ಮೊದಲ ಮೂರು ಓವರ್‌ಗಳನ್ನು ಉತ್ತಮವಾಗಿ ಬೌಲ್ ಮಾಡಿದ್ದ ಅವರು ಕೇವಲ 20 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ನಾಲ್ಕನೇ ಓವರ್‌ನಲ್ಲಿ ಭುವಿಯನ್ನು ಎದುರಾಳಿ ಬ್ಯಾಟ್ಸ್‌ಮನ್ ರಿತುರಾಜ್ ಶರ್ಮಾ ಎಲ್ಲಾ 6 ಎಸೆತಗಳಲ್ಲೂ ಬೌಂಡರಿ-ಸಿಕ್ಸರ್ ಬಾರಿಸಿ ಅಚ್ಚರಿ ಮೂಡಿಸಿದರು.

ಮೊದಲ ಎಸೆತವನ್ನು ಸಿಕ್ಸರ್ ಆಗಿ ಪರಿವರ್ತಿಸಿದ ರಿತು, ನಂತರ ಸತತ ನಾಲ್ಕು ಬೌಂಡರಿ ಮತ್ತು ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ರಿತು 4 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದ  29 ರನ್‌ಗಳನ್ನು  ಸಿಡಿಸಿದರು. ಒಟ್ಟಾರೆಯಾಗಿ, ಭುವಿ ಈ ಪಂದ್ಯದಲ್ಲಿ ತಮ್ಮ ನಾಲ್ಕು ಓವರ್‌ಗಳನ್ನು ಬೌಲ್ ಮಾಡಿ 49 ರನ್‌ಗಳನ್ನು ಬಿಟ್ಟುಕೊಟ್ಟರು.

ಪಂದ್ಯದ ಹೈಲೈಟ್ಸ್

ಭುವಿ ಮತ್ತು ಇತರ ಎಲ್ಲಾ ಲಕ್ನೋ ಬೌಲರ್‌ಗಳನ್ನು ಕೆಟ್ಟದಾಗಿ ದಂಡಿಸಿದ ಮೀರತ್ ಬ್ಯಾಟ್ಸ್‌ಮನ್‌ಗಳು ತಮ್ಮ ತಂಡಕ್ಕೆ ಬೃಹತ್ ಸ್ಕೋರ್ ಒದಗಿಸಿದರು. ಸ್ವಸ್ತಿಕ್ ಚಿಕಾರ (55), ರಿತುರಾಜ್ ಶರ್ಮಾ (ಔಟಾಗದೆ 74), ರಿಂಕು ಸಿಂಗ್ (57), ಮತ್ತು ರಿತಿಕ್ ವ್ಯಾಟ್ಸ್ (8 ಎಸೆತಗಳಲ್ಲಿ ಔಟಾಗದೆ 35) ಅಬ್ಬರಿಸಿದರು. ತಂಡವು ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 233 ರನ್ ಗಳಿಸಿತು.

ನಂತರ, ಬೃಹತ್ ಗುರಿಯನ್ನು ಬೆನ್ನಟ್ಟಿದ ಲಕ್ನೋ ತಂಡವು 18.2 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲೌಟ್ ಆಯಿತು. ಜೀಶನ್ ಅನ್ಸಾರಿ (4-0-23-3), ಯಶ್ ಗಾರ್ಗ್ (4-0-25-3), ಕಾರ್ತಿಕ್ ತ್ಯಾಗಿ (2.2-0-9-2), ಮತ್ತು ವಿಜಯ್ ಕುಮಾರ್ (3-0-20-2) ಲಕ್ನೋ ತಂಡವನ್ನು ಧೂಳಿಪಟ ಮಾಡಿದರು. ಲಕ್ನೋ ಇನ್ನಿಂಗ್ಸ್‌ನಲ್ಲಿ ಸಮೀರ್ ಚೌಧರಿ (46) ಗರಿಷ್ಠ ಸ್ಕೋರರ್ ಎನಿಸಿಕೊಂಡರು.