ಆರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಸಬಲೆಂಕಾ ಯಾವುದೇ ಪೈಪೋಟಿ ಇಲ್ಲದೆ ಎದುರಾಳಿ ಅನಿಸಿಮೋವಾ ಅವರನ್ನು ಆಘಾತಗೊಳಿಸಿದರು. ಈ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ನ ಫೈನಲ್ಗಳಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದ್ದ ಸಬಲೆಂಕಾ ವರ್ಷದ ಕೊನೆಯ ಗ್ರ್ಯಾನ್ ಸ್ಲ್ಯಾಮ್ ಗೆಲ್ಲುವ ಅವಕಾಶವನ್ನು ಪಡೆದಿದ್ದರು. ಈ ಅವಕಾಶವನ್ನು ಬಳಸಿಕೊಂಡು, ಸಬಲೆಂಕಾ ಅನಿಸಿಮೋವಾ ಅವರ ಕನಸನ್ನು ಭಗ್ನಗೊಳಿಸಿದರು.
ಅರಿನಾ ಸಬಲೆಂಕಾ ಮತ್ತು ಅನಿಸಿಮೋವಾ ಈ ಹಿಂದೆ 9 ಬಾರಿ ಮುಖಾಮುಖಿಯಾಗಿದ್ದಾರೆ. ವಿಂಬಲ್ಡನ್ ಸೆಮಿಫೈನಲ್ ಸೇರಿ ಅನಿಸಿಮೋವಾ 6 ಬಾರಿ ಗೆದ್ದಿದ್ದರು. ಅದರೂ ಸಬಲೆಂಕಾ ತನ್ನ ಅನುಭವವನ್ನು ಬಳಸಿಕೊಂಡು ಅನಿಸಿಮೋವಾಗೆ ಚೊಚ್ಚಲ ಗ್ರ್ಯಾನ್ಸ್ಲಾಮ್ ಗೆಲ್ಲುವ ಅವಾವನ್ನ ತಡೆದರು. ಅರಿನಾ ಸಬಲೆಂಕಾ ಗ್ರ್ಯಾನ್ ಸ್ಲ್ಯಾಮ್ ಫೈನಲ್ನಲ್ಲಿ ಆಡುತ್ತಿರುವುದು ಇದು 7 ನೇ ಬಾರಿ. ಇದರಲ್ಲಿ 4ರಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಈ ಪಂದ್ಯದಲ್ಲಿ ಇಬ್ಬರ ನಡುವಿನ ಹೋರಾಟ ರೋಚಕವಾಗಿತ್ತು. ಮೊದಲ ಸೆಟ್ಅನ್ನ 6-3ರಲ್ಲಿ ಸುಲಭಾಗಿ ಗೆದ್ದ ಸಬಲೆಂಕಾ, 2ನೇ ಟೆಸ್ಟ್ನಲ್ಲಿ ಅಮೆರಿಕಾ ಆಟಗಾರ್ತಿಯಿಂದ ಪ್ರತಿರೋಧ ಎದುರಿಸಿದರು. ಆದರೂ ಟೈ-ಬ್ರೇಕ್ನಲ್ಲಿ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಅರಿನಾ ಸಬಲೆಂಕಾ ಗೆಲುವು ಸಾಧಿಸಿದರು. ಟೈ-ಬ್ರೇಕರ್ನಲ್ಲಿ 7/3 ಅಂತರದಲ್ಲಿ ಗೆದ್ದರು, ಕೇವಲ 1 ಗಂಟೆ 34 ನಿಮಿಷಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡು ಚಾಂಪಿಯನ್ ಆದರು.
ಯುಎಸ್ ಓಪನ್ನಲ್ಲಿ ಅರಿಯಾನಾ ಸಬಲೆಂಕಾ ದಾಖಲೆಯನ್ನು ಸೃಷ್ಟಿಸಿದರು. 10 ವರ್ಷಗಳ ಬಳಿಕ ಸತತ ಎರಡು ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, ಸೆರೆನಾ ವಿಲಿಯಮ್ಸ್ 2012-2014ರ ನಡುವೆ ಸತತ 3 ಬಾರಿ ಈ ಸಾಧನೆಯನ್ನು ಸಾಧಿಸಿದರು. ಈ ಗೆಲುವಿನೊಂದಿಗೆ, ಅರಿನಾ ಸಬಲೆಂಕಾ ಮಹಿಳಾ ಟೆನಿಸ್ನಲ್ಲಿ ತನ್ನ ಅಗ್ರಸ್ಥಾನವನ್ನು ಬಲಪಡಿಸಿಕೊಂಡಿದ್ದಾರೆ.
2025 ರ ಯುಎಸ್ ಓಪನ್ನ ಒಟ್ಟು ಬಹುಮಾನದ ಹಣವು ಹಿಂದಿನ ದಾಖಲೆಗಳಾದ $90 ಮಿಲಿಯನ್ ಅನ್ನು ಬ್ರೇಕ್ ಮಾಡಿದೆ. ಇದು 2024 ಕ್ಕಿಂತ ಶೇಕಡಾ 20 ರಷ್ಟು ಹೆಚ್ಚಾಗಿದೆ. ಇದು ಯುಎಸ್ ಓಪನ್ ಇತಿಹಾಸದಲ್ಲಿ ಅತ್ಯಧಿಕ ಬಹುಮಾನದ ಹಣವಾಗಿದೆ. ಮಹಿಳಾ ಸಿಂಗಲ್ಸ್ ವಿಜೇತರಾಗಿ ಅರಿನಾ ಸಬಲೆಂಕಾ $5 ಮಿಲಿಯನ್ (ರೂ. 44 ಕೋಟಿ) ಗೆದ್ದಿದ್ದಾರೆ. ಫೈನಲ್ನಲ್ಲಿ ಸೋತ ಅಮಂಡಾ ಅನಿಸಿಮೋವಾ 2.5 ಮಿಲಿಯನ್ ಡಾಲರ್ ಪಡೆದರು. 2024 ಕ್ಕೆ ಹೋಲಿಸಿದರೆ ಸಿಂಗಲ್ಸ್ ವಿಜೇತ ಮತ್ತು ರನ್ನರ್ ಅಪ್ ಬಹುಮಾನದ ಮೊತ್ತವು ಶೇಕಡಾ 39 ರಷ್ಟು ಹೆಚ್ಚಾಗಿದೆ.
ಸಿಂಗಲ್ಸ್ ಪ್ರಶಸ್ತಿಯ ಹಣದ ವಿವರಗಳು (ಮಹಿಳೆಯರು ಮತ್ತು ಪುರುಷರು):
ಚಾಂಪಿಯನ್: $5,000,000 (ಸುಮಾರು 44 ಕೋಟಿ ರೂ)
ರನ್ನರ್ ಅಪ್: $2,500,000 (ಸುಮಾರು 22 ಕೋಟಿ ರೂ)
ಸೆಮಿಫೈನಲಿಸ್ಟ್ಗಳು: $1,260,000 (ಸುಮಾರು 11.10 ಕೋಟಿ ರೂ)
ಕ್ವಾರ್ಟರ್ಫೈನಲಿಸ್ಟ್ಗಳು: $660,000 (ಸುಮಾರು 5.81 ಕೋಟಿ ರೂ)
16 ರ ಸುತ್ತು: $400,000 (ಸುಮಾರು 3.52 ಕೋಟಿ ರೂ)
32 ರ ಸುತ್ತು: $237,000 (ಸುಮಾರು 2.08 ಕೋಟಿ ರೂ)
64 ರ ಸುತ್ತು: $154,000 (ಸುಮಾರು 1.35 ಕೋಟಿ ರೂ)
128 ರ ಸುತ್ತು: $110,000 (ಸುಮಾರು 96.98 ಲಕ್ಷ ರೂ)
ಅರ್ಹತಾ ಸುತ್ತು 3: $57,200(ಸುಮಾರು 50.43 ಲಕ್ಷ ರೂಪಾಯಿ)
ಅರ್ಹತಾ ಸುತ್ತು 2: $41,800( ಸುಮಾರು 36.85 ಲಕ್ಷ ರೂಪಾಯಿ)
ಅರ್ಹತಾ ಸುತ್ತು 1: $27,500(ಸುಮಾರು 24.24 ಲಕ್ಷ ರೂಪಾಯಿ)
ಡಬಲ್ಸ್ (ಪುರುಷರು, ಮಹಿಳೆಯರು) ಹಾಗೂ ಮಿಶ್ರ ಡಬಲ್ಸ್ ವಿಜೇತರು ತಲಾ $1 ಮಿಲಿಯನ್ (8.7 ಕೋಟಿ) ಪಡೆಯಲಿದ್ದಾರೆ.
September 07, 2025 6:06 PM IST
US Open 2025: ಟಿ20 ವಿಶ್ವಕಪ್, ಐಪಿಎಲ್ ಬಹುಮಾನ ಮೊತ್ತಕ್ಕಿಂತಲೂ ಡಬಲ್!ಯುಎಸ್ ಓಪನ್ ಗೆದ್ದ ಸಬಲೆಂಕಾಗೆ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ?