ಎರಡನೇ ಯೂತ್ ODIಯಲ್ಲಿ (ಇಯನ್ ಹೀಲಿ ಓವಲ್ನಲ್ಲಿ ನಡೆದ ಪಂದ್ಯ), ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದರು. ನಾಯಕ ಆಯುಷ್ ಮ್ಹಾತ್ರೆ ಎರಡು ಎಸೆತಗಳಲ್ಲಿ ಡಕ್ ಔಟ್ ಆದರು. ಸೂರ್ಯವಂಶಿ ಹಾಗೂ ವಿಹಾನ್ ಮೆಲ್ಹೋತ್ರ ಎರಡನೇ ವಿಕೆಟ್ ಜೊತೆಯಾಟದಲ್ಲಿ 117 ರನ್ಗಳಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಸೂರ್ಯವಂಶಿ 68 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ಗಳ ಸಹಿತ 70 ರನ್ ಕಲೆಯಾಕಿದರು. ಶತಕದತ್ತ ಮುಖ ಮಾಡಿದ್ದ ಸೂರ್ಯವಂಶಿ ಆಸ್ಟ್ರೇಲಿಯಾ ನಾಯಕ ಯಶ್ ದೇಶ್ಮುಖ್ರ ಬೌಲಿಂಗ್ನಲ್ಲಿ ಅರ್ಯನ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್ನಿಂದ ನಿರ್ಗಮಿಸಿದರು.
ಮೊದಲ ODIಯಲ್ಲಿ ಸೂರ್ಯವಂಶಿ 22 ಎಸೆತಗಳಲ್ಲಿ 38 ರನ್ ಸಿಡಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ತಮ್ಮ ಶಕ್ತಿಯನ್ನು ತೋರಿಸಿ ಕಿರಿಯರ ಏಕದಿನ ಪಂದ್ಯದಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಈ ಪಂದ್ಯಕ್ಕೂ ಮುನ್ನ 35 ಸಿಕ್ಸರ್ ಸಿಡಿಸಿದ್ದ ಸೂರ್ಯವಂಶಿ ಇದೀಗ 41 ಸಿಕ್ಸರ್ಗಳೊಂದಿಗೆ ಅಂಡರ್ ಕ್ರಿಕೆಟ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಯೂತ್ ODIಗಳಲ್ಲಿ ಸೂರ್ಯವಂಶಿ 540 ರನ್ ಗಳಿಸಿದ್ದಾರೆ, ಅದರಲ್ಲಿ 26% ಬೌಂಡರಿ (ಫೋರ್ ಮತ್ತು ಸಿಕ್ಸರ್)ಗಳಿಂದ ಬಂದಿದೆ. ಯೂತ್ ಏಕದಿನದಲ್ಲಿ ಸೂರ್ಯವಂಶಿ ಹೊರೆತುಪಡಿಸಿದರೆ, ಭಾರತದವರೇ ಆದ ಉನ್ಮುಖ ಚಾಂದ್ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ವೈಭವ್ ಸೂರ್ಯವಂಶಿ- 10 ಪಂದ್ಯಗಳಲ್ಲಿ 41 ಸಿಕ್ಸರ್
ಉನ್ಮುಖ ಚಾಂದ್-21 ಪಂದ್ಯಗಳಲ್ಲಿ 38 ಸಿಕ್ಸರ್
ಜವಾದ್ ಅಬ್ರಾರ್-24 ಪಂದ್ಯಗಳಲ್ಲಿ 35 ಸಿಕ್ಸರ್
ಶಹ್ಜೈಬ್ ಖಾನ್- 24 ಪಂದ್ಯಗಳಲ್ಲಿ 31 ಸಿಕ್ಸರ್
ತೌಹಿದ್ ಹೃದೋಯ್- 47 ಪಂದ್ಯಗಳಲ್ಲಿ 30 ಸಿಕ್ಸರ್
ಯಶಸ್ವಿ ಜೈಸ್ವಾಲ್- 27 ಪಂದ್ಯಗಳಲ್ಲಿ 30 ಸಿಕ್ಸರ್
ಬಿಹಾರದ ಸಮಸ್ತೀಪುರ ಈ ಎಡಗೈ ಬ್ಯಾಟ್ಸ್ಮನ್, ಕ್ರಿಕೆಟ್ನಲ್ಲಿ ರಾಜನಂತೆ ಮಿಂಚುತ್ತಿದ್ದಾರೆ. 2023-24 ರಣಜಿ ಸೀಜನ್ನಲ್ಲಿ ಮುಂಬೈ ವಿರುದ್ಧ 12 ವರ್ಷಗಳು 284 ದಿನಗಳಲ್ಲಿ ಡೆಬ್ಯೂ ಮಾಡಿದ್ದರು. ರಣಜಿ ಇತಿಹಾಸದ ಪದಾರ್ಪಣೆ ಮಾಡಿದ ಅತ್ಯಂತ ಯುವ ಆಟಗಾರ ಎನಿಸಿಕೊಂಡರು.
ಅತ್ಯಂತ ವೇಗದ ಶತಕ: 52 ಎಸೆತಗಳಲ್ಲಿ ಶತಕ ಗಳಿಸಿ, ಪಾಕಿಸ್ತಾನದ ಕಮ್ರಾನ್ ಗುಲಾಮ್ರ 53 ಎಸೆತದ ರೆಕಾರ್ಡ್ ಬ್ರೇಕ್ ಮಾಡಿದ್ದರು. ಆ ಇನ್ನಿಂಗ್ಸ್ನಲ್ಲಿ 78 ಎಸೆತಗಳಲ್ಲಿ 13 ಫೋರ್, 10 ಸಿಕ್ಸರ್ಗಳ ಸಹಿತ 143 ರನ್ ಸಿಡಿಸಿದ್ದರು. ಅವರು ಯೂತ್ ODI ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ವಿಶ್ವದಾಖಲೆ ಕೂಡ ಬರೆದಿದ್ದರು.
ಶತಕ ಸಿಡಿಸಿದ ಅತ್ಯಂತ ಕಿರಿಯ : 13 ವರ್ಷಗಳು 188 ದಿನಗಳಲ್ಲಿ ಶತಕ ಗಳಿಸಿ, 170 ವರ್ಷಗಳ ಕ್ರಿಕೆಟ್ ಇತಿಹಾಸದ ಅತ್ಯಂತ ಕಿರಿಯ ಶತಕಗಾರ ಎನಿಸಿಕೊಂಡಿದ್ದರು.
IPL ಸಾಧನೆಗಳು : 2025ರ IPLಯಲ್ಲಿ ರಾಜಸ್ಥಾನ್ ರಾಯಲ್ಸ್ಗಾಗಿ ಡೆಬ್ಯೂ ಮಾಡಿದ ಸೂರ್ಯವಂಶಿ, ಲೀಗ್ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಎನಿಸಿಕೊಂಡರು. ವೈಭವ್ 14 ವರ್ಷಕ್ಕೆ ಈ ಸಾಧನೆ ಮಾಡಿದ್ದರಯ. ಅಲ್ಲದೆ 38 ಎಸೆತಗಳಿಗೆ ಶತಕ ಸಿಡಿಸುವ ಮೂಲಕ ಐಪಿಎಲ್ನಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
ಸೂರ್ಯವಂಶಿ 2025ರಲ್ಲಿ ಇಂಗ್ಲೆಂಡ್ U-19 ವಿರುದ್ಧ 5 ಯೂತ್ ODIಗಳಲ್ಲಿ 355 ರನ್ (ಸ್ಟ್ರೈಕ್ ರೇಟ್ 174.02) ಗಳಿಸಿ ಸರಣಿ 3-2ರಲ್ಲಿ ಗೆಲುವು ತಂದಿದ್ದರು.
September 24, 2025 4:11 PM IST