Last Updated:
ರಾಜಸ್ಥಾನದ ಪರ ಆರಂಭಿಕನಾಗಿ 14 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಶನಿವಾರ (ಏಪ್ರಿಲ್ 19) ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ರೋಚಕ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ 180 ರನ್ ಗಳಿಸಿತು. 181 ರನ್ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನದ ಪರ ಆರಂಭಿಕನಾಗಿ 14 ವರ್ಷದ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇನ್ನೂ ವೈಭವ್ ಸೂರ್ಯವಂಶಿ ಆಡಿದ 20 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಗಾಯದಿಂದ ತಂಡದಿಂದ ಹೊರಗುಳಿದ ಸಂಜು ಸ್ಯಾಮ್ಸನ್ ಬದಲಿಗೆ ಹರಾಜಿನಲ್ಲಿ 1.10 ಕೋಟಿ ರೂಪಾಯಿಗೆ ರಾಜಸ್ಥಾನ ತಂಡ ಕೂಡಿಕೊಂಡಿದ್ದ ಸೂರ್ಯವಂಶಿ ತಮ್ಮ ಚೊಚ್ಚಲ ಪಂದ್ಯ ಆಡಿದರು.
ಇನ್ನೂ, ಸೂರ್ಯವಂಶಿ ತಾವು ಎದುರಿಸಿದ ಮೊದಲ ಎಸೆತವನ್ನು, ಶಾರ್ದೂಲ್ ಠಾಕೂರ್ ಅವರಿಗೆ ಸಿಕ್ಸರ್ ಭಾರಿಸುವ ಮೂಲಕ ಐಪಿಎಲ್ ಜರ್ನಿ ಆರಂಭಿಸಿದರು. ಮಾತ್ರವಲ್ಲ ಐಪಿಎಲ್‌ನಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಭಾರಿಸಿದ 10ನೇ ಆಟಗಾರ ಎನಿಸಿಕೊಂಡರು.
ಇದನ್ನೂ ಓದಿ: LSG vs RR: ಪದಾರ್ಪಣಾ ಪಂದ್ಯದಲ್ಲೇ 14 ವರ್ಷದ ಆಟಗಾರನ ಆರ್ಭಟ! ರಾಜಸ್ಥಾನ್ ರಾಯಲ್ಸ್ ಪರ ಚೊಚ್ಚಲ ಪಂದ್ಯದಲ್ಲೇ ವೈಭವ್ ಇತಿಹಾಸ
ಇದಕ್ಕೂ ಮೊದಲು ಆಡಿದ ಮೊದಲ ಎಸೆತದಲ್ಲಿ ಸಿಕ್ಸರ್ ಭಾರಿಸಿದ ಆಟಗಾರರನ್ನು ನೋಡುವುದಾದ್ರೆ, ರಾಬ್ ಕ್ಯೂನಿ (ರಾಜಸ್ಥಾನ), ಕೆವೊನ್ ಕೂಪರ್ (ರಾಜಸ್ಥಾನ), ಅಂಡ್ರೆ ರಸೆಲ್ (ಕೆಕೆಆರ್), ಕಾರ್ಲೋಸ್ ಬ್ರಾಥ್ವೈಟ್ (ಡೆಲ್ಲಿ), ಅನಿಕೇತ್ ಚೌದರಿ (ಆರ್‌ಸಿಬಿ), ಜಾವೋನ್ ಸೀರ್‌ಲೆಸ್ (ಕೆಕೆಆರ್), ಸಿದ್ದೇಶ್ ಲಾಡ್ (ಮುಂಬೈ), ಮತೀಶ ಪತಿರಾಣ (ಸಿಎಸ್‌ಕೆ), ಸಮೀರ್ ರಿಜ್ವಿ (ಸಿಎಸ್‌ಕೆ) ಹಾಗೂ ಇಂದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ (ರಾಜಸ್ಥಾನ) ಈ ಎಲ್ಲಾ ಆಟಗಾರರು ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲಿ ಸಿಕ್ಸರ್ ಭಾರಿಸಿದ್ದಾರೆ.
ಈ ನಡುವೆ ಒಂಬತ್ತನೇ ಓವರ್‌ನಲ್ಲಿ ಸೂರ್ಯವಂಶಿ 20 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು, ಐಡೆನ್ ಮಾರ್ಕ್ರಾಮ್ ಅವರ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆಗಿ ಹೊರನಡೆದರು. ಈ ವೇಳೆ ಪೆವಿಲಿಯನ್‌ನತ್ತ ಹೋಗುವಾಗ ಸೂರ್ಯವಂಶಿ ಬೇಸರಗೊಂದು ಕಣ್ಣೀರು ಹಾಕಿದ ಘಟನೆ ಕೂಡ ನಡೆಯಿತು.
Vaibhav suryavanshi is crying when he is going back to dugout after getting out 😭 . Very emotional moment for him 🌟.#LSGvRR #RRvsLSG pic.twitter.com/WLYFhst8o0
— Ashish (@Ashish_2__) April 19, 2025
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹೊಟ್ಟೆಯ ಗಾಯದಿಂದಾಗಿ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಸಂಜು ಸ್ಯಾಮ್ಸನ್ ತಪ್ಪಿಸಿಕೊಂಡಿದ್ದು, ಸಂಜು ಬದಲಿಗೆ ಸೂರ್ಯವಂಶಿ ತಂಡಕ್ಕೆ ಇಂಪ್ಯಾಕ್ಟ್ ಸಬ್ ಆಗಿ ಆಡಿದರು. ಮೊದಲ ಮೂರು ಪಂದ್ಯಗಳಲ್ಲಿ ಆರ್‌ಆರ್ ಅನ್ನು ಮುನ್ನಡೆಸಿದ್ದ ಬಲಗೈ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಈ ಪಂದ್ಯದಲ್ಲಿ ಮತ್ತೊಮ್ಮೆ ಆರ್‌ಆರ್ ಅನ್ನು ಮುನ್ನಡೆಸಿದರು.
April 20, 2025 6:47 AM IST