Last Updated:
ಬಾಲಿವುಡ್ ನಟಿ ಮತ್ತು ಪಂಜಾಬ್ ಕಿಂಗ್ಸ್ ಸಹ-ಮಾಲೀಕಿ ಪ್ರೀತಿ ಜಿಂಟಾ ಅವರು ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷದ ಯುವಕ ವೈಭವ್ ಸೂರ್ಯವಂಶಿ ಅವರೊಂದಿಗೆ ಇರುವ ಚಿತ್ರಗಳು ವೈರಲ್ ಆಗುತ್ತಿವೆ. ಈ ಕುರಿತು ಜಿಂಟಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವೈಭವ್ ಸೂರ್ಯವಂಶಿ (Vaibhav Suryavamshi) ಸದ್ಯ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿರುವ ಯುವ ಆಟಗಾರ. ಗುಜರಾತ್ ಟೈಟನ್ಸ್ (Gujarat Titans) ವಿರುದ್ಧದ ಪಂದ್ಯದಲ್ಲಿ ವೀರಾವೇಶದ ಶತಕ ಸಿಡಿಸಿದ ಬಳಿಕ ಈ 14 ವರ್ಷದ ಆಟಗಾರ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪಂಜಾಬ್ ಕಿಂಗ್ಸ್ ಒಡತಿ ಪ್ರೀತಿ ಝಿಂಟಾ (Preethi Zinta) ಜೊತೆಗಿನ ಫೋಟೋ ಒಂದು ವೈರಲ್ ಆಗುವ ಮೂಲಕ ಸುದ್ದಿಯಲ್ಲಿದ್ದಾರೆ.
ಸೂರ್ಯವಂಶಿ ಜೊತೆಗಿನ ಝಿಂಟಾ ಫೋಟೋ ವೈರಲ್
ಬಾಲಿವುಡ್ ನಟಿ ಮತ್ತು ಪಂಜಾಬ್ ಕಿಂಗ್ಸ್ ಸಹ-ಮಾಲೀಕಿ ಪ್ರೀತಿ ಜಿಂಟಾ ಅವರು ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷದ ಯುವಕ ವೈಭವ್ ಸೂರ್ಯವಂಶಿ ಅವರೊಂದಿಗೆ ಇರುವ ಚಿತ್ರಗಳು ವೈರಲ್ ಆಗುತ್ತಿವೆ. ಪಂಜಾಬ್ ಮತ್ತು ರಾಜಸ್ಥಾನ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ 2025 ಪಂದ್ಯದ ನಂತರ ಪ್ರೀತಿ ವೈಭವ್ ಅವರನ್ನು ಭೇಟಿಯಾದರು. ಇಬ್ಬರ ನಡುವಿನ ಪಂದ್ಯದ ನಂತರ, ಭೇಟಿಯ ಚಿತ್ರಗಳನ್ನು ಸೇರಿಸಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ. ಸದ್ಯ ಅವರ ಜೊತೆಗಿನ ಫೋಟೋ ವೈರಲ್ ಆಗಿದ್ದಕ್ಕೆ ಪ್ರೀತಿ ಝಿಂಟಾ ಕಿಡಿಕಾರಿದ್ದಾರೆ.
ಪ್ರೀತಿ ಜಿಂಟಾ ಕೋಪಕ್ಕೆ ಕಾರಣವೇನು?
ವೈಭವ್ ಸೂರ್ಯವಂಶಿ ಜೊತೆಗಿರುವ ತಮ್ಮ ಅಸಲಿ ಅಲ್ಲದ ಮಾರ್ಫ್ ಮಾಡಿದ ಚಿತ್ರವನ್ನು ನೋಡಿದ ನಂತರ ಪ್ರೀತಿ ಜಿಂಟಾ ಕೋಪಗೊಂಡಿದ್ದಾರೆ. ಚಿತ್ರ ವೈರಲ್ ಆಗುತ್ತಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ಆಕೆ ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಅಪ್ಪಿಕೊಂಡಿದ್ದಾಳೆಂದು ತಪ್ಪಾಗಿ ಅರ್ಥೈಸುವಂತಹ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ.
This is a morphed image and fake news. Am so surprised now news channels are also using morphed images and featuring them as news items !
— Preity G Zinta (@realpreityzinta) May 20, 2025
ಸುಳ್ಳು ಫೋಟೋ ವೈರಲ್
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ನಂತರ ಈ ವೈರಲ್ ಫೋಟೋ ಇತ್ತೀಚೆಗೆ ಕಾಣಿಸಿಕೊಂಡಿತು. ಕೆಲವು ಸುದ್ದಿ ವಾಹಿನಿಗಳು ಸಹ ಇದನ್ನು ಅಧಿಕೃತವೆಂದು ಪರಿಗಣಿಸಿ ತಮ್ಮ ಕಾರ್ಯಕ್ರಮಗಳಲ್ಲಿ ಪ್ರಸಾರ ಮಾಡಿದವು. ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಈ ಚಿತ್ರ ಸಂಪೂರ್ಣವಾಗಿ ಸುಳ್ಳು” ಎಂದು ಬರೆದುಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್‌ನ ಅಧಿಕೃತ ಖಾತೆಯಿಂದ X ನಲ್ಲಿ ಪೋಸ್ಟ್ ಮಾಡಲಾದ ಮೂಲ ದೃಶ್ಯಾವಳಿ. ಅವರ ಕ್ಲಿಪ್‌ಗೆ “ಸ್ಕೂಲ್ ಮೇನ್ ಫ್ಲೆಕ್ಸ್ ಲೆವೆಲ್ ವೈಭವ್ ಸೂರ್ಯವಂಶಿ” ಎಂಬ ಶೀರ್ಷಿಕೆ ನೀಡಲಾಗಿತ್ತು. ಇದು ಪ್ರೀತಿ ಮತ್ತು ಯುವ ಕ್ರಿಕೆಟಿಗ ನಡುವಿನ ಸಣ್ಣ ಮತ್ತು ಗೌರವಾನ್ವಿತ ಭೇಟಿಯನ್ನು ತೋರಿಸಿತ್ತು.
ವಿಡಿಯೋದಲ್ಲಿ, ಪ್ರೀತಿ ಮೊದಲು ರಾಜಸ್ಥಾನ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿ ನಂತರ ಪಂಜಾಬ್ ಕಿಂಗ್ಸ್ ಆಟಗಾರ ಶಶಾಂಕ್ ಸಿಂಗ್ ಅವರನ್ನು ಭೇಟಿಯಾಗುತ್ತಾರೆ. ನಂತರ ಅವರು “ಅವನನ್ನು ಭೇಟಿಯಾಗೋಣ” ಎಂದು ಹೇಳಿ ವೈಭವ್ ಕಡೆಗೆ ಬೆರಳು ತೋರಿಸುತ್ತಾರೆ. ಇದಾದ ನಂತರ, ಪ್ರೀತಿ ಮತ್ತು ವೈಭವ್ ನಡುವೆ ಒಂದು ಸಣ್ಣ ಮಾತುಕತೆ ನಡೆಯುತ್ತದೆ, ಅದರಲ್ಲಿ ಇಬ್ಬರೂ ಕೈಕುಲುಕುತ್ತಾರೆ. ವೈರಲ್ ಆಗುತ್ತಿರುವ ಚಿತ್ರದಲ್ಲಿ ಇಬ್ಬರು ಅಪ್ಪಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಈ ಸಂಭಾಷಣೆಯ ಸಮಯದಲ್ಲಿ “ಕೋಯಿ ಮಿಲ್ ಗಯಾ” ಹಾಡು ಹಾಕಿ ವೈರಲ್ ಮಾಡಲಾಗಿದೆ.
May 20, 2025 10:17 PM IST