Last Updated:
14 ವರ್ಷದ ವೈಭವ್ ಸೂರ್ಯವಂಶಿ, ಸೆಹ್ವಾಗ್ ಅವರ ಟೀಕೆಗೆ ತಿರುಗೇಟು ನೀಡಿ, ಗುಜರಾತ್ ವಿರುದ್ಧ 38 ಎಸೆತಗಳಲ್ಲಿ 101 ರನ್ ಗಳಿಸಿದರು. ಈ ಮೂಲಕ ಸೆಹ್ವಾಗ್ ಅವರ ಅಭಿಪ್ರಾಯವನ್ನು ತಪ್ಪು ಎಂದು ಸಾಬೀತು ಪಡಿಸಿದರು.
ಜಸ್ಟ್ 100 ಗಂಟೆಯಲ್ಲಿ 14 ವರ್ಷದ ಹುಡುಗ ಟೀಂ ಇಂಡಿಯಾ (Team India) ದಿಗ್ಗಜ ಆಟಗಾರನಿಗೆ ತಿರುಗೇಟು ನೀಡಿದ್ದಾರೆ. ಹೌದು, ವೈಭವ್ ಸೂರ್ಯವಂಶಿ (Vibhav Suryawanshi) ತನ್ನ ಸಾಮಥ್ರ್ಯವನ್ನು ತೋರಿಸಿದ್ದು, ಸೆಹ್ವಾಗ್ (Virender Sehwag) ಅವರು ಹೇಳಿಕೆ ತಪ್ಪು ಎಂದು ಸಾಬೀತು ಪಡಿಸಿದ್ದಾರೆ. ಐಪಿಎಲ್ ಆಟದಲ್ಲಿ (IPL 2025) ಕೇವಲ ಕೆಲ ಸಮಯ ಮಾತ್ರ ಸಂತೋಷದಿಂದ ಇರಬಬಹುದು ಎಂಬ ಸೆಹ್ವಾಗ್ ಅವರ ಅಭಿಪ್ರಾಯಕ್ಕೆ, 14 ವರ್ಷದ ಬ್ಯಾಟರ್ ತನ್ನ ಬ್ಯಾಟ್ (Batting) ಮೂಲಕವೇ ಉತ್ತರ ನೀಡಿದ್ದಾರೆ. ಆ ಮೂಲಕ ನಿಮ್ಮ ಆಲೋಚನೆಯನ್ನು ಬದಲಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾನೆ. ಏಪ್ರಿಲ್ 28ರ ಸಂಜೆ ಜೈಪುರದಲ್ಲಿ (Jaipur) ನಡೆದ ಪಂದ್ಯದಲ್ಲಿ ವೈಭವ್ ತಮ್ಮ ಸ್ಫೋಟಕ ಆಟದ ಆರಂಭಿಕ ಝಲರ್ ತೋರಿಸಿಕೊಟ್ಟಿದ್ದಾರೆ.
ರಾಜಸ್ಥಾನದ ಗೆಲುವು
ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 101 ರನ್ ಗಳಿಸಿ ವಿಧ್ವಂಸ ಸೃಷ್ಟಿಸಿದ್ದರು. ಆತನ ಬ್ಯಾಟಿಂಗ್ ನೋಡಿದ ಯಾರು ಆದರೂ ಅಂತಹ ಬ್ಯಾಟಿಂಗ್ ಅನ್ನು ಈ ಹಿಂದೆ ನೋಡಿರಲು ಸಾಧ್ಯವೇ ಇಲ್ಲ ಎಂಬಂತೆ ಬ್ಯಾಟ್ ಮಾಡಿದ್ದರು. ಕೇವಲ 14 ವರ್ಷ ವಯಸ್ಸಿನಲ್ಲಿ ಡೇಂಜರ್ಸ್ ಬ್ಯಾಟಿಂಗ್ ನೋಡುವ ಅವಕಾಶವನ್ನ ಪ್ರೇಕ್ಷಕರಿಗೆ ನೀಡಿದ್ದರು. ವೈಭವ್ ಅವರ ಇನ್ನಿಂಗ್ಸ್ ನೋಂದಿಗೆ ರಾಜಸ್ಥಾನ ರಾಯಲ್ಸ್ ತಂಡ ಭಾರೀ ಗೆಲುವು ಪಡೆದುಕೊಂಡಿತ್ತು. ಅಲ್ಲದೇ ಈ ಹಿಂದೆ ಸೆಹ್ವಾಗ್ ಅವರು ನೀಡಿದ್ದ ಹೇಳಿಕೆಗೆ ಬ್ಯಾಟ್ ಮೂಲಕವೇ ವೈಭವ್ ಉತ್ತರಿಸಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ಟೀಂ ಇಂಡಿಯಾ ಸ್ಟಾರ್ ಆಟಗಾರ ಏನು ಹೇಳಿದ್ರು?
ವೀರೇಂದ್ರ ಸೆಹ್ವಾಗ್ ವೈಭವ್ ಸೂರ್ಯವಂಶಿ ಬಗ್ಗೆ ಏನು ಹೇಳಿದ್ದರೂ ಅಂತ ನೋಡುವುದಾದರೆ, ಸೆಹ್ವಾಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ 96 ಗಂಟೆಗಳ ವೇಳೆಗೆ ವೈಭವ್ ಶತಕ ಸಿಡಿಸಿ ಮಿಂಚಿದ್ದಾರೆ. ಇದಕ್ಕೂ ಮುನ್ನ ಅಂದರೆ 4 ದಿನಗಳ ಮುನ್ನ ಏಪ್ರಿಲ್ 24 ರಂದು ರಾಜಸ್ಥಾನ ತಂಡವು ಆರ್‌ಸಿಬಿ ವಿರುದ್ಧ ಪಂದ್ಯವನ್ನು ಆಡಿತು. ಆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಬೇಗನೇ ಔಟ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೆಹ್ವಾಗ್, ವೈಭವ್ ಡೆಬ್ಯೂ ತುಂಬಾ ಚೆನ್ನಾಗಿ ಆಯ್ತು. ಮೊದಲ ಎಸೆತದಲ್ಲೇ ವೈಭವ್ ಸಿಕ್ಸರ್ ಬಾರಿಸಿದ್ದರು. ಆದರೆ ಮುಂದಿನ ವರ್ಷ ಆತ ಆಡುವುದಿಲ್ಲ ಎಂದರೆ ಅಚ್ಚರಿಪಡುವ ಅಗತ್ಯವಿಲ್ಲ ಎಂದು ಹೇಳಿದ್ದರು.
In case you missed it… 🍿🔥pic.twitter.com/rOXwTuxgyX
— Rajasthan Royals (@rajasthanroyals) April 29, 2025
ಕೇವಲ ಒಂದು ಅಥವಾ ಎರಡು ಪಂದ್ಯಗಳಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿ ಖ್ಯಾತಿ ಪಡೆದ ಅನೇಕ ಆಟಗಾರರನ್ನು ನಾನು ನೋಡಿದ್ದೇನೆ. ಏಕೆಂದರೆ ಒಂದು ಎರಡು ಪಂದ್ಯಗಳ ಬಳಿಕ ಅವರು ತಾವು ಸ್ಟಾರ್ ಆಗಿದ್ದಾರೆಂದು ಭಾವಿಸುತ್ತಾರೆ ಎಂದು ಸೆಹ್ವಾಗ್ ಹೇಳಿದ್ದರು. ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ವೈಭವ್, ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸಿ, ಸೆಹ್ವಾಗ್ ಮಾತುಗಳಿಗೆ ರಿವರ್ಸ್ ಕೌಂಟರ್ ನೀಡಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ.
ಇದನ್ನೂ ಓದಿ: Virat Kohli vs KL Rahul: ಕೆಎಲ್ ರಾಹುಲ್ ಎದುರು ಕೊಹ್ಲಿ ಕಾಂತಾರ ಸೆಲೆಬ್ರೇಷನ್; ಬಿದ್ದು ಬಿದ್ದು ನಕ್ಕ ಕರ್ನಾಟಕದ ಆಟಗಾರರು!
ಬ್ಯಾಟಿಂಗ್ ಮೂಲಕವೇ ಸಚಿನ್ ರಂತೆ ತಿರುಗೇಟು
ಅಚ್ಚರಿಯ ವಿಚಾರ ಎಂದರೆ, ಸೆಹ್ವಾಗ್ ಅವರಿಗೆ ವೈಭವ್ ಸೂರ್ಯವಂಶಿ ತನ್ನ ಬ್ಯಾಟಿಂಗ್ ಮೂಲಕ ತಿರುಗೇಟು ನೀಡಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರು ಎಷ್ಟೇ ವಿಮರ್ಶೆಗಳು ಬಂದರೂ ಭಯಪಡದೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದರು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಂತೆಯೇ ಯುವ ಕ್ರಿಕೆಟಿಗ ಕೂಡ ತಾನು ಆಡಲು ಬಂದಿದ್ದೇನೆ, ಯಾರಿಗೂ ಭಯಪಡುವ ಅಗತ್ಯವಿಲ್ಲ ಎಂದು ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.
April 29, 2025 12:06 PM IST