Vaibhav Suryavanshi: ಕೇವಲ 14ನೇ ವಯಸ್ಸಿಗೆ ಒಲಿದ ಉಪನಾಯಕನ ಪಟ್ಟ; ಇತಿಹಾಸ ಸೃಷ್ಟಿಸಲಿರುವ ವೈಭವ್ ಸೂರ್ಯವಂಶಿ ! /Vaibhav Suryavanshi becomes vice-captain of Bihar Ranji Trophy team at the age of 14 | ಕ್ರೀಡೆ

Vaibhav Suryavanshi: ಕೇವಲ 14ನೇ ವಯಸ್ಸಿಗೆ ಒಲಿದ ಉಪನಾಯಕನ ಪಟ್ಟ; ಇತಿಹಾಸ ಸೃಷ್ಟಿಸಲಿರುವ ವೈಭವ್ ಸೂರ್ಯವಂಶಿ ! /Vaibhav Suryavanshi becomes vice-captain of Bihar Ranji Trophy team at the age of 14 | ಕ್ರೀಡೆ

Last Updated:

ಭಾರತದ ಯಂಗ್ ಸ್ಪೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 14ನೇ ವಯಸ್ಸಿಗೆ ಬಿಹಾರ ತಂಡದ ಉಪನಾಯಕರಾಗಿದ್ದಾರೆ.

Vaibhav SuryavanshiVaibhav Suryavanshi
Vaibhav Suryavanshi

ವೈಭವ್ ಸೂರ್ಯವಂಶಿ (Vaibhav Suryavanshi) ಕೇವಲ 14ನೇ ವಯಸ್ಸಿಗೆ ಕ್ರಿಕೆಟ್ (​Cricket) ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಸ್ಪೋಟಕ ಬ್ಯಾಟಿಂಗ್ (Batting) ಮೂಲಕ ಸದ್ದು ಮಾಡುತ್ತಿರುವ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ (Team India) ಪರ ಆಡುವ ಕನಸು ಕಾಣುತ್ತಿದ್ದಾರೆ. ಈ ಕನಸು ನನಸಾಗುವ ದಿನಗಳ ಬಹಳ ದೂರವಿಲ್ಲ. ವೈಭವ್ ಸೂರ್ಯವಂಶಿಗೆ ಸಿಕ್ಕಿರುವ ಈ ಒಂದು ಅವಕಾಶವನ್ನು ಬಳಸಿಕೊಂಡರೆ ಸಾಕು ಟೀಮ್ ಇಂಡಿಯಾ ಪರ ಆಡಲಿದ್ದಾರೆ. ಜನವರಿ 5, 2025 ರಂದು ವೈಭವ್ ಸೂರ್ಯವಂಶಿ ಪಾಟ್ನಾದಲ್ಲಿ ಮುಂಬೈ (Mumbai) ವಿರುದ್ಧ ಬಿಹಾರ (Bihar) ಪರ ರಣಜಿ ಟ್ರೋಫಿ (Ranji Trophy)ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ವೈಭವ್ ಸೂರ್ಯವಂಶಿ ಅವರಿಗೆ ಅದೃಷ್ಟವೊಂದು ಒಲಿದಿದೆ.

ಅಕ್ಟೋಬರ್ 15 ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ 2025-26 ರ ಮೊದಲ ಎರಡು ಪಂದ್ಯಗಳಿಗೆ ವೈಭವ್ ಸೂರ್ಯವಂಶಿ ಅವರನ್ನು ಬಿಹಾರ ತಂಡದ ಉಪನಾಯಕನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ವೈಭವ್ ಸೂರ್ಯವಂಶಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಕ್ರಿಕೆಟ್ ಜಗತ್ತಿರುವ ಈಗಾಗಲೇ ಮಿಂಚುತ್ತಿರುವ ವೈಭವ್ ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ವೈಭಬ್​ಗೆ ಉಪನಾಯಕನ ಪಟ್ಟ

ಪಾಟ್ನಾದ ಮೊಯಿನ್-ಉಲ್-ಹಕ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 15 ರಂದು ಅರುಣಾಚಲ ಪ್ರದೇಶ ಮತ್ತು ಬಿಹಾರ ತಂಡಗಳು ಮುಖಮುಖಿಯಾಗಲಿವೆ. ಇದರೊಂದಿಗೆ ಉಭಯ ತಂಡಗಳು 2025-26ರ ರಣಜಿ ಟ್ರೋಫಿ ಪ್ಲೇಟ್ ಗ್ರೂಪ್ ಅಭಿಯಾನವನ್ನು ಆರಂಭಿಸಲಿವೆ. ಈ ಪಂದ್ಯದ ಮೂಲಕ ವೈಭವ್ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಬಿಹಾರ ತಂಡವನ್ನು ಸಕಿಬುಲ್ ಗನಿ ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ಬ್ಯಾಟಿಂಗ್ ವೈಭವ

ಆಸ್ಟ್ರೇಲಿಯಾದ ಅಂಡರ್-19 ಪ್ರವಾಸದ ವೇಳೆ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಅವರು 78 ಎಸೆತಗಳಲ್ಲಿ ಶತಕ ಗಳಿಸಿ ಮಿಂಚಿದ್ದರು. ಭಾರತ 2-0 ಅಂತರದಲ್ಲಿ ಸರಣಿ ಗೆಲ್ಲಲು ಸೂರ್ಯವಂಶಿ ನೆರವಾಗಿದ್ದರು. ಸೂರ್ಯವಂಶಿ 133 ರನ್‌ಗಳೊಂದಿಗೆ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಆಸ್ಟ್ರೇಲಿಯಾದಲ್ಲಿ ವೈಭವ್ ಉತ್ತಮ ಫಾರ್ಮ್ ಪ್ರದರ್ಶಿಸಿದ ನಂತರ ಅವರಿಗೆ ಬಡ್ತಿ ನೀಡಲಾಗಿದೆ.

ವೃತ್ತಿಜೀವನ

ಸೂರ್ಯವಂಶಿ ಇಲ್ಲಿಯವರೆಗೆ ಐದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ 10 ಇನ್ನಿಂಗ್ಸ್‌ಗಳಲ್ಲಿ 100 ರನ್‌ಗಳನ್ನು ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ 41 ರನ್. ಇದಲ್ಲದೆ, ಸೂರ್ಯವಂಶಿ 2025 ರ ಐಪಿಎಲ್ ಟೂರ್ನಿಯಲ್ಲಿಯೂ ಅಬ್ಬರಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ ಸೂರ್ಯವಂಶಿ 38 ಎಸೆತಗಳಲ್ಲಿ 101 ರನ್ ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದ್ದರು. ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಸೂರ್ಯವಂಶಿ ಐಪಿಎಲ್ 2025 ರಲ್ಲಿ ಆಡಿದ 7 ಪಂದ್ಯಗಳಿಂದ 206.55 ಸ್ಟ್ರೈಕ್ ರೇಟ್‌ನಲ್ಲಿ 252 ರನ್ ಗಳಿಸಿದ್ದರು.